HomePage_Banner
HomePage_Banner
HomePage_Banner
HomePage_Banner

ಪಾಜಪಳ್ಳದಲ್ಲಿ ಅಸ್ವಸ್ಥಗೊಂಡ ಬಿದ್ದಿದ್ದ ತುಮಕೂರಿನ ವ್ಯಕ್ತಿ ಆಸ್ಪತ್ರೆಗೆ

 

6 ತಿಂಗಳ ಹಿಂದೆ ಮನೆ ಬಿಟ್ಟಿದ್ದ ವೃದ್ಧ


ಬಾಳಿಲ ಗ್ರಾಮದ ಪಾಜಪಳ್ಳದಲ್ಲಿ ಅಸ್ವಸ್ಥ ಕೊಂಡು ಬಿದ್ದಿದ್ದ ವೃದ್ದರೊಬ್ಬರನ್ನು ಊರವರ ಸಹಕಾರದಲ್ಲಿ ಸಿಡಿಪಿಒ ಹಾಗೂ ಬಾಳಿಲ ಗ್ರಾ.ಪಂ.ಪಿ.ಡಿ.ಒ. ಆಸ್ಪತ್ರೆ ಗೆ ಸೇರಿಸಿದ ಘಟನೆ ಇಂದು‌ ನಡೆದಿದೆ.

ಪಾಜಪಳ್ಳದಲ್ಲಿ ಸುಮಾರು 75 ವರ್ಷ ಪ್ರಾಯದ ವೃದ್ಧ ರೊಬ್ಬರು ರಸ್ತೆಯ ಬದಿಯಲ್ಲಿ ಬಿದ್ದಿದ್ದರು. ಊರವರು ಆ ವೃದ್ಧ ನನ್ನು ನೋಡಿ, ಬಳಿಕ ಗ್ರಾ.ಪಂ. ಪಿ.ಡಿ.ಒ. ಚಂದ್ರಾವತಿ ಹಾಗೂ ಸಿಡಿಪಿಒ ರಶ್ಮಿ ಅಶೋಕ್ ರಿಗೆ ವಿಷಯ ತಿಳಿಸಿದರು. ಅವರಿಬ್ಬರೂ ಸ್ಥಳಕ್ಕೆ ಬಂದರು. ಬಳಿಕ ಸ್ಥಳೀಯ ರು ಆ ವೃದ್ಧ ನನ್ನು ಮೇಲೆತ್ತಿ ತಿಂಡಿ ನೀಡಿದರು. ವೃದ್ಧ ಮಾತನಾಡುತ್ತಿ ರಲಿಲ್ಲವಾದ್ದರಿಂದ ಪತ್ತೆ ಕಷ್ಟವಾದರೂ, ಅವರ ಜತೆಯಲ್ಲಿದ್ದ ಚೀಲವನ್ನು ಪರಿಶೀಲನೆ ನಡೆಸಲಾಯಿತು. ಅದರಲ್ಲಿ ಗುರುತು ಚೀಟಿ ಇತ್ತು. ಅದರಲ್ಲಿ ತುಮಕೂರಿನ ತಿಮ್ಮಯ್ಯ ಎಂದು ಇದ್ದುದರಿಂದ ಪೋಲೀಸರ ಸಹಾಯ ಪಡೆದು ಅವರ ಮಗನನ್ನು ಸಂಪರ್ಕಿಸಲಾಯಿತು. ವೃದ್ಧ ತಿಮ್ಮಯ್ಯ 6 ತಿಂಗಳ ಹಿಂದೆ ಮಗಳ ಮನೆಗೆ ಹೋಗಿ ಬರುವುದಾಗಿ ಮನೆ ಬಿಟ್ಟಿದ್ದಾರೆಂದು ಮಗ ತಿಳಿಸಿದರೆಂದು ತಿಳಿದು ಬಂದಿದೆ.

ಬಳಿಕ ಅಸ್ವಸ್ಥತೆ ಗೊಂಡಿದ್ದ ವೃದ್ಧ ನನ್ನು ಸಿ.ಡಿ.ಪಿ.ಒ. ಹಾಗೂ ಪಿ.ಡಿ.ಒ. ನೇತೃತ್ವದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತು. ವೃದ್ದರಿಗೆ ಜ್ವರ ಹಾಗೂ ಕೆಮ್ಮು ಇತ್ತೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.