ಸುಳ್ಯ ನಗರ ಪಂಚಾಯತ್ ವರಾಂಡದಲ್ಲಿದ್ದ ಕಸದ ರಾಶಿಗೆ ಬೆಂಕಿ

Advt_Headding_Middle
Advt_Headding_Middle

 

ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

ಪ್ರಸ್ತುತ ನಗರದ ಕಸ ವಿಲೇವಾರಿಯಾಗುತ್ತಿರುವ ನಗರ ಪಂಚಾಯತ್ ವಠಾರದಲ್ಲಿರುವ ಕಸದ ರಾಶಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ.

ವಿಷಯ ತಿಳಿದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನಗರ ಪಂಚಾಯತ್ ನ ಎದುರಿನ ಶೆಡ್ ನಲ್ಲಿ ಕಸದ ರಾಶಿ ತುಂಬಿದ್ದು, ಬಳಿಕ ಕಸವನ್ನು ನಗರ ಪಂಚಾಯತ್ ಕಚೇರಿಯ ಹಿಂಬದಿ ಹಾಕಲಾಗುತ್ತದೆ.

ಅದು ದೊಡ್ಡ ರಾಶಿಯಾಗಿದ್ದು, ಇತ್ತೀಚಿಗೆ ಕೆಲ ದಿನಗಳಿಂದ ಪಕ್ಕದಲ್ಲೆ ಕಸಗಳಿಗೆ ಸ್ವಲ್ಪ ಸ್ವಲ್ಪವೇ ಬೆಂಕಿ ಹಾಕಲಾಗುತ್ತದೆ. ಅದೇ ರೀತಿ ಇಂದು ಕೂಡಾ ಹಗಲು ಬೆಂಕಿ ಹಾಕಿ, ಬಳಿಕ ನಂದಿಸಲಾಗಿತ್ತು. ಆದರೆ ರಾತ್ರಿ 8 ಗಂಟೆ ವೇಳೆಗೆ ಏಕಾಏಕಿ ಕಸದ ರಾಶಿಯಲ್ಲಿ ಬೆಂಕಿ ಉರಿಯಲಾರಂಭಿಸಿತು.

ಬೆಂಕಿ ಉರಿಯುವುದನ್ನು ಕಂಡ ಸಮೀಪದ ಕಟ್ಟಡದ ದೇವಿ ಪ್ರಸಾದ್ ಅತ್ಯಾಡಿ ಹಾಗೂ ಕಂದಡ್ಕದ ಶಶಿಕುಮಾರ್ ಓಡಿ ಬಂದು ನೋಡಿ,ಬಳಿಕ ಪೋಲೀಸ್ ಠಾಣೆ, ಮತ್ತು ನ.ಪಂ. ಸದಸ್ಯ ಶರೀಫ್ ಕಂಠಿ, ಶಿಲ್ಪಾ ಸುದೇವ್ ಗೆ ವಿಷಯ ತಿಳಿಸಿದರು. ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿದೆ.

ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ನ.ಪಂ.ಇಂಜಿನಿಯರ್ ಶಿವಕುಮಾರ್, ಸದಸ್ಯ ಶರೀಫ್ ಕಂಠಿ ಹಾಗೂ ಸಿಬ್ಬಂದಿಗಳಿದ್ದು ನಂದಿಸುವ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.