Breaking News

ಅರುಣ್ ರಂಗತ್ತಮಲೆ ಸಹಕಾರದಲ್ಲಿ ಕಾರ್ಮಿಕರಿಗೆ ದಿನಸಿ ಸಾಮಾಗ್ರಿ ವಿತರಣೆ

Advt_Headding_Middle
Advt_Headding_Middle

ಕೇರಳ ಕರ್ನಾಟಕ ಗಡಿ ಪ್ರದೇಶವಾದ ಪನತ್ತಡಿ ಗ್ರಾಮಪಂಚಾಯತ್ ನ, ಕಲ್ಲಪ್ಪಳ್ಳಿಯ ಕಮ್ಮಾಡಿ ಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಿಂದ ಕೂಲಿ ಕೆಲಸಕ್ಕೆ ಬಂದು ಲಾಕ್ ಡೌನ್ ನಿಂದಾಗಿ ಹಿಂದಿರುಗಲಾಗದೆ ಇದ್ದ ಕಾರ್ಮಿಕರಿಗೆ ಮಾಜಿ ಗ್ರಾ.ಪಂ.ಸದಸ್ಯ ಅರುಣ್ ರಂಗತ್ತಮಲೆ ಸಹಕಾರದಲ್ಲಿ ದಿನಸಿ ಸಾಮಾಗ್ರಿ ವಿತರಿಸಲಾಯಿತು.

ಈ ಕಾರ್ಮಿಕರಿಗೆ ಊಟಕ್ಕೆ ತೊಂದರೆ ಇರುವುದನ್ನು ಕಂಡ ಅರುಣ್ ಅವರು ಪಂಚಾಯತ್ ಅಧ್ಯಕ್ಷರಿಗೆ ವಿಷಯ ತಿಳಿಸಿದ್ದರು. ಪಂಚಾಯತ್ ಅಧ್ಯಕ್ಷರು ಅಂಗಡಿ ಯಿಂದ ಅಕ್ಕಿ ಖರೀದಿಸಿ ಅರುಣ್ ಅವರಿಗೆ ನೀಡಿದ್ದರು. ಇಂದು ಎರಡು ಪದ್ಧತಿಯಲ್ಲಿ ತಲಾ 15 ಕೆ.ಜಿ.ಅಕ್ಕಿ ಯಂತೆ 30 ಕೆ.ಜಿ.ಅಕ್ಕಿ ಮತ್ತು ಅಗತ್ಯ ಸಾಮಗ್ರಿಗಳನ್ನು ಪಂಚಾಯತ್ ಅಧ್ಯಕ್ಷ ಪಿಜಿ ಮೋಹನ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಸಪ್ಲೈ ಆಫೀಸರ್ ಮತ್ತು ಪಂಚಾಯತ್ ಕಾರ್ಯದರ್ಶಿಗಳು ಉಪಸ್ತಿತರಿದ್ದರು. ಅರುಣ್ ರಂಗತ್ತಮಲೆ ಸರಕಾರದ ಗಮನಕ್ಕೆ ತಂದು ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲು ಅವಕಾಶ ಕಲ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.