ಪುಡ್ ಕಿಟ್ ಅಕ್ಕಿ ಮರಳಿ ಅಂಗಡಿಗೆ – ಆರೋಪ

Advt_Headding_Middle
Advt_Headding_Middle

 

ಸುಳ್ಯ ದೇವಸ್ಥಾನದಿಂದ ಅಸಹಕಾರ

ನ.ಪಂ.ಸಭೆಯಲ್ಲಿ ಸದಸ್ಯರ ಅಸಮಾಧಾನ

ವಲಸೆ ಕಾರ್ಮಿಕರಿಗೆ ಊಟ ನೀಡುವ ಕುರಿತು ಇಲ್ಲಿ ನಿರ್ಣಯವಾಗುದ್ದರೂ ಫುಡ್ ಕಿಟ್ ನೀಡಿರುವ ತಾಲೂಕು ಆಡಳಿತ ದ ಕ್ರಮವನ್ನು ಸದಸ್ಯರು ಇಂದು ನಡೆದ ನ.ಪಂ. ಸಭೆಯಲ್ಲಿ ಪ್ರಶ್ನಿಸಿರಲ್ಲದೆ, ಆ ಕಿಟ್ ನಲ್ಲಿದ್ದ ಅಕ್ಕಿ ಮರಳಿ ಅಂಗಡಿಗೆ ಹೋಗುತ್ತಿದೆ ಎಂದು ಆರೋಪಿಸಿದ ಪ್ರಸಂಗವೂ ನಡೆಯಿತು.

ಪಡಿತರ ನೀಡುವ ವಿಚಾರ ಚರ್ಚೆ ಯಲ್ಲಿರುವಾಗ ಮಾತನಾಡಿದ ಸದಸ್ಯ ಉಮ್ಮರ್ ರವರು “ವಲಸೆ ಕಾರ್ಮಿಕರಿಗೆ ಅಡುಗೆ ತಯಾರಿಸಿ ಕೊಡುವ ಕುರಿತು ಇಲ್ಲಿ ನಿರ್ಣಯವಾಗಿದ್ದ ಮೇಲೂ ಅದೇ ಕಾರ್ಮಿಕರಿಗೆ ಫುಡ್ ಕಿಟ್ ನೀಡಿದ್ದೀರಿ. ಅದೇ ಕಾರ್ಮಿಕರು ತಯಾರಿಸಿ ದ ಆಹಾರ ಪೊಟ್ಟಣವನ್ನು ಪಡೆಯುತ್ತಿದ್ದಾರೆ. ಕಿಟ್ ನಲ್ಲಿದ್ದ ಅಕ್ಕಿ ಅಂಗಡಿಗಳಿಗೆ ಹೋಗುತ್ತಿದೆ ಎಂದು ಆರೋಪಿಸಿದರಲ್ಲದೆ, ಮಿಸ್ ಯೂಸ್ ಆಗಲು ಅವಕಾಶ ನೀಡಿದ್ದೀರಿ ಎಂದು ಆರೋಪಿಸಿದರು.
ಆಗ ಮಾತನಾಡಿದ ತಹಶೀಲ್ದಾರ್ ಅನಂತಶಂಕರ್ “ಫುಡ್ ಕಿಟ್ ನೀಡಿದ್ದೇವೆ. ಅದು ಅಂಗಡಿಗಳಿಗೆ ಹೋಗುತ್ತಿದೆ, ಮಿಸ್ ಯೂಸ್ ಆಗುತ್ತಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ಎ.2ರಿಂದ ಅಡುಗೆ ತಯಾರು ಮಾಡಿದ್ದಾರೆ. ನಾವು 1ನೇ ತಾರೀಕಿಗೆ ಕಿಟ್ ನೀಡಿದ್ದು. ಆ ದಿನ ಊಟ ಮಾಡಬೇಕಲ್ಲವೆ. ಮತ್ತು ಯಾರಿಗೆ ಕೊಟ್ಟಿದ್ದೆವೆಯೊ ಅಂತವರ ಆಧಾರ್ ಕಾರ್ಡ್ ನಂಬರ್ ಮತ್ತು ದಾಖಲೆ ಪಡೆಯಲಾಗಿದೆ ಎಂದು ಹೇಳಿದರು.

ಅಸಹಕಾರಕ್ಕೆ ಅಸಮಾಧಾನ

ವಿನಯ ಕುಮಾರ್ ಕಂದಡ್ಕ ಮಾತನಾಡಿ ” ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ 60 ಕ್ವಿಂಟಾಲ್ ಅಕ್ಕಿ ಇದೆ ಎಂಬ ಮಾಹಿತಿ ಇದೆ. ಅದನ್ನು ಈ ಸಂದರ್ಭದಲ್ಲಿ ಅವರು ನೀಡಲು ಮುಂದೆ ಬರಬೇಕು. ನಾನು ಹಿಂದೂವಾಗಿ ಇದನ್ನು ಹೇಳಲು ಬೇಸರವಾಗ್ತದೆ. ಆದರೆ ಸಂದರ್ಭ ಅದೇ ರೀತಿ ಇದೆ. ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನ ದಿಂದ ಊಟ, ಅಕ್ಕಿ ನೀಡಬೇಕು ಎಂಬ ಆದೇಶ ಇದೆ. ಎಂ.ಬಿ.ಫೌಂಡೇಶನ್ ನವರು ಮಾಡುವಂತಹ ಕಾರ್ಯವನ್ನು ಈ ದೇವಸ್ಥಾನದಲ್ಲಿ ಮಾಡುತ್ತಿದ್ದರೆ, ಶಿವಕೃಪಾದಲ್ಲಿ ಮಾಡಬೇಕೆಂದು ಇರುತ್ತಿರಲಿಲ್ಲ. ದೇವಸ್ಥಾನದಲ್ಲೆ ಅಡುಗೆ ಮಾಡುವವರಿದ್ದಾರೆ. ಅವರಿಂದ ಮಾಡಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮುಖ್ಯಾಧಿಕಾರಿ ಗಳು ದೇವಸ್ಥಾನದವರ ಜತೆ ಮಾತನಾಡಿದ್ದೇನೆ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ ಎಂದು ಸಭೆಗೆ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.