ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿಪಡಿತರ ವಿತರಣೆ 

Advt_Headding_Middle
Advt_Headding_Middle

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಣೆ

ಆಲೆಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಿಸುವ ಕಾರ್ಯಕ್ರಮವು ಬಿರುಸಿನಿಂದ ನಡೆಯುತ್ತಿದೆ .ಕೇಂದ್ರ ಕಚೇರಿ ಆಲೆಟ್ಟಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪೆಂಡಲ್ ನಡಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡುವ ಮೂಲಕ ಪಡಿತರವನ್ನು ವಿತರಿಸಲಾಯಿತು .

.ಕಚೇರಿಯ ಶಾಖೆಗಳಾದ ಕೋಲ್ಚಾರ್ ಮತ್ತು ಅರಂಬೂರಿನಲ್ಲಿ ಕೂಡ ವ್ಯವಸ್ಥಿತ ರೀತಿಯಲ್ಲಿ ಸರಕಾರದ ಆದೇಶದ ಪ್ರಕಾರ ಪಡಿತರವನ್ನು ವಿತರಿಸಲಾಗುತ್ತಿದೆ.ಬಿ.ಪಿ.ಎಲ್ ಪಡಿತರದಾರರಿಗೆ ಈಗಾಗಲೇ ಶೇ 95% ರಷ್ಟು ಪಡಿತರವನ್ನು ವಿತರಿಸುವ ಕಾರ್ಯ ಮುಗಿದಿದೆ .ಸರ್ಕಾರದ ಆದೇಶದಂತೆ ನಿಗದಿಪಡಿಸಿದ ಸಮಯದಲ್ಲಿ ಪಡಿತರವನ್ನು ವಿತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ .ಜಿಲ್ಲಾಧಿಕಾರಿ ಅವರ ಆದೇಶದ ಪ್ರಕಾರ ಓಟಿಪಿ ಇಲ್ಲದೆ ಪಡಿತರವನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ .ಬಡ್ಡಡ್ಕ ಭಾಗಕ್ಕೆ ಲ್ಯಾಂಪ್ಸ್ ಸೊಸೈಟಿ ಮೂಲಕ 400 ಪಡಿತರವನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಆಲೆಟ್ಟಿಯಲ್ಲಿ ಬಿ.ಪಿ.ಎಲ್.271, ಎ.ಪಿ.ಎಲ್.181, ಕೋಲ್ಚಾರಿನ ಶಾಖೆಯಲ್ಲಿ 154 ಬಿ.ಪಿ.ಎಲ್, 94 ಎ.ಪಿ.ಎಲ್, ಅರಂಬೂರಿನಲ್ಲಿ 189 ಬಿ.ಪಿ.ಎಲ್, 183 ಮಂದಿ ಎ.ಪಿ.ಎಲ್ ಪಡಿತರದಾರರಿದ್ದಾರೆ. ಗ್ರಾಮದಲ್ಲಿ ಈಗಾಗಲೇ 95% ಪಡಿತರ ವಿತರಣೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ . ಎ.ಪಿ.ಎಲ್ ಕಾರ್ಡ್ ಹೊಂದಿದ ಪಡಿತರದಾರರಿಗೆ ಈಗಾಗಲೇ ಪಡಿತರದ ವಿತರಣೆಯೂ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಡಿತರ ವಿತರಿಸಲಾಗುತ್ತಿದೆ ಎಂದು ಕೇಂದ್ರ ಕಛೇರಿ ಸಿ.ಇ.ಒ.ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.