ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗೇರುಬೀಜ ಖರೀದಿ ಪ್ರಾರಂಭ

Advt_Headding_Middle
Advt_Headding_Middle

ಕೊರೋನಾ ಸಮಸ್ಯೆಯಿಂದ ಆರ್ಥಿಕವಾಗಿ ಕಂಗೆಟ್ಟಿದ್ದ ರೈತರ ಸಮಸ್ಯೆಗಳನ್ನು ಮನಗಂಡು ಅರಂತೋಡು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಗೇರುಬೀಜ ಖರೀದಿಯನ್ನು ಎ.13ರಂದು ಪ್ರಾರಂಭಿಸಲಾಯಿತು.

ಇದರ ಉದ್ಘಾಟನೆಯನ್ನು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಉಪಸ್ಥಿತರಿದ್ದರು. ಖರೀದಿಯು  ಪೂ.9.00ರಿಂದ ಅಪರಾಹ್ನ 12.00ರ ತನಕ ನಡೆಯುವುದು.ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಕೊಡೆಂಕಿರಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅರಂತೋಡು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕರಾದ ವಿನೋದ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ಶ್ರೀಮತಿ ಚಿತ್ರಾ ದೇರಾಜೆ, ನಿಧೀಶ್ ಅರಂತೋಡು, ಸಂತೋಷ್ ಸಿ.ಕೆ., ಸೋಮಯ್ಯ ಹೆಚ್‌., ಭಾರತಿ ಬಿ., ಗಣೇಶ ಕರಿಂಬಿ, ವಿಜೇತ್ ಮರುವಳ, ಹಿಮಕರ ಅಡ್ತಲೆ, ಕೃಷಿಕರಾದ ನಾರಾಯಣ ಕೆ.ಕೆ., ಮಹಮ್ಮದ್ ಅಮೀರ್, ಸುಕುಮಾರ ಉಳುವಾರು ಮೊದಲಾದವರು ಉಪಸ್ಥಿತರಿದ್ದರು. ರೈತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೇರುಬೀಜವನ್ನು ಮಾರಾಟ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.