ಬಿ.ಪಿ.ಎಲ್. ಕುಟುಂಬದವರಿಗೆ ನ.ಪಂ.ನಿಂದ ಫುಡ್ ಕಿಟ್ ಗೆ ನಿರ್ಧಾರ

Advt_Headding_Middle
Advt_Headding_Middle

 

ಅಶಕ್ತ ಎ.ಪಿ.ಎಲ್.ನವರಿಗೂ ನೀಡಲು ಚಿಂತನೆ

ದಾನಿಗಳು, ವರ್ತಕರು ಮತ್ತು ಪಂಚಾಯತ್ ನಿಧಿ ಬಳಕೆ

ನ.ಪಂ.ಸಭೆಯಲ್ಲಿ ಅಧಿಕಾರಿಗಳಿಗೆ ಸದಸ್ಯರ ಸಲಹೆ


ಬಿ.ಪಿ.ಎಲ್. ಕಾರ್ಡ್ ಹೊಂದಿರುವ ನಗರದ ನಿವಾಸಿಗಳಿಗೆ ಫುಡ್ ಕಿಟ್ ನೀಡಲು ನ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅಶಕ್ತ ಎ.ಪಿ.ಎಲ್. ಕುಟುಂಬ ಗಳಿಗೂ ಕಿಟ್ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯು ನಗರ ಪಂಚಾಯತ್ ಆಡಳಿತಾಧಿಕಾರಿ ಅನಂತಶಂಕರ್ ರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಮುಖ್ಯಾಧಿಕಾರಿ ಮತ್ತಡಿ ಸೇರಿದಂತೆ ನ.ಪಂ. ಸದಸ್ಯ ರುಗಳಾದ ವಿನಯ ಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಡೇವಿಡ್ ಧೀರ ಕ್ರಾಸ್ತ, ಬಾಲಕೃಷ್ಣ ರೈ, ಶರೀಫ್ ಕಂಠಿ, ಬುದ್ಧ ನಾಯ್ಕ, ನಾರಾಯಣ ಶಾಂತಿ ನಗರ, ಉಮ್ಮರ್ ಕೆ.ಎಸ್, ಸುಶೀಲ ಕಲ್ಲುಮುಟ್ಲು, ಶಿಲ್ಪ ಸುದೇವ್, ಪೂಜಿತ ಕೆ.ಯು., ವಾಣಿ ಜಟ್ಟಿಪಳ್ಳ, ಸರೋಜಿನಿ ಪೆಲತಡ್ಕ, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಪ್ರವಿತ ಪ್ರಶಾಂತ್ ಇದ್ದರು.

ಸಭೆ ಆರಂಭವಾಗುತ್ತಿದ್ದಂತೆ ಮುಖ್ಯಾಧಿಕಾರಿ ಮತ್ತಡಿಯವರು ಕೋವಿಡ್ 19 ವಿಚಾರದಲ್ಲಿ ಆಗಬೇಕಾದ ಕೆಲಸದ ಕುರಿತು ಸಭೆ ಕರೆದಿರುವ ಕುರಿತು ಹೇಳಿದರು. ಆಗ ಮಾತನಾಡಿದ ಸದಸ್ಯ ವಿನಯ್ ಕುಮಾರ್ ಕಂದಡ್ಕರು, “ಪ್ರತಿ ಬಾರಿ ಸಭೆ ನಡೆಸುತ್ತೇವೆ. ಆದರೆ ಇಲ್ಲಿ ಎಷ್ಟರ ಮಟ್ಟಿಗೆ ಕೆಲಸ ಆಗುತ್ತದೆ ಎನ್ನುವುದು ನೋಡ ಬೇಕಾಗಿದೆ. ನಗರದಲ್ಲಿ ರೇಶನ್ ಕಾರ್ಡ್ ರಹಿತರ ಪಟ್ಟಿ ಆಗಿದಾ?, ರೇಶನ್ ಕಾರ್ಡ್ ಇದ್ದು ಪಡಿತರ ಸಿಗದಿರುವ ಕುರಿತು ಅಂತವರಿಗೆ ಯಾವ ವ್ಯವಸ್ಥೆ ಆಗಿದೆ, ತುರ್ತು ಸಂದರ್ಭದಲ್ಲಿ ನಾವೇನು ಮಾಡಬೇಕು ಅದನ್ನು ಮಾಡಿದ್ದೇವ? ಎಂದು ಅಧಿಕಾರಿಗಳ ನ್ನು ಪ್ರಶ್ನಿಸಿದರಲ್ಲದೆ, ವರ್ತಕರ ಸಭೆ ಯಾಕೆ ಕರೆದಿಲ್ಲ? ಯಾವ ದಾನಿಗಳಿಂದ ಸಹಾಯ ಕೇಳಬಹುದೆಂದು ನೋಡಿದ್ದೀರಾ? ಇತ್ಯಾದಿ ವಿಚಾರ ಪ್ರಸ್ತಾಪಿಸಿದ ರಲ್ಲದೆ, ಎಂ.ಬಿ.ಫೌಂಡೇಶನ್ ನವರು ವಲಸೆ ಕಾರ್ಮಿಕರ ರಿಗೆ ವ್ಯವಸ್ಥೆ ಮಾಡದಿರುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವ ಯೋಚನೆ ಮಾಡಿದ್ದೀರ ಎಂದು ಕೇಳಿದರು. ನಾವು ಸದಸ್ಯರು ನಮ್ಮ ನಮ್ಮ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ನ.ಪಂ.ನಿಂದ ಎಷ್ಟು ಆಗುತ್ತಿದೆ ಎನ್ನುವುದು ಬೇಕಾಗಿದೆ ಎಂದರು.

ಅವರ ಮಾತಿಗೆ ಪೂರಕವಾಗಿ ಮಾತನಾಡಿದ ಎಂ.ವೆಂಕಪ್ಪ ಗೌಡರು ” ಶಾಸಕರು ಅನಾರೋಗ್ಯದಲ್ಲಿದ್ದಾರೆ. ಆದ್ದರಿಂದ ಅವರನ್ನು ಕೇಳಲು ಆಗುವುದಿಲ್ಲ. ಅವರ ಜವಾಬ್ದಾರಿ ಯನ್ನು ಈ ಸಂದರ್ಭದಲ್ಲಿ ಅಧಿಕಾರಿಗಳು ನಿಭಾಯಿಸಬೇಕು ಎಂದು ಹೇಳಿದರಲ್ಲದೆ, ಅಸಂಘಟಿತ ಕಾರ್ಮಿಕರಿಗೆ ಊಟ ನೀಡುವ ಕುರಿತು ಇಲ್ಲಿ ನಿರ್ಣಯ ಆಗಿದ್ದರೂ ಮರದಿನ ಅದೇ ಕಾರ್ಮಿಕರನ್ನು ಕರೆದು ಪಡಿತರ ನೀಡಿದ್ದೀರಿ. ಹೇಳಿದಂತೆ ಕೆಲಸ ಗಳು ಆಗುತ್ತಿಲ್ಲ. ಎಂ.ಬಿ.ಫೌಂಡೇಶನ್ ನವರು ಮಾಡುವ ಕೆಲಸಕ್ಕೆ ನ.ಪಂ.ನಿಂದಲೂ ಸಹಕಾರ ನೀಡಬೇಕು ಎಂದು ಹೇಳಿದರು. ಮತ್ತೂ ಮಾತು ಮುಂದುವರಿಸಿದ ಅವರು ಸರಕಾರ ಗಳು ತರುವ ಯೋಜನೆ ಜನರಿಗೆ ತಲುಪುವಂತೆ ಅಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು. ಇಲ್ಲಿ ಚರ್ಚೆಯಾಗುವ ಕೆಲಸ ಸರಿಯಾಗಿ ಅನುಷ್ಠಾನ ಆಗು ವುದಾದರೆ ನಾವು ಸಹಕರಿಸುತ್ತವೆ. ನೀವೆ ಮಾಡದಿದ್ದರೆ ನಾವು ಸಭೆಗೆ ಬರುವುದಿಲ್ಲ. ಜನರಿಗಾಗಿ ಈ ಸಂದರ್ಭದಲ್ಲಿ ಕೆಲಸ ಮಾಡೋಣ” ಎಂದರು.

ಇಬ್ಬರು ಸದಸ್ಯರು ಮಾತನಾಡಿದ ಬಳಿಕ ಮಾತನಾಡಿದ ಮುಖ್ಯಾಧಿಕಾರಿ “ನಾವು ವಲಸೆ ಕಾರ್ಮಿಕರ ಪಟ್ಟಿ ಮಾಡಿದ್ದೇವೆ.ಕಿಟ್ ವಿತರಣೆ, ನಗರದಲ್ಲಿ ಕೀಟ ನಾಶಕ ಸಿಂಪಡಣೆ, ಜನಜಾಗೃತಿ ಕೆಲಸಗಳನ್ನು ಮಾಡಿದ್ದೇವೆ. ಎಲ್ಲಿಯೂ ಪ್ರಚಾರಕ್ಕಾಗಿ ಮಾಡಿಲ್ಲ. ಎಂ.ಬಿ. ಫೌಂಡೇಶನ್ ನವರಿಗೆ ಸಹಕಾರ ನೀಡಲು ಈಗಲೂ ಬದ್ದ. ಆದರೆ ಈಗ ಅವರು ಮತ್ತು ಕಾರ್ಮಿಕರ ಸಂಘಟನೆ ಗಳು ಕೆಲಸ ಮಾಡುತ್ತಿದ್ದೂ ನಾವು ಸಹಕಾರ ನೀಡೋಣ” ಎಂದರು. ತಹಶೀಲ್ದಾರ್ ಅನಂತಶಂಕರ್ ಕೂಡಾ ಸಹಕಾರ ನೀಡುವ ಕುರಿತು ಮಾತನಾಡಿದರು.
ಸದಸ್ಯ ಶರೀಫ್ ಕಂಠಿ ಎಂ.ಬಿ.ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರು ನಡೆಸುತ್ತಿರುವ ಕಾರ್ಯದ ಕುರಿತು ಮತ್ತು ತಗಲುವ ಖರ್ಚಿನ ಬಗ್ಗೆ ಸಭೆಗೆ ತಿಳಿಸಿದರು.
ವಾರ್ಡ್ ವ್ಯಾಪ್ತಿ ಆಹಾರ ಸಮಸ್ಯೆ ಕುರಿತು ಬಾಲಕೃಷ್ಣ ರೈ, ಉಮ್ಮರ್ ಕೆ.ಎಸ್., ಬುದ್ದ ನಾಯ್ಕ್, ಡೇವಿಡ್ ಧೀರ ಕ್ರಾಸ್ತ ಮಾತನಾಡಿದರು. ಬಳಿಕ ಚರ್ಚೆ ನಡೆದು “ಫುಡ್ ಕಿಟ್ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಾಯಿತು. ಬಿ.ಪಿ.ಎಲ್ ಕಾರ್ಡ್ ದಾರರು ಮತ್ತು‌ ಬಡವರು ಹಾಗೂ ಅಗತ್ಯ ವಿರುವ ಎ.ಪಿ.ಎಲ್. ಕಾರ್ಡ್ ದಾರರಿಗೂ ಕಿಟ್ ನೀಡುವ ಕುರಿತು ನಿರ್ಣಯಕೈಗೊಳ್ಳಲಾಯಿತು. ಇದಕ್ಕಾಗಿ ವರ್ತಕರ, ದಾನಿಗಳ ಮತ್ತು ಪಂಚಾಯತ್ ಸ್ವಂತ ನಿಧಿ ಬಳಕೆಗೆ ನಿರ್ಧಾರ ಕೈಗೊಳ್ಳಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.