ಐವರ್ನಾಡು : ಕೊರೊನಾ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೊನಾ ಕಾರ್ಯಪಡೆ ಸಮಿತಿಯ ಸಭೆಯು ಎ.13 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ರವರು ಮಾತನಾಡಿ ಸಂಘದಲ್ಲಿ ಈಗಾಗಲೆ ದಿನಸಿ ಸಾಮಾಗ್ರಿಗಳು ಸಿಗುತ್ತಿದೆ.
ಲಭ್ಯ ತರಕಾರಿಗಳ ಸರಬರಾಜು ಮಾಡುವ ಬಗ್ಗೆ ಮತ್ತು ಮನೆ ಮನೆಗಳಿಗೆ ದಿನಸಿ
ತಲುಪಿಸುವ ಬಗ್ಗೆ ಮಾತನಾಡಿದರು.


ಕೊರೊನಾ ಕಾರ್ಯಪಡೆಯವರಿಗೆ ಪಾಸ್ ನೀಡುತ್ತಿದ್ದು ಪಾಸ್ ನ್ನು ಯಾರೂ ದುರುಪಯೋಗ ಮಾಡಬಾರದು.ಗ್ರಾಮದ ಅವಶ್ಯಕ ವಸ್ತುಗಳನ್ನು ತರಲು ಮಾತ್ರ ಉಪಯೋಗ ಮಾಡಬೇಕು ಎಂದು ಹೇಳಿದರು.
ಆಯ್ದ ಕೇಂದ್ರಗಳನ್ನು ಮಾಡಿಕೊಂಡು ಸುಲಭವಾಗಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಬಗ್ಗೆ ಮಾಹಿತಿ ನೀಡಲಾಯಿತು.
ಗ್ರಾಮದಲ್ಲಿ ತುರ್ತು ಸೇವೆಗಾಗಿ ಜನರಿಗಾಗಿ ಒಂದು ಬಾಡಿಗೆ ವಾಹನವನ್ನು ನಿಗದಿಪಡಿಸಲಾಯಿತು.
ಅಲ್ಲದೆ ಗ್ರಾಮದಲ್ಲಿ ತರಕಾರಿ ಬೆಳೆಯುವವರಿದ್ದರೆ ಮಾರಾಟ ಮಾಡಲು ಸಹಕಾರಿ ಸಂಘದ ವತಿಯಿಂದ ಅವಕಾಶ ಕಲ್ಪಿಸುವ ಬಗ್ಗೆ ಮಾತುಕತೆ ನಡೆಯಿತು.
ತೀರಾ ನಿರ್ಗತಿಕರಿಗೆ ದಿನಸಿ ಸಾಮಾಗ್ರಿ ಕೊಡುವ ಬಗ್ಗೆ ನಿರ್ಣಯಿಸಲಾಯಿತು.
ಕೊರೊನಾ ಪಡೆಯಿಂದ ನೆರವು ನೀಡಲು ಧನಸಹಾಯ ನೀಡುವವರಿಗೆ ಅವಕಾಶ ಇದ್ದು ಧನಸಹಾಯ ನೀಡಬಹುದು ಎಂದು ಹೇಳಿದರು.


ಮತ್ತು ಈಗಾಗಲೇ ಧನ ಸಹಾಯ ನೀಡಿದವರ ಬಗ್ಗೆ ವಿವರವನ್ನು ನೀಡಿದರು.
ಸಹಕಾರಿ ಸಂಘದಲ್ಲಿ ಈಗ ದೊರಕುವ ದಿನಸಿ ಮತ್ತು ಇನ್ನು ಹೆಚ್ಚಿನ ತರಕಾರಿ ಸಾಮಾನುಗಳನ್ನು ಜನರಿಗೆ ಒದಗಿಸುವ ಬಗ್ಗೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಮಾತನಾಡಿ ಗ್ರಾಮದ ಜನರಿಗೆ ಲಾಕ್ ಡೌನ್ ಸಂದರ್ಭದಲ್ಲಿ ನೀಡುವ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್,ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ ಉಪಸ್ಥಿತರಿದ್ದರು.
ಸಭೆಯಲ್ಲಿದ್ದ ದಿನೇಶ್ ಮಡ್ತಿಲ,ಗ್ರಾಪ ಪಂಚಾಯತ್ ಸದಸ್ಯ ಶಾಂತಾರಾಮ ಕಣಿಲೆಗುಂಡಿ,ಚಂದ್ರಲಿಂಗಂ,ಸಹಕಾರಿ ಸಂಘದ ನಿರ್ದೇಶಕ ಮಹೇಶ್ ಜಬಳೆ ಮತ್ತಿತರರು ಸಲಹೆಗಳನ್ನು ನೀಡಿದರು.
ಕೊರೊನಾ ಕಾರ್ಯಪಡೆಯ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸುದ್ದಿ ಸಹಾಯವಾಣಿಯಿಂದ ಸಹಾಯ

ಸುಳ್ಯ ಸುದ್ದಿ ಬಿಡುಗಡೆ ವತಿಯಿಂದ ಸಹಾಯವಾಣಿಯನ್ನು ರಚಿಸಿದ್ದು ಗ್ರಾಮದಲ್ಲಿ ಅಗತ್ಯವಿರುವವರಿಗೆ ಸುದ್ದಿ ಸಹಾಯವಾಣಿಯ ಮೂಲಕ ಸಹಾಯ ನೀಡಲಾಗುವುದು ಎಂದು ಸುದ್ದಿ ಪತ್ರಿಕಾ ವರದಿಗಾರ ಗಣೇಶ್ ಕುಕ್ಕುದಡಿ ಹೇಳಿದರು.
ಗ್ರಾಮದಲ್ಲಿ ಯಾರಿಗಾದರೂ ವೈದ್ಯರಿಂದ ಅಥವಾ ಮೆಡಿಕಲ್ ನಿಂದ ಮೆಡಿಸಿನ್ ಅಗತ್ಯವಿದ್ದರೆ ಅದನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.

 

ಸಹಕಾರಿ ಸಂಘದಲ್ಲಿ ಈರುಳ್ಳಿಗೆ ರೂ. 2೦
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಸಹಕಾರಿ ಸಂಘದ ಮೂಲಕ ಮಾರಾಟ ಮಾಡುತ್ತಿದ್ದು, ಈರುಳ್ಳಿಯನ್ನು ಬಾರೀ ಕಡಿಮೆ ದರ ರೂ. ೨೦ಕ್ಕೆ ಮಾರಾಟ ಮಾಡಲಾಗುವುದೆಂದು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ. ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.