ಕೊರೋನಾ ಕಾಲದ ಕವನದ ಸಾಲುಗಳು

Advt_Headding_Middle
Advt_Headding_Middle

 

✍️ ಜ್ಞಾನಿ

 

*ಲಾಕ್ ಡೌನ್*

ಸರಕಾರ ಘೋಷಿಸಿದೆ ಲಾಕ್ ಡೌನ್ |
ಇಲ್ಲದಿದ್ದರೆ ನಾವು ಕ್ಲೋಸ್ ಡೌನ್ ||
ಬೆಚ್ಚಗೆ ಇರಿ ಮನೆಯೊಳಗೆ ನೀವು |
ಹೊರಗೆ ಬಂದರೆ ಮಾಡುವರು ಪೊಲೀಸರು ನೋವು ||
ಅವಶ್ಯಕತೆ ಇದ್ದಷ್ಟೆ ಖರೀದಿಸಿ |
ಅನಾವಶ್ಯಕ ತಿರುಗಾಟ ನಿಲ್ಲಿಸಿ ||
ಮುಂದುವರಿಸಿರಿ ನಿಮ್ಮ ನೆಚ್ಚಿನ ಹವ್ಯಾಸಗಳ |
ಓದಿರಿ ಒಳ್ಳೆಯ ಪುಸ್ತಕಗಳ ||
ಜೋಡಿಸಿ ಕೈಗಳ ಸರಕಾರ ದೊಂದಿಗೆ |
ಹೊಡೆದೋಡಿಸಿ ಕೊರೊನವ ನಿಯಮ ಪಾಲನೆಯ ದೃಢ ಸಂಕಲ್ಪದೊಂದಿಗೆ

*ಕೊರೊನ*

ಚೀನಾದ ವುಹಾನ್ನಲ್ಲಿ ಜನಿಸಿದ ನೀನು
ತಲುಪಿದೆ ಬಹುಬೇಗ ನಮ್ಮ ದೇಶವನು
ಬಡವ ಬಲ್ಲಿದ ಎಲ್ಲರಲ್ಲೂ ನಿನಗೆ ಪ್ರೀತಿ
ಹುಲು ಮಾನವರಿಗೆ ಹಿಡಿಸಿದೆ ನಿನ್ನಯ ಬೀತಿ
ಮೆಲ್ಲನೆ ಒಳಹೊಕ್ಕು ಮಾಡುವೆ ಅವಾಂತರ
ಎಲ್ಲರಿಗೂ ಅರಿವಾಗಿದೆ ಇಂದು ನಿನ್ನ ಗಂಡಾಂತರ
ಬಂಧಿಸಿದೆ ಎಲ್ಲರನ್ನೂ ಮನೆಯೊಳಗೆ
ತೋರಿಸಿದೆ ನಿನ್ನ ಶೌರ್ಯ ಪ್ರತಿ ಗಳಿಗೆ
ಸಾಕಪ್ಪ ಸಾಕು ನಿನ್ನ ಆರ್ಭಟ
ನಿಲ್ಲಿಸು ನಿನ್ನ ಹುಚ್ಚಾಟ
ಕಂಡು ಹುಡುಕುವೆವು ನಿನಗೊಂದು ರಾಮಬಾಣ
ಕಟ್ಟುವೆವು ನಿನ್ನ ಹೆಡೆಮುರಿಯ ತಕ್ಷಣ

*ತಾಯ್ನಾಡು*

ಅವಕಾಶಗಳನ್ನರಸಿ ಹಿಂದೆ ಓಡಿದ್ದರು ಬಹಳ ಮಂದಿ |
ಹಣವಿದ್ದರೆ ಎಲ್ಲವನ್ನೂ ಸಾದಿಸಬಹುದು ಎಂದು |
ತಂದೆ ತಾಯಿ ಬಂದು ಬಳಗ ಯಾರೂ ತಡೆಯಾಗಲಿಲ್ಲ |
ಊರು ಕೇರಿ ಹೊಲ ಗದ್ದೆಗಳ ತೊರೆದರು ಅಂದು |
ಕಾರು ಬಂಗಲೆಗಳ ಒಡೆಯರಾದರು ಹೆಮ್ಮೆಯಿಂದ |
ಸುಖ ಸಂಪತ್ತು ಮೋಜು ಮಸ್ತಿ ಶಾಶ್ವತ ಎಂದು ಭಾವಿಸಿದ್ದರು |
ಒಂದು ಸೂಕ್ಷ್ಮ ವೈರಾಣುವಿಗೆ ಬಸವಳಿದರು ಬೆಂಡಾದರು |
ಬದುಕಿದರೆ ಬದುಕಬೇಕು ತಾಯ್ನಾಡಿನಲ್ಲಿ ಎಂದು ಓಡೋಡಿ ಬಂದರು ಇಂದು ||

✍️ *ಡಾ. ಎನ್. ಎ. ಜ್ಞಾನೇಶ್*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.