ಮರ್ಕಂಜ : ಸೇವಾಜೆಯ ಯುವಕ ಮೃತ್ಯು

Advt_Headding_Middle
Advt_Headding_Middle

 

ಆರೋಗ್ಯ ಏರು ಪೇರಾಗಿ ಯುವಕನೋರ್ವ ಕುಸಿದು ಬಿದ್ದು ನಿಧನವಾದ ಘಟನೆ ಮರ್ಕಂಜ ಗ್ರಾಮದ‌ ಸೇವಾಜೆ ಎಂಬಲ್ಲಿಂದ ಎ.14ರಂದು ವರದಿಯಾಗಿದೆ.
ಮರ್ಕಂಜ ಗ್ರಾಮದ ಸೇವಾಜೆ ದಿ| ಶಾಂತಪ್ಪ ಗೌಡರ ಪುತ್ರ ಉಮೇಶ ಎಂಬವರೇ ಮೃತ ಯುವಕ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ವಾಂತಿ ಮತ್ತು ತಲೆನೋವು ಇದ್ದ ಕಾರಣ ದುಗ್ಗಲಡ್ಕದ ವೈದ್ಯರಲ್ಲಿಗೆ ಹೋಗಿ ಅವರ ಸಲಹೆಯಂತೆ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು‌ ಹೋಗಿದ್ದರು. ಅಲ್ಲಿಂದ ಔಷಧ‌ ಪಡೆದು ಮನೆಗೆ ಹಿಂತಿರುಗಿದ್ದರು. ಮನೆಯಲ್ಲಿ ಸಂಜೆ ವೇಳೆಗೆ ವಾಂತಿ ಉಲ್ಬಣಗೊಂಡು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಮನೆಯವರು ಸುಳ್ಯಕ್ಕೆ ಕರೆದುಕೊಂಡು ಹೋದರಾದರೂ ರಸ್ತೆ ಮಧ್ಯೆ ಕೊನೆಯುಸಿರೆಳೆದರು. ಉಮೇಶರವರು ದಿನಗೂಲಿ ಕೆಲಸ ಮಾಡುತ್ತಿದ್ದರು.
ಮೃತರು ತಾಯಿ ಚಿನ್ನಮ್ಮ, ಪತ್ನಿ ಪ್ರಮೀಳಾ, ಪುತ್ರಿಯರಾದ ಕು|ಕೀರ್ತಿಕಾ, ಕು| ನಿರೀಕ್ಷಾ, ಸಹೋದರರಾದ ಪೊನ್ನಪ್ಪ, ಜಯರಾಮ, ಸಹೋದರಿಯರಾದ ಲೀಲಾವತಿ ಬಾಬು ಗೌಡ ಗೋಣಿಕೊಪ್ಪ, ವಿಶಾಲಕ್ಷಿ ಶಿವಕಜಮಾರ ಸಂಗನಪುರ ಕುಶಾಲನಗರ, ಅತ್ತಿಗೆಯರಾದ ಲೀಲಾಮ್ಮ ರಾಮಚಂದ್ರ, ಪದ್ಮಾವತಿ ಪೊನ್ನಪ್ಪ, ತೇಜಾವತಿ ಜಯರಾಮ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.