ಸುಳ್ಯದ ಸೇವಾ ಭಾರತಿ ಹಾಗೂ ಅಡ್ಕಾರು ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಜಾಲ್ಸೂರು ಗ್ರಾಮದ 60 ಕಡು ಬಡವರ ಮನೆಗಳಿಗೆ ಕಿಟ್ ವಿತರಣೆ

Advt_Headding_Middle
Advt_Headding_Middle

ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜಾಲ್ಸೂರು ಗ್ರಾಮದ ಬಡವರ ಮನೆಗಳಿಗೆ ಸುಳ್ಯದ ಸೇವಾ ಭಾರತಿ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ತಿಕೇಯ ಯುವ ಸೇವಾ ಸಂಘ ಹಾಗೂ ಜಾಲ್ಸೂರು ಗ್ರಾಮ ವಿಕಾಸ ಸಮಿತಿಯ ವತಿಯಿಂದ ಎ.9ರಂದು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಜಾಲ್ಸೂರು ಗ್ರಾಮದ ಜಾಲ್ಸೂರು, ಅಡ್ಕಾರುಬೈಲು, ವಿನೋಬಾನಗರ, ಕೋನಡ್ಕ ಪದವು ವ್ಯಾಪ್ತಿಯ ಸುಮಾರು 60 ಮನೆಗಳಿಗೆ ತೆರಳಿ ಕಿಟ್ ವಿತರಿಸಲಾಯಿತು.
ಅಕ್ಕಿ, ಬೇಳೆ, ಸಕ್ಕರೆ, ಚಾಹುಡಿ, ಮೆಣಸು, ಉಪ್ಪು ಸೇರಿದಂತೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಸದಸ್ಯ ಜನಾರ್ದನ ಆಚಾರ್ಯ ಜಾಲ್ಸೂರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಕಾರ್ತಿಕೇಯ ಯ.ಸೇ.ಸಂಘದ ಅಧ್ಯಕ್ಷ ರವಿನ್ ರಾಜ್ ಅಡ್ಕಾರುಪದವು, ಸುಖೇಶ್ ಅಡ್ಕಾರುಪದವು, ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಯಂ.ಬಾಬು ಕದಿಕಡ್ಕ, ಸೇರಿದಂತೆ ಸೇವಾ ಭಾರತಿ, ಕಾರ್ತಿಕೇಯ ಯ.ಸೇ.ಸಂಘ ಹಾಗೂ ಜಾಲ್ಸೂರು ಗ್ರಾಮ ವಿಕಾಸ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.