Breaking News

ಸುಳ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರ 129 ಜನ್ಮದಿನಾಚರಣೆ

Advt_Headding_Middle
Advt_Headding_Middle

 

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇದರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರ 129 ಜನ್ಮ ದಿನಾಚರಣೆಯನ್ನು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ಆಚರಿಸಲಾಯಿತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಅನಂತಶಂಕರ್ ಅಧ್ಯಕ್ಷ ತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಂಬೇಡ್ಕರ್ ರ ಭಾವಚಿತ್ರ ದ ಎದುರು ದೀಪ ಬೆಳಗಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಇ.ಒ. ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ ಮುಖ್ಯ ಅತಿಥಿಗಳಾಗಿದ್ದರು. ಪಿಡಬ್ಲ್ಯೂಡಿ ಇಲಾಖೆಯ‌ ಎ.ಇ.ಇ. ಸಣ್ಣೇ ಗೌಡ, ನ.ಪಂ. ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ಇಲಾಖೆಯ ಡಾ.ನಂದಕುಮಾರ್, ಉಪತಹಶೀಲ್ದಾರ್ ಚಂದ್ರಕಾಂತ್, ಆರ್.ಐ.ಗಳಾದ ಕೊರಗಪ್ಪ ಹೆಗ್ಡೆ, ಎಂ.ಎಲ್.ಶಂಕರ್ ಮೊದಲಾದವರಿದ್ದರು.

ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೀದೇವಿ ಸ್ವಾಗತಿಸಿದರು. ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.