ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗಲು ಆದೇಶ

Advt_Headding_Middle
Advt_Headding_Middle

 

ಕಾರ್ಮಿಕರ ಮತ್ತು ಸಂಘಟನೆಗಳ ಅಸಮಾಧಾನ

ಆನೆಗುಂಡಿ, ಸುಬ್ರಹ್ಮಣ್ಯ, ಕಾರಿಂಜದ 39 ಕಾರ್ಮಿಕರು ಹಾಜರು – ಉಳಿದವರು ಗೈರು

ಕೊರೊನಾ ಹಿನ್ನಲೆಯಲ್ಲಿ ಭಾರತವೇ ಲಾಕ್ ಡೌನ್ ಆಗಿದ್ದು, ಅರಣ್ಯ ಇಲಾಖೆಯನ್ನು ಅಗತ್ಯ ಸೇವೆ ಎಂದು ಗುರುತು ಮಾಡಿರುವ ಸರಕಾರ, ಆ ಇಲಾಖೆಯಡಿ ಕೆಲಸ ಮಾಡುವ ಕೆ.ಎಫ್.ಡಿ.ಸಿ. ನೌಕರರು ಕೆಲಸಕ್ಕೆ ಹಾಜರಾಗುವಂತೆ ನಿನ್ನೆ ಆದೇಶ ಮಾಡಿದ್ದು ಇದರಿಂದ ನೌಕರರು ಅಸಮಾಧಾನಗೊಂಡಿದ್ದಾರೆ.

ಈ ಆದೇಶ ಹಿನ್ನಲೆಯಲ್ಲಿ ಇಂದು ಆನೆಗುಂಡಿ, ಕಾರಿಂಜ ಮತ್ತು ಸುಬ್ರಹ್ಮಣ್ಯ ಸೇರಿ ಒಟ್ಟು 39 ಮಂದಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದು ಉಳಿದವರು ಕೆಲಸಕ್ಕೆ ಹೋಗದೆ ದೂರ ಉಳಿದಿದ್ದಾರೆ.

ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶ ಆದಂದಿನಿಂದ ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರಿಗೂ ರಜೆ ನೀಡಲಾಗಿತ್ತು. ಆದರೆ ಎ.8 ರಂದು ಸರಕಾರ ಆದೇಶವೊಂದನ್ನು ಹೊರಡಿಸಿದ್ದು ಅರಣ್ಯ, ಪರಿಸರ, ಮತ್ತು ಜೀವಶಾಸ್ತ್ರ ಇಲಾಖೆ ಈ ಸಂದರ್ಭದಲ್ಲಿ ಅಗತ್ಯ ಸೇವೆಯ ಪಟ್ಟಿಯಲ್ಲಿ ಸೇರಿ ಬರುವುದರಿಂದ ಆ ಇಲಾಖೆಯ ಲ್ಲಿ ದುಡಿಯುವ ಕಾರ್ಮಿಕರು ಕೆಲಸಕ್ಕೆ ಹಾಜರಾಗುವಂತೆ ಆದೇಶ ಮಾಡಲಾಗಿತ್ತು.

ಈ ಆದೇಶದ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನರುವ 1200 ರಷ್ಟು ಕಾರ್ಮಿಕರಿಗೆ ಆಯಾ ಪ್ಲಾಂಟೇಷನ್ ಸುಪರ್ ವೈಸರ್ ಮೂಲಕ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಯಿತು.
ಆದರೆ ಕೊರೊನಾ ವೈರಸ್ ಇರುವುದರಿಂದ ಕೆಲಸಕ್ಕೆ ಹಾಜರಾಗಲು ಅಸಮಾಧಾನ ವ್ಯಕ್ತಪಡಿಸಿದರು. ಇಂದು ಆನೆಗುಂಡಿ, ಕಾರಿಂಜ ಮತ್ತು ಸುಬ್ರಹ್ಮಣ್ಯ ಪ್ಲಾಂಟೇಷನ್ ನಲ್ಲಿ ಒಟ್ಟು 39 ಮಂದಿ ಮಾತ್ರ ಹಾಜರಾಗಿದ್ದಾರೆ.

“ನಮಗೆ ಬಂದಿರುವ ಆದೇಶವನ್ನು ಕಾರ್ಮಿಕರಿಗೆ ತಿಳಿಸಿದ್ದೇವೆ. ಆದರೆ ಇಂದು 39 ಜನ ಕೆಲಸಕ್ಕೆ ಬಂದಿದ್ದಾರೆ” ಎಂದು ಕೆ.ಎಫ್.ಡಿ.ಸಿ ಸುಳ್ಯ ಮತ್ತು ಐವರ್ನಾಡು ರಬ್ಬರ್ ವಿಭಾಗಿಯ ವ್ಯವಸ್ಥಾಪಕರಾದ ರಂಗನಾಥರು ತಿಳಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.