Breaking News

ಕಬ್ಬಿಣ ತಾಗಿ ಗಾಯಗೊಂಡು ಬಂದವರಿಗೆ ಪಂಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ

Advt_Headding_Middle
Advt_Headding_Middle

ಕಬ್ಬಿಣ ಕಾಲಿಗೆ ತಾಗಿ ಗಾಯಗೊಂಡು ಚಿಕಿತ್ಸೆಗಾಗಿ ಪಂಜ ಸರಕಾರಿ ಆಸ್ಪತ್ರೆಗೆ ಬಂದ ಬಳ್ಪದ ವ್ಯಕ್ತಿಯೊಬ್ಬರಿಗೆ ಆಸ್ಪತ್ರೆಯಲ್ಲಿ ಟಿ.ಟಿ. ಇಂಜೆಕ್ಷನ್ ಕೊಡಲು ನಿರಾಕರಿಸಿ ಘಟನೆ ವರದಿಯಾಗಿದೆ. ಬಳ್ಪದ ನಾಗೇಶ್ ಎಂಬವರು ಕಾಲಿಗೆ ಕಬ್ಬಿಣ ತಾಗಿದುದ್ದರಿಂದ ತುರ್ತು ಚಿಕಿತ್ಸೆಗಾಗಿ ಇಂದು ಬೆಳಿಗ್ಗೆ ಪಂಜ ಸರಕಾರಿ ಆಸ್ಪತ್ರೆಗೆ ಬಂದರು.
ಅವರಿಗೆ ಟಿ.ಟಿ. ಇಂಜೆಕ್ಷನ್ ಕೊಡಬೇಕಾಗಿತ್ತು. ವೈದ್ಯಾಧಿಕಾರಿ ಡಾ. ಮಂಜುನಾಥ್‌ರವರು ಟಿ.ಟಿ. ಇಂಜೆಕ್ಷನ್ ಕೊಡುವಂತೆ ಸೂಚಿಸಿದರೂ ಅಲ್ಲಿ ಇದ್ದ ದಾದಿಯರು ಕೊರೊನಾ ಜಾಗೃತಿಯ ಕಾರಣ ಹೇಳಿ ನಿರಾಕರಿಸಿದರೆನ್ನಲಾಗಿದೆ.
ಬೇಕಿದ್ದರೆ ಮಾತ್ರೆ ಕೋಡುತ್ತೇವೆ ಕೊಂಡೊಯ್ಯಿರಿ ಎಂದು ಅವರು ಹೇಳಿದರೆಂದೂ, ಪತ್ರಕರ್ತರೂ ಆಗಿರುವ ನಾಗೇಶ್ ಬಳ್ಪರು ಅದನ್ನು ನಿರಾಕರಿಸಿ ಸುದ್ದಿಗೆ ಮತ್ತು ಬಿಎಚ್‌ಒಗೆ ಫೋನ್ ಮಾಡಿ ವಿಷಯ ತಿಳಿಸಿದರೆಂದು ತಿಳಿದು ಬಂದಿದೆ. ಈ ಬಗ್ಗೆ ಪಂಜ ಸರಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿ ಮಂಜುನಾಥ್‌ರವನ್ನು ಸಂಪರ್ಕಿಸಿ ವಿಚಾರಿಸಿದಾಗ ನಮಗೆ ಸ್ಪಷ್ಟ ಸೂಚನೆಗಳು ಇಲ್ಲದಿರುವುದರಿಂದ ಗೊಂದಲ ಉಂಟಾಗಿದೆ. ನಾನು ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಗೊಂದಲ ನಿವಾರಿಸಿಕೊಳ್ಳುತ್ತೇನೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.