ಸುಳ್ಯ ಆಶ್ರಯ ಪೌಂಡೇಶನ್ ಸ್ಥಾಪನಾ ದಿನ ಅಂಗವಾಗಿ ಪೌಷ್ಟಿಕ ಪದಾರ್ಥಗಳ ವಿತರಣೆ

Advt_Headding_Middle
Advt_Headding_Middle


ಕೊರೋನ ವೈರಸ್ ಜಗತ್ತಿನಾದ್ಯಂತ ತಲ್ಲಣವನ್ನು ಸೃಷ್ಟಿಸಿದ್ದು, ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ದುಡಿಮೆ ಗಳಿಲ್ಲದೆ, ಕೂಲಿಕಾರ್ಮಿಕರು, ಬಡವರು , ಕೆಲವು ಮಧ್ಯಮ ವರ್ಗದವರು ಒಪ್ಪೊತ್ತಿನ ಊಟಕ್ಕಾಗಿ ಚಿಂತಿಸುವ ಕಾಲವಿದು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಜಿಲ್ಲಾಡಳಿತ ತಾಲೂಕು ಆಡಳಿತ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಸಹಾಯವನ್ನು ನೀಡುತ್ತಿದೆ. ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿರುವ ಕೈಜೋಡಿಸಿರುವ ಹಲವಾರು ಧಾರ್ಮಿಕ ಸಂಘಟನೆಗಳು ,ಸಂಘ-ಸಂಸ್ಥೆಗಳು, ಚಾರಿಟೇಬಲ್ ಟ್ರಸ್ಟ್ ಗಳು, ಬಡಜನತೆಯ ಹಸಿವನ್ನು ನೀಗಿಸಲು ನಾ ಮುಂದು ತಾ ಮುಂದು ಎಂದು ಬಡಜನತೆಯ ಕಣ್ಣೀರು ಒರೆಸುವಲ್ಲಿ ಸಹಕಾರಿಯಾಗುತ್ತಿದೆ.
ಸುಳ್ಯದಲ್ಲಿ ಇಂದು ಆರಂಭ ಗೊಂಡ ಆಶ್ರಯ ಫೌಂಡೇಶನ್ ನ ಸ್ಥಾಪಕ ಶರೀಫ್ ಕಂಠೀರವ ನೇತೃತ್ವದಲ್ಲಿ ನಾವೂರು ವಾರ್ಡಿನ ಸುಮಾರು 120ಕ್ಕೂ ಹೆಚ್ಚು ಮನೆಗಳಿಗೆ ಪೌಷ್ಟಿಕ ಪದಾರ್ಥಗಳಾದ ಹಾಲು-ಮೊಟ್ಟೆ ಬಿಸ್ಕೆಟ್ ಬ್ರೆಡ್ ಗಳನ್ನು ಉಚಿತವಾಗಿ ವಿತರಿಸುವ ಮೂಲಕ ತಮ್ಮ ಸಂಸ್ಥೆಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶರೀಫ್ ಕಂಠಿ, ರಫೀಕ್ ಬಿಎಂ ,ಹನೀಫ್ ಬೀಜ ಕೊಚ್ಚಿ ,ಶರೀಫ್ ಬೆಂಗಳೂರು-, ಫೈಝಲ್ ಕಟ್ಟಿಕಾರ್ ,ನವಾಜ್ ಕಟ್ಟೇಕರ್ ,ಶರೀಫ್ ನಾವೂರು, ಫಾರಿಸ್ ಗಾಂಧಿನಗರ, ಮುಸ್ತಫ ಪಂಡಿತ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.