ಅವಶ್ಯಕ ಸಾಮಾಗ್ರಿ ಖರೀದಿಗೆ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಪೊಲೀಸ್ ಇಲಾಖೆಯ ನಿರ್ದೇಶನ

Advt_Headding_Middle
Advt_Headding_Middle

ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಅವಕಾಶ; ರಿಕ್ಷಾ, ಕಾರು, ಜೀಪುಗಳಲ್ಲಿ ಚಾಲಕನೊಂದಿಗೆ ಹಿಂಭಾಗದಲ್ಲಿ ಒಬ್ಬರಿಗೆ ಅವಕಾಶ

ಅವಶ್ಯಕ ಸಾಮಾಗ್ರಿ ಖರೀದಿಗೆ ಪೂರ್ವಾಹ್ನ 7 ರಿಂದ 12 ರವರೆಗೆ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಪೊಲೀಸ್ ಇಲಾಖೆ ಹಲವು ನಿರ್ದೇಶನಗಳನ್ನು ನೀಡಿದೆ.

ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬೇಕು. ಅಟೋ ರಿಕ್ಷಾದಲ್ಲಿ ಚಾಲಕ ಮತ್ತು ಹಿಂಭಾಗದಲ್ಲಿ ಒಬ್ಬರು ಪ್ರಯಾಣಿಸಬಹುದು. ಕಾರು ಅಥವಾ ಜೀಪುಗಳಲ್ಲಿ ಕೂಡಾ ಚಾಲಕ ಮತ್ತು ಹಿಂಭಾಗದಲ್ಲಿ ಒಬ್ಬ ಪ್ರಯಾಣಿಕ ಪ್ರಯಾಣಿಸಬಹುದು. ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮ ರೂಪಿಸಲಾಗಿದ್ದು, ನಿಯಮ ಉಲ್ಲಂಘಿಸಿ ತಿರುಗುವ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖಾ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.