ಬಂಟರ ಸಂಘ ಬಾಳಿಲ‌ ವಲಯದಿಂದ 60 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಬಂಟರ ಸಂಘದ ಬಾಳಿಲ ವಲಯದ ಆಶ್ರಯದಲ್ಲಿ ಬಾಳಿಲ ವಲಯದ ಪದಾಧಿಕಾರಿಗಳಿಂದ, ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಅಕ್ಕಿ ಮತ್ತು ಆಹಾರ ಸಾಮಾಗ್ರಿಗಳು ಖರೀದಿಸಿ ಬಾಳಿಲ ವಲಯದ ಸುಮಾರು 7 ಗ್ರಾಮಗಳ ವ್ಯಾಪ್ತಿಯ ಬಂಟರ ಬಾಂಧವರಿಗೆ ಮತ್ತು ಇತರ ಸಮಾಜ ಬಾಂಧವರಿಗೆ ಹಂಚಲಾಯಿತು. ಏ. 16 ರಂದು ಬೆಳಿಗ್ಗೆ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಆವರಣದಲ್ಲಿ ಮೂರು ಮಂದಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಿ ಬಳಿಕ ವಲಯ ವ್ಯಾಪ್ತಿಯ ಬಡ ಜನರ ಮನೆಗೆ ಕೊಂಡೊಯ್ದು ಹಂಚಲಾಯಿತು. ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ವಾಹನಗಳಲ್ಲಿ ಕಿಟ್ಟನ್ನು ಮನೆ ಮನೆಗಳಿಗೆ ತಲುಪಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿ ಬಿ. ಸುಭಾಶ್ಚಂದ್ರ ರೈ, ಉಪಾಧ್ಯಕ್ಷ ಎನ್. ಜಿ. ಪ್ರಭಾಕರ ರೈ ಪಟ್ಟೆ, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಬೆಂಗಳೂರಿನಲ್ಲಿ ಡಿವೈ.ಎಸ್.ಪಿ.ಯಾಗಿರುವ ಜಗನ್ನಾಥ ರೈ ಬಜನಿ,
ಬಾಳಿಲ ವಲಯಾಧ್ಯಕ್ಷ ಎನ್. ವಿಶ್ವನಾಥ ರೈ ಕಳಂಜ, ಗೌರವಾಧ್ಯಕ್ಷ ಚಂದ್ರಹಾಸ ರೈ, ಕಾರ್ಯದರ್ಶಿ ಬಾಲಕೃಷ್ಣ ರೈ ಪಾದೆಕಲ್ಲು, ವಲಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ರೈ ನಾಲ್ಗುತ್ತು, ಗೌರವಾಧ್ಯಕ್ಷೆ ಶ್ರೀಮತಿ ಪ್ರವೀಣಾ ಪಿ. ರೈ ಮರುವಂಜ, ಕಾರ್ಯದರ್ಶಿ ಲೀಲಾವತಿ ವಿ. ರೈ, ಬಜನಿ, ಹಿರಿಯರಾದ ರಮೇಶ್ ರೈ ದೇರಂಪಾಲು ಮತ್ತು ಬಾಳಿಲ ವಲಯದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಉಪಾಧ್ಯಕ್ಷ ಎನ್.ಜಿ. ಪ್ರಭಾಕರ ರೈ ವಂದಿಸಿದರು.

ಸಮಾಜದಲ್ಲಿ ಕಷ್ಟ ಬಂದೊದಗಿದಾಗ ಸಂಪತ್ತು, ಅನುಕೂಲ ಇದ್ದವರು ಇಲ್ಲದವರಿಗೆ ದಾನ ಮಾಡುವುದೇ ನಿಜವಾದ ಶ್ರೀಮಂತಿಕೆ ಮತ್ತು ಮಾನವ ಧರ್ಮ – ಆಂಜನೇಯ ರೆಡ್ಡಿ ಪಿ.ಎಸ್.ಐ. ಬೆಳ್ಳಾರೆ ಪೋಲಿಸ್ ಠಾಣೆ.
ಬಂಟರ ಸಂಘ ಬಾಳಿಲ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿಕೊಂಡು ಸಮಾಜದಲ್ಲಿರು ಬಡ ವರ್ಗದ ಜನರಿಗೆ ಆಹಾರ ಸಾಮಾಗ್ರಿಗಳನ್ನು ಅವರ ಮನೆಗೆ ಮುಟ್ಟಿಸುವ ಮೂಲಕ ಆದರ್ಶ ಮೆರೆದಿದ್ದಾರೆ – ಜಗನ್ನಾಥ ರೈ, ಡಿ.ವೈ.ಎಸ್.ಪಿ. ಬೆಂಗಳೂರು ಹೊರವಲಯ.

ಬಂಟರ ಸಂಘ ಬಾಳಿಲ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ – ಎನ್. ಜಯಪ್ರಕಾಶ್ ರೈ, ಅಧ್ಯಕ್ಷರು, ಸುಳ್ಯ ತಾಲೂಕು ಬಂಟರ ಸಂಘ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.