ನಮಗಾಗಿ ನಾವು ಮನೆಯಲ್ಲೇ ಇರೋಣ

Advt_Headding_Middle
Advt_Headding_Middle

✍️ ಬರಹ: *ತನುಶ್ರೀ ಬೆಳ್ಳಾರೆ*

ಮನೆಯ ಒಳಗೆ ಬಂಧನವಾಗಿರುವ ಜನಗಳು, ಹೊರಗಡೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿರುವ ಪ್ರಾಣಿ-ಪಕ್ಷಿಗಳು, ದಿನನಿತ್ಯ ಕಷ್ಟಪಡುತ್ತಿರುವ ವೈದ್ಯರು, ಪೋಲಿಸರು, ಸಂಘ ಸಂಸ್ಥೆಗಳು, ಯೋಧರು, ಆಶಾಕಾಯ೯ಕತ೯ರು.. ಇನ್ನಿತರು.. ಇವರೆಲ್ಲರ ಮಧ್ಯದಲ್ಲಿ ಜನರಿಗೆ ಮಾಹಿತಿಯನ್ನು ತಕ್ಕ ಸಮಯಕ್ಕೆ ಕೊಡುತ್ತಿರುವ ಮಾಧ್ಯಮ ಮಿತ್ರರು.

ಹಾ… ಇದೆಲ್ಲಾ ಸರಿ.. ಪ್ರಧಾನ ಮಂತ್ರಿ ಆದೇಶವನ್ನು ಕೊಟ್ಟರು ಲಾಕ್ಡೌನ್ ಮಾಡಿ ಎಂದು. ಸರಿ..ಅವರು ಮಾಡಿದ್ದು ನಮ್ಮ ದೇಶದ ಜನಗಳಿಗಾಗಿ. ಆದರೆ ಪಾಲಿಸಿದವರು ಎಷ್ಟು ಮಂದಿ..?? ನಮಗಾಗಿ ಒಳ್ಳೆಯದನ್ನು ಮಾಡಲು ಯಾರಾದರೂ ಮುಂದೆ ಬಂದರೆ ರಾಜಕೀಯ ದೃಷ್ಟಿಯಲ್ಲಿ ನಮ್ಮ ಜನರು ಮಾತನಾಡುತ್ತಾರೆ ಇದೆಷ್ಟು ಸರಿ..?? ನಮಗೆ ನಮ್ಮ ಜೀವಕ್ಕಿಂತ ರಾಜಕೀಯ ದೊಡ್ಡದಾಗಿದೆ ಅಷ್ಟೇ..

ಸ್ನೇಹಿತರೇ.. ಮೋದಿಯವರು ತಂದ ಕೆಲವೊಂದು ನಿಯಮಗಳು ಎಷ್ಟು ಸುರಕ್ಷಿತ ಎಂದು ಒಮ್ಮೆ ಚಿಂತಿಸಿ..ನಿಮ್ಮ ಮನೆಯಲ್ಲಿ ನಿಮ್ಮನ್ನು ಇರಲು ಹೇಳಿದ್ದು ಅಷ್ಟೇ.. ಬೇರೆ ಯಾರದೋ ಮನೆಯಲ್ಲಿ ಇರೀ ಅಂದಿಲ್ಲ.. ಇಷ್ಟು ದಿನ ಕೆಲಸ, ಸಂಬಳ ಅಂತ ಕಷ್ಟಪಡುತ್ತಿದ್ದ ನೀವು, ಇಂದು ಮನೆಯಲ್ಲಿ ಹೆಂಡತಿ ಮಕ್ಕಳು ಅಪ್ಪ ಅಮ್ಮ ಎಲ್ಲರ ಜೊತೆ ಖುಷಿಯಾಗಿ ಮಾತನಾಡುತ್ತಾ ಎಲ್ಲರ ಕಷ್ಟ-ಸುಖದೊಂದಿಗೆ ಪಾಲುದಾರರಾಗುತ್ತಿದ್ದೀರಿ.. ಮನೆಯಲ್ಲಿ ತೋಟದ ಕೆಲಸವನ್ನು, ಇನ್ನಿತರ ಕೆಲಸವನ್ನು ಮಾಡುತ್ತಾ ಖುಷಿ ಖುಷಿಯಾಗಿರುವಿರಿ.. ಹಣದ ಸಮಸ್ಯೆ ಒಂದು ಬಿಟ್ಟರೆ ನಮ್ಮಲ್ಲಿ ಪ್ರೀತಿಗೆ ಕೊರತೆ ಇದೆಯೇ..?? ಯೋಚಿಸಿ

ಜೀವನ ನಡೆಸಲು ಕಷ್ಟ ಪಡುವ ಜನಗಳಿದ್ದಾರೆ ನಮ್ಮ ಮುಂದೆ. ಒಂದು ಹೊತ್ತಿನ ತುತ್ತು ಅನ್ನಕ್ಕಾಗಿ ಕಣ್ಣೀರು ಹಾಕುವ ಜನರಿದ್ದಾರೆ. ಇವರಾದರೋ ಮನೆಯಲ್ಲಿ ಕುಳಿತುಕೊಂಡು ತಮ್ಮ ಆರೋಗ್ಯದ ದೃಷ್ಟಿಯಿಂದ ಲಾಕ್ಡೌನ್ ಪಾಲನೆ ಮಾಡುತ್ತಿದ್ದಾರೆ. ಕಾರಣ ಅವರಿಗೆ ಪ್ರತಿಯೊಂದರ ಬೆಲೆ ಗೊತ್ತಿದೆ. ನಾಳೆಯ ದಿನದ ಬಗ್ಗೆ ಅರಿವಿದೆ. ಆದರೆ ನಮಗೆ ಬಿಸಾಡುವಷ್ಟು ಅನ್ನ, ಓಡಾಡಲು ಕಾರು, ಬೈಕು, ಬೇಕಾದಷ್ಟು ಹಣ ಅಲ್ವೇ..? ಬೇರೆಯವರ ಜೀವದ ಬಗ್ಗೆ ಚಿಂತೆ ಇಲ್ಲ.. ನಾವಾಯ್ತು ನಮ್ಮ ಜೀವನ ಆಯ್ತು ಅನ್ನೋ ಜನಗಳು ಕಣ್ರೀ ನಾವೆಲ್ಲಾ.. ಬೇಡ ಬೇಡ ಅಂದ್ರೂ ಪೋಲಿಸರ ಕಣ್ಣು ತಪ್ಪಿಸಿ ಓಡಾಡ್ತೀರಾ.. ಇದರಿಂದ ಪೋಲಿಸರಿಗೆ ನಷ್ಟ ಅಲ್ಲ. ಅವರು ನಿಮಗಾಗಿ ನಿಮ್ಮ ಸುರಕ್ಷಿತಕ್ಕಾಗಿ ಅಷ್ಟೆಲ್ಲ ಮಾಡುದು ನೆನಪಿರಲಿ…

ಪೋಲಿಸರಿಗೆ ಮನೆ ಇದೆ. ಅವರನ್ನೇ ನಂಬಿಕೊಂಡಿರುವ ದೊಡ್ಡ ಕುಟುಂಬ ಇದೆ. ಜನಗಳಿಗಾಗಿ ರೋಡಿನಲ್ಲಿ ಮಲಗಿ ಕಷ್ಟ ಪಡುತ್ತಿದ್ದಾರೆ.. ನಿದ್ದೆ ಇಲ್ಲದೆ ಒದ್ದಾಡುತ್ತಿರುವ ವೈದ್ಯರು , ತಮಗೆ ರೋಗ ಬಂದರೂ ಜನಗಳಿಗಾಗಿ ಶ್ರಮಿಸುತ್ತಿದ್ದಾರೆ.. ಆಶಾಕಾಯ೯ಕತ೯ರು ಮಾಹಿತಿಯನ್ನು ನೀಡುತ್ತಾ ಅರಿವನ್ನು ನೀಡುತ್ತಾ ಕಾಯ೯ನಿವ೯ಹಿಸುತ್ತಿದ್ದಾರೆ.. ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ ಜನಗಳಿಗಾಗಿ ಸ್ವಯಂ ಸೇವಕರು ಸಹಾಯ ಹಸ್ತವನ್ನು ಚಾಚಿದ್ದಾರೆ.
ಒಂದಂತೂ ನೆನಪಿರಲಿ.. ಇಷ್ಟೆಲ್ಲಾ ಮಾಡುತ್ತಿರುವುದು ನಮಗಾಗಿ ನಮ್ಮ ಒಳ್ಳೆಯದಕ್ಕಾಗಿ… ರಾಜಕೀಯವಾಗಿ ಧಮ೯ದ ಆಧಾರದಲ್ಲಿ ಚಿಂತಿಸುವುದು ಬಿಡಿ. ಮಾನವೀಯತೆ ದೃಷ್ಟಿಯಲ್ಲಿ ಯೋಚಿಸಿ.
ಇವರನ್ನು ಪ್ರೀತಿಸಿ ಗೌರವಿಸಿ.. ಆಲೋಚನೆಯನ್ನು ಬದಲಾಯಿಸಿ

*✍️ ತನುಶ್ರೀ ಬೆಳ್ಳಾರೆ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.