Breaking News

ದೊಡ್ಡೇರಿ : ಮನೆಯಲ್ಲಿ ಬೆಂಕಿ ಅವಘಡ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ದೊಡ್ಡೇರಿಯಲ್ಲಿ ಮನೆಯೊಳಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಭಾಗಶಃ ಹಾನಿಯಾದ ಘಟನೆ ವರದಿಯಾಗಿದೆ.

ದೊಡ್ಡೇರಿಯ ಸರೋಜಿನಿ ಎಂಬವರ ಮನೆ ಇದಾಗಿದ್ದು, ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಮನೆಯವರೆಲ್ಲರೂ ಪಕ್ಕದ ಮನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಬೆಂಕಿ ಹತ್ತಿದ್ದನ್ನು ಕಂಡು ಮನೆಯವರು ಬಂದು ಬೆಂಕಿ ಆರಿಸಿದರು.

ಇಂದು ಬೆಳಗ್ಗೆ ತಹಶೀಲ್ದಾರ್ ಅನಂತಶಂಕರ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಆರ್.ಐ. ಕೊರಗಪ್ಪ ಹೆಗ್ಡೆ, ವಿ.ಎ. ಶರತ್ ಮೊದಲಾದವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕು ಆಡಳಿತದಿಂದ 25 ಕೆ.ಜಿ. ಅಕ್ಕಿ ವಿತರಿಸಲಾಗಿದ್ದು, ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.