Breaking News

ದುಗಲಡ್ಕದಲ್ಲಿ ಪ್ರದೇಶವಾರು ಪಡಿತರ ವಿತರಣೆ

Advt_Headding_Middle
Advt_Headding_Middle

 

ಸುಳ್ಯ ಸಿ.ಎ.ಬ್ಯಾಂಕ್ ನ ದುಗಲಡ್ಕ ಶಾಖೆಯ ವತಿಯಿಂದ ಪಡಿತರ ವಿತರಣೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ.ದುಗಲಡ್ಕ ವ್ಯಾಪ್ತಿಯ ಕಂದಡ್ಕ, ಕೂಟೇಲು, ಕೆದ್ಕಾನ,ದುಗಲಡ್ಕ ಮೊದಲಾದ ಕಡೆಗಳಲ್ಲಿ ಕಾರ್ಡ್ ಹೊಂದಿರುವ ಫಲಾನುಭವಿಗಳ ಮನೆಗಳ ಸಮೀಪಕ್ಕೆ ತೆರಳಿ ಪಡಿತರ ನೀಡಲಾಗುತ್ತಿದೆ.

ಪಡಿತರಅಕ್ಕಿಯನ್ನು ಪಿಕ್ ಅಪ್ ಗಳ ಮುಖಾಂತರ ಸಾಗಿಸಿ ಕಾರ್ಡ್ ದಾರರಿಗೆ ಹಂಚಲಾಗುತ್ತಿದೆ.ಪಡಿತರ ವಿತರಣೆಯೊಂದಿಗೆ ಸಾಮಾಜಿಕ ಅಂತರ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ.
ಪಡಿತರ ವಿತರಣೆ ಯಶಸ್ವಿಯಾಗಿ ನಡೆಯಲು ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್.ಪಿ.ಹಾಗೂ ಆಡಳಿತ ಮಂಡಳಿ ಸದಸ್ಯರು, ಮತ್ತು ಸಿಬ್ಬಂದಿ ವರ್ಗದವರು, ನ.ಪಂ.ಮುಖ್ಯಾಧಿಕಾರಿ ಮತ್ತಡಿ,ಗ್ರಾಮ ಲೆಕ್ಕಾಧಿಕಾರಿ ಹಾಗೂ ನಗರ ಪಂಚಾಯತ್ ಸ್ಥಳೀಯ ಸದಸ್ಯರುಗಳಾದ ಬಾಲಕೃಷ್ಣ ರೈ ದುಗಲಡ್ಕ, ಶಶಿಕಲಾ ನೀರಬಿದಿರೆ,ನಗರ ಪಂಚಾಯತ್ ಸಿಬ್ಬಂದಿ ವರ್ಗದವರು,ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.