ಕೊರೋನಾ ಬಂದ್ ಸರಳ ಜೀವನಕ್ಕೆ ಕಾಲಿಸಿತ್

Advt_Headding_Middle
Advt_Headding_Middle

 

✍️ ಬರಹ: ಪೂರ್ಣಿಮಾ ಚೊಕ್ಕಾಡಿ

ಎಲ್ಲೋ ಹುಟ್ಟಿದ ಕೊರೊನಾ ಇಂದ್ ಜಗತ್ತ್ ನ ನಡ್ಗಿಸ್ತಾ ಉಟ್ಟು, ಇಂತ ಕಾಲ ಇಷ್ಟ್ರವರೆಗೆ ಬಾತ್ಲೇ, ನೋಡ್ತೂ ಇಲ್ಲೆ, ಎಂತ ಅವಸ್ಥೆನಾ?
ಇಲ್ಲಿಮುಟ್ಟ ಭೂಮಿಲಿ ಮನಷ್ಯಂದೆ ಅಟ್ಟಹಾಸ ಇತ್ತ್, ಈಗ ನಾವು ಕೊರೋನಾದ ಅಟ್ಟಹಾಸ ನೋಡಿ ಕಂಗಾಳಾಗಳ. ಕೊರೋನಾ ಚೀನಾ ದೇಶಲಿ ಉಟ್ಟುಗಡ ಕೊರೋನಾ ಬಾತ್ ಹಂಗೆ ಹಿಂಗೆತಾ ಮಾತ್ ಬಾತ್, ಶಾಲೆಲಿ ಮಕ್ಕಳ್ಗೆ ಪರೀಕ್ಷೆ ಮಾಡದೇ ರಜೆ ಕೊಡುಕುಂತ ಹೇಳಕನವೂ ನಾವ್ಗೆ ಅಷ್ಟು ಕೇರ್ ಆತ್ಲೆ, ರಜೆ ಕೊಟ್ಟ, ಆದ್ರೂ ಇಲ್ಲಿಗೆಲ್ಲಾ ಬಾಕಿಲೆ ಅಂತ ಹೇಳಿಕಂಡಿದ್ದ, ಅದೆಲ್ಲಾ ಸುಮ್ನೇ ಹೇಳ್ದೂ…. ಕೊರೋನಾ ಅಲ್ಲಿ ಉಟ್ಟು ಹೇಳ್ತಿದ್ದ , ಈಗ ಇಲ್ಲಿ ಉಟ್ಟು ಅಂತ ಹೇಳ್ವಾಂಗೆ ಆತು, ನೋಡಿ ….ನೋಡಿ …..ಬಂದೆ ಬುಟ್ಟತ್……..ನಾವು ಯಾರೂ ನೆನ್ಸಿತ್ಲೇ ಹಿಂಗೆಲ್ಲಾ ಆದುಂತಾ….. ಹಿಂಗೆ ಕಷ್ಟ ಬರೋಕುಂತಾ ಕೂಡ ಗೊತ್ತಿತ್ಲೆ, ಟಿವಿ, ಮೊಬೈಲ್ ಪೇಪರ್ ನೋಡ್ರೇ ಇದೇ ಆತು, ಜೀವ ಹಿಂಡುವ ರೋಗ ದಿನಕ್ಕೆ ಸೋಂಕಿತ್ರ ಸಂಖ್ಯೆ, ಸಾಯುವರ ಸಂಖ್ಯೆ ಹೆಚ್ಚಾಕನ ಸಂಕಟಾದೆ, ಎಷ್ಟೋ ಜನಕ್ಕೆ ಕೆಲ್ಸ ಇಲ್ಲದೆ , ದುಡ್ಡಿಲ್ದೆ ಒಂದೊತ್ತು ಊಟಕ್ಕೂ ಏನಿಲ್ದೆ ,ಸಹಾಯ ಮಾಡೋ ಕೈಂದ ಅನ್ನ ತಕ್ಕಂಡು ಬದುಕ್ವಾಂಗೆ ಅತ್. ನೋಡಕನಾ ಮಂಡೆ ಬೆಚ್ಚಾದೆ, ಇದ್ ಇನ್ನ್ ಎಷ್ಟ ದಿನಂತನೂ ಗೊತ್ಲೇ. ಎಲ್ಲವ್ಕೂ ತಲೆನೆ ಕೆಟ್ಟ್ ಹೋದಂಗೆ ಆಗುಟು, ಎಂತರಾ ಮಾಡ್ದು… ನಾವ್ ನಮ್ಮ ಜಾಗ್ರತೆಲಿ ಇರೋಕಷ್ಟೆ, ಈ ರೋಗಕ್ಕೆ ಹೆದ್ರಕಂಡ್ ಬದ್ಕವಂಗೆ ಆತ್. ಪೇಟೆಗೆ ಹೋಗಿ ಎಂತಾರ್ ತಂದ್ ತಿಂಬಕೆ ಕುದ್ರಕನ ನೆಂಪಾದೆ , ಇದ್ರಲಿ ಎಲ್ಲರ್ ಎಂತರ್ ವೈರಾಸ್ ಉಟ್ಟಾ ಹೆಂಗೆ,, ಹೇಳಿಕೂ ಆದ್ಲೆಂತ ಎಂಥಾ ಪರಿಸ್ಥಿತಿ ಬಾತ್. ಯಾರಾರ್ ಮನೆಗೆ ಹೊರಗಿನವು ಬಂದಲಾಂತ ಹೇಳಕನ ಹಕ್ಕಲೆ ಮನೆವ್ಕು ಹೆದ್ರಿಕೆ ಶುರಾದು!! , ಎಲ್ಲಿಗೆ ಮುಟ್ಟಿದೆ, ಎಲ್ಲಿಗೆ ನಿಂತದೆ ಕೂಡ ಗೊತ್ತಾದ್ಲೇ. ಜೀವನ
ನಾವ್ಗೆ ಬೇಕಾದಂಗೆ ದುಡ್ದು ತಿನ್ನುವಂಗೆ ಇತ್ತ್, ಈಗ ನೋಡ್ರೇ ಸರ್ಕಾರವೇ ನಮ್ಮ ನೋಡಿಕೊಳ್ವಂಗೆ ಆತ್. ಕೋಟಿ ಕೋಟಿ ಜನರ ನೋಡಿಕಂಡದೆ,ನಾವ್ಗೋಸ್ಕರ ಯೋಧರಂಗೆ ಡಾಕ್ಟರ್ ಗ, ನರ್ಸ್ ಗ ಪೋಲಿಸ್ ಗ ರಾತ್ರೀ ಹಗಲ್ ಕುಟುಂಬ ಬುಟ್ಟು ದುಡ್ದವೆ, ಅವ್ಕೂ ನಮ್ಮಂಗೆ ಕುಟುಂಬ ಉಟ್ಟು, ಅಪ್ಪಮ್ಮ/ ಮಕ್ಕಳ ಬುಟ್ಟ್ ಅವರ ಮುಖ ನೋಡದೇ ಎಷ್ಟೋ ದಿನವೇ ಕಳ್ತೊಳ, ನಿಜಕ್ಕೂ ಅವು ನಾವ್ಗೆ ಶ್ರೀರಕ್ಷೆ.

ಈ ಕೊರೊನಾ ಎಲ್ಲವ್ಕೂ ಪಾಠ ಕಲಿಸ್ತಾ ಉಟ್ಟು, ಪೇಟೆಲಿ ಉದ್ಯೋಗ ಮಾಡಿಕಂಡ್ ಇದ್ದವು ಪೂರ ಹಳ್ಳಿಗೆ ಬಂದ್ ಸೇರಿಕಂಡ,ವಿದೇಶಕ್ಕೆ ಹೋದವು ತಿರುಗಿ ಬಂದ, ಪೇಟೆಲಿ ಕೆಲ್ಸ ಮಾಡುವವು ಕೃಷಿಕನ ಮಗಾಗಿ ಕೆಲ್ಸ ಮಾಡುವೆ, ತೋಟಕ್ಕೆ ಹೋಗದವು ತೋಟಕ್ಕೆ ಹೋಗಿ ಕೆಲ್ಸ ಮಾಡ್ವೆ, ಶ್ರೀಮಂತರವ್ಕೆ ಕೆಲ್ಸಕ್ಕೆ ಜನ ಸಿಗದೆ ಅವರ್ರವರ ಕೆಲ್ಸ ಅವೇ ಮಾಡಿಕೊಂಡವೆ,ಅತ್ತ ಮಕ್ಕಳ್ಗೆ ಅಪ್ಪಮ್ಮ ನೊಟ್ಟಿಗೆ ಕೆಲಸ ಕಲ್ತಂಗೆ ಆತ್ .ಪೇಟೆ ಅಂಗಡಿಗೆ ಹೋಗಿ ಬೇಕರಿ ತಿಂಡಿ ತಿಂಬವೂ,ಈಗ ಅವ್ವೇ ಮನೆಲಿದ್ಕಂಡು ಹೊಸ ತಿಂಡಿಗಳ ಬಗ್ಗೆ ಕಲೆಯುದು ಅತ್ ಹಂಗೆ ಅಡುಗೆ ಮಾಡ್ದಾಂಗೂ ಆತ್ .ಇನ್ನೂ ಕೆಲವು ನೋಡ್ರೇ, ಬರ್ತೆಡೆ ಪಾರ್ಟಿ, ಮದ್ವೆ ಗ್ರಾಂಡಾಗಿ ಮಾಡ್ದು ಕಡಿಮೆ ಆತ್ ಎಲ್ಲಾ ಸರಳ ದಾರಿನ ಹಿಡ್ದಾಂಗೆ ಕಂಡಂದೆ. ಪೇಟೆ ಸುತ್ತಾಡಿಕಂಡಿದ್ದ್ ಪಾನಿಪುರಿ, ಮಸಲ್ ಪುರಿ ತಿಂಬೋದು, ಮಾಲ್ ಪಿಲ್ಮ್ ಗೆ, ಹೋದು, ಪೇಟೆಲಿ ಸಿಕ್ಕಿದೆಲ್ಲಾ, ಕಂಡದೆಲ್ಲಾ ಬೇಕುಂತ ಮನೆಗೆ ತಂದ್ ರಾಶಿ ಹಾಕುದು ಆತಿತ್, ಕಲರ್ ಪುಲ್ ಆಗಿದ್ದ ಲೈಪ್ ಲಿ, ನಿದ್ದೆ ಮಾಡಿ ಎದ್ರ್ ವಷ್ಟೊತ್ತಿಗೆ ಎಲ್ಲಾ ನಿಂತ್ ಹೋತ್.. ಈಗ ಪರ್ಸ್ ಲಿ ಎಷ್ಟ್ ದುಡ್ದು ಉಟ್ಟುಂತ ಲೆಕ್ಕ ಹಾಕ್ದು ಚಿಲ್ಲರೆ ಬಿದ್ದರೂ ಹೆಕ್ಕೀಸುವಂಗೆ ಜವಾಬ್ದಾರಿ ಬಾತ್. ಪ್ರತಿ ಮನುಷ್ಯಂಗೂ, ದೇಶಕ್ಕೂ, ಆರ್ಥಿಕ ನಷ್ಟ ಉಂಟಾತ್. ಇದ್ರೆಲ್ಲಾ ಸರಿ ಮಾಡ್ಸಿಕಂಕೆ ಅಷ್ಟೇ ಕಾಲನೂ ಹಿಡೆದೂ, ಮಕ್ಕಳಿಗಂತು ಈ ತಿಂಗಳ್ಲಿ ಪಾಸ್ ಪೈಲ್ ಆಗೀ ಅಜ್ಜಿ ತಾತನ ಮನೆ, ನೆಂಟ್ರ ಮನೆಗೆ ಸುತ್ತಾಡ್ದಿದ್ದ , ಬೇಸಿಗೆ ಕ್ಯಾಂಪ್ ಲಿ ಎಂಜಾಯ್ ಮಾಡ್ತಿದ್ದ ಆದ್ರೆ ಹಂಗೆ ಆತ್ಲೆ ಸರಿ ಪರೀಕ್ಷೇನೂ ಇಲ್ಲೆ, ಓದಿಕೂ, ಆಟಡಿಕೂ,ಮನಸ್ಸ್ ಇಲ್ಲಂದಂಗೆ ಆಗುಟು.

ಇನ್ನೊಂದು ಕಡೆ ನೋಡ್ರೇ ಎಷ್ಟೋ ಮಂದಿ ಪೇಟೆ/ಬೇರೆ ಊರ್ ಲಿ ಬಾಕಿ ಆಗಲ, ಅವು ಎಷ್ಟ್ಂತ ರೂಮ್ ಲೀ ಇರಕ್.. 4 ಗೋಡೆ ಮಧ್ಯೆ ಇದ್ದ್ ಟಿವಿ ಮೊಬೈಲ್ ನೋಡಕ್, ನನ್ನ ಪ್ರೆಂಡ್ ಗ ಹೇಳ್ವೆ, ನೀವ್ಗೆ ಲಾಯ್ಕ್ ಮನೆಲಿ ಆರಾಮಲಿ ಒಳರಿ, ತೋಟಕ್ಕೆ ಆಚೆ ಈಚೆ ಹೋಗಿ ಕೆಲ್ಸ ಮಾಡಿಕಂಡ್ ಟೈಮ್ ಹೋದೆ, ನಾವು ಎಲ್ಲಿಗೆ ಹೋದು,ಎಂತ ಕೆಲ್ಸ ಮಾಡ್ದು.. ಒಮ್ಮೆ ಮನೆಗೆ ಸೇರಿಕಂಡ್ರೆ ಸಾಕ್ ಮತ್ತೆ ಕೃಷಿ ಮಾಡಿಕಂಡ್ ಮನೇಲೀದ್ದಾನೆ, ಅಪ್ಪಮ್ಮ ಗೂ ಹೆದ್ರಿಕೆ, ನಮ್ಮ ಮಕ್ಕ ದೂರಲಿ ಒಳಂತ ಹೇಳ್ವೆ, ಅದ್ ನಿಜ ಅವರ ಕಷ್ಟನೂ ಅನುಭವಿಸಿದವಂಗೆ ಗೊತ್ತು, ಒಟ್ಟು ಕೈಕಾಲ್ ಕಟ್ಟಿ ಶಿಕ್ಷೆ ಕೊಟ್ಟು ಕುದ್ರಸಿದಾಂಗೆ ಆಗ್ಟು.

ಹಳ್ಳಿಲಿ ಬೇಕಾದರ ಸ್ವಲ್ಪ ಮಟ್ಟಿಗೆ ಎನಾರ್ ನಟ್ಟಿ ಮಾಡಿಕಂಡ್ ಗೈಪುಗೆ ಎಂತಾರ್ ಮಾಡಕ್ ಸ್ವಲ್ಪ ದಿನ ದೂಡಕ್, ಆದ್ರೇ ಎಷ್ಟೋ ಮಂದಿ ಪೇಟೇಲಿ ಹಳ್ಳಿಲಿ ದಿನ ಕೆಲ್ಸ ಮಾಡಿಕಂಡ್ ಆ ದುಡ್ಡಿಲಿ ದಿನ ಕಳೆವು ಒಳ ಅವ್ಕೆಲ್ಲಾ ಯಾರ್ ಗತಿ, ಹೆಂಗಾರ್ ಬದ್ಕ್ ತಿದ್ದ ಈಗ ಕೊರೋನಂದ ಅವರ ಸ್ಥಿತಿ ನೋಡ್ರೇ ಸಂಕಟಾದೆ. ಹಂಗೆ ಇನ್ನು ಮಧ್ಯಮ ವರ್ಗದವು ಕೂಡ ಇನ್ನಬ್ಬರೊಟ್ಟಿಗೆ ಕೇಳಿಕಂಡ್ ಬದ್ಕೋಕಷ್ಟೇ.. ಅದ್ಕೆ ಸರ್ಕಾರ ನಮ್ಮ ನೋಡಿಕಂಡ್ ರಕ್ಷಾ ಕವಚ ಆಗಿ ನಿಂತಳ, ಹಂಗೆನೇ ನಮ್ಮ ,ಬೇರೆ ಊರ್ ಲಿ ಕಷ್ಟ ಇದ್ದವ್ಕೆ ಸಂಘಟನೆ ಮಾಡಿಕಂಡ್ ಸಹಾಯ ಮಾಡ್ವೆ ,ಒಳ್ಳೆ ಕೆಲ್ಸ ಮಾಡ್ವೆ.

ಇನ್ನೂ ಕೆಲವು ಹಳ್ಳಿ ಕಡೆ ನೋಡ್ರೇ ಅವು ಕೆಲ್ಸ ಮಾಡ್ತಾ ಇದ್ದವೆ, ಮಳ್ಗಾಲಕ್ಕೆ ಬೇಕಾದ್ರ ಸೌದೆ,ದರ್ಗ್ ಮಾಡ್ದು, ತಿಂಡಿ ತಿಂಬಕ್ಕೆ ಹಪ್ಪಳ ಸಂಡಿಗೆ ಮಾಡ್ದ್ರಲಿ ಬಾಕಿಯಾಗಲಾ. ಅವ್ಕೆ ಕೆಲ್ಸ ಮಾಡಿಕಂಡ್ ಆರಾಮಲಿ ಇದ್ರೂ ಈ ಕೊರೋನ ಬಗ್ಗೆ ಜಾಗ್ರತೆ ಮಾಡಿಕಂಡವೆ, ಹಂಗೆ ಟಿವಿಲಿ ಭಯಂಕರ ಕೊರೋನಾ ಬಗ್ಗೆ ಹೆದ್ರವಂಗೆ ಹೇಳ್ದರಿಂದ್ಲೆ ಜನಗ ಮನೆ ಒಳಗೆ ಹೆದ್ರಿ ಕುದ್ದವೆ,ಹೊರಗೆ ಹೋಕನಾ ನ್ಯೂಸ್ ನೆಂಪಾಗಿ ಜಾಗ್ರತೆ ಮಾಡ್ವೆ, ನ್ಯೂಸ್ ಅವು ಒಳ್ಳ ‘ಜಾಗೃತಿ ವೇದಿಕೆ’ ನ ಕೊಡ್ತೊಳ.ಎಷ್ಟೋ ಜನರ ಜೀವ ಉಳಿಸಿಕೂ ಕಾರಾಣಾದ.

ಒಮ್ಮೆ ಕೊರೊನಾ ಹೋಗಲಿ, ಅದ್ರ ನೆನ್ಸಕನ ಹೆದ್ರಿಕೆನೂ ಆದೆ, ಎಲ್ಲರ ನೆಮ್ಮದಿ ನಿದ್ದೆನಾ ಕೆಡಿಸಿತ್.
ಹೆಂಗಾರಾಗಲಿ ಮೋದಿ ಹೇಳ್ದಾಂಗೆ 21 ದಿನ ಕಳ್ದಾತ್, ಇನ್ನ್ ನೂ 19 ದಿನ ಮನೆಲಿ ಇರಮ..ನಮ್ಮ ಒಳ್ಳದಕ್ಕೆ ಹೇಳ್ದರ ಪಾಲ್ಸಮಾ ,ಹಂಗೆ ಲಾಕ್ ಡೌನ್ ಮುಗ್ದರೂ ನಾವು ಸಲ್ಪ ತಿಂಗ ಜಾಗ್ರತೆಲಿ ಇರೋಕು ,ನಮ್ಮ ಜೀವ ಉಳಿಸಿಕಂಕೆ ನಾವೇ ಹೋರಾಡೊಕು, ಸಲ್ಪ ದಿನ ಕಷ್ಟ ಅದು ಅದ್ರು ದುಡ್ಡಿದ್ದವು ಕಷ್ಟ ಪಡವ್ಕೆ ಸಹಾಯ ಮಾಡ್ಕಂಡ್ ಸಲ್ಪ ದಿನ ಗಂಜಿಯೂಟ ಚಟ್ನಿ ಮಾಡಿಕಂಡ್ ಹೊಟ್ಟೆ ತುಂಬಿಸಕ್, ಸಲ್ಪ ದಿನ ಸರ್ಕಾರ ಹೇಳ್ದಂಗೆ ಕಾಲ ಕಳೆಯಮ. ನಾವ್ಗಂತಲೆ ಯೋಧರಂಗೆ ಕಷ್ಟ ಪಡವ್ರ ಡಾಕ್ಟರ್ ನರ್ಸ್, ಪೋಲಿಸ್,ಹಂಗೆ ಉಳಿದವ್ಕು ಸಹಾಯ ಮಾಡ್ದವ್ಕೂ ಒಳ್ಳೆದಾಗ್ಲಿ, ನಾವು, ಅವು ಕೂಡ ಸೇಪ್ ಆಗಿರಿಲಿ ,ಹಳೆ ಸರಳ ಜೀವನನ ಅಳವಡಿಸ್ಕಮ. ಕೊರೋನಾ ಒಮ್ಮೆ ಹಳ್ಳಿಂದ ಪಟ್ಟಣಂದ ದೇಶ, ಜಗತ್ತಿಂದ ಬುಟ್ಟು ಹೋಗ್ಲಿ ಕೊರೊನಾಕ್ಕೆ ಮುಕ್ತಿ ಸಿಕ್ಲಲಿ.
“ಮನೆಯೇ ರಕ್ಷಾಬಂಧನ ”

*✍️ಪೂರ್ಣಿಮಾ ಚೊಕ್ಕಾಡಿ*

ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.