ಸುಳ್ಯ ಎಸ್.ಎಸ್ ಎಫ್ ಹಾಗೂ ಎಸ್.ವೈ.ಎಸ್ ತುರ್ತುಸೇವಾ ತಂಡದಿಂದ ಆಹಾರದ ಕಿಟ್ ವಿತರಣೆ

Advt_Headding_Middle
Advt_Headding_Middle

 

ಕೋವಿಡ್-19 ಭೀತಿಯಿಂದ ಭಾರತದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಜನಜೀವನವು ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತುಸೇವಾತಂಡದ ಸಮಾಜಸೇವಾ ಚಟುವಟಿಕೆಗಳು ನೂರಾರು ಮಂದಿಗೆ ಆಸರೆಯನ್ನೊದಗಿಸುತ್ತಿದೆ. ಇದರ ಭಾಗವಾಗಿ ಸುಳ್ಯ ಡಿವಿಷನ್ ವ್ಯಾಪ್ತಿಯ ಐದರಷ್ಟು ಕಾರ್ಯಕರ್ತರಿಗೆ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತುಸೇವಾತಂಡದ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸಂಘಟನೆಯ ಕಾರ್ಯಕರ್ತರನ್ನು ಹುಡುಕಿ ಸುಮಾರು ಐದು ಕಾರ್ಯಕರ್ತರ ಮನೆಗಳಿಗೆ ಒಂದು ತಿಂಗಳ ಅವಧಿಗೆ ಬೇಕಾಗಿರುವ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯವು ನಡೆಯಿತು.

ಪ್ರಸ್ತುತ ಆಹಾರ ಕಿಟ್ ಫಲಾನುಭವಿಗಳಲ್ಲಿ ಮಧ್ಯಮ ವರ್ಗದವರಾಗಿರುವ ಪ್ರಸ್ತುತ ಲಾಕ್ ಡೌನ್ ನಿಂದ ಸಂತ್ರಸ್ತರಾಗಿರುವ ಕುಟುಂಬಗಳೂ ಸೇರಿದಂತೆ ಅರ್ಹರನ್ನು ಸರ್ವೇ ನಡೆಸಿ ಈ ಆಹಾರದ ಕಿಟ್ ವಿತರಿಸಲಾಗಿದೆ. ಶಾಖಾ ಮಟ್ಟದಲ್ಲಿ ಅರ್ಹರನ್ನು ತಲುಪಿ ದಿನನಿತ್ಯದ ಆಹಾರ ಸಾಮಗ್ರಿ ಹಾಗೂ ಔಷಧಿಗಳನ್ನು ತಲುಪಿಸುವ ವ್ಯವಸ್ಥೆಯು ಸುಳ್ಯ ತಾಲ್ಲೂಕಿನಾದ್ಯಂತ ಸಂಘಟನೆಯ ವತಿಯಿಂದ ನಡೆಯುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.