ಸುಳ್ಯ ತಾಲೂಕಿನ ತುರ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಸಭೆ

Advt_Headding_Middle
Advt_Headding_Middle

ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ತುರ್ತು ಬೋರ್‌ವೆಲ್ ಕೊರೆಯಲು ಅನುಮತಿ

ಸಹಾಯಕ ಕಮಿಷನರ್ ಡಾ.ಯತೀಶ ಉಳ್ಳಾಲ ಹೇಳಿಕೆ

 ತಾಲೂಕಿನ ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ತುರ್ತು ಬೋರ್‌ವೆಲ್ ಕೊರೆಯಲು ಅನುಮತಿ ನೀಡುವುದಾಗಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ ಉಳ್ಳಾಲ ಹೇಳಿದರು.


ಅವರು ಸುಳ್ಯ ತಾಲೂಕಿನ ತುರ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಗುರುವಾರ ತಾಲೂಕುಪಂಚಾಯಿತಿನಲ್ಲಿ ಸಭೆ ನಡೆಸಿ, ಕೊರೊನಾ ಲಾಕ್‌ಡೌನ್ ನಿಂದ ನೀರಿನ ಸಮಸ್ಯೆ ಇದ್ದಲ್ಲಿ ಬೋರ್‌ವೆಲ್ ಕೊರೆಯಲು ಆಗುತ್ತಿಲ್ಲ. ಇದಕ್ಕೆ ಅವಕಾಶ ನೀಡಬೇಕೆಂದು ಗ್ರಾ.ಪಂ.ಪಿಡಿಒ ಬೇಡಿಕೆ ಇಟ್ಟಾಗ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಹ್ಯಾಂಡ್‌ಪಂಪ್ ದುರಸ್ಥಿ ಮಾಡಬೇಕು. ತಾಲೂಕಿಗೊಂದು ಬೋರ್‌ವೆಲ್ ಕೊರೆಯುವ ಯಂತ್ರಕ್ಕೆ ಅನುಮತಿ ನೀಡಿ ತಾಲೂಕಿನಲ್ಲಿ ಯಾವ ಗ್ರಾಮಗಳಲ್ಲಿ ಅವಶ್ಯಕತೆ ಇದೆ ಅಲ್ಲಿ ಕೊರೆಯಲು ಅನುಮತಿ ನೀಡಲಾಗುವುದು ಎಂದರು.

ಪ್ರತಿ ಗ್ರಾಮದ ನೀರಿನ ಸಮಸ್ಯೆಗಳನ್ನು ಆಲಿಸಿದ್ದ ಕಮಿಷನರ್ ತಾಲೂಕಿನಲ್ಲಿ ೧೦ಕಡೆಗಳಲ್ಲಿ ನೀರಿನ ಘಟಕದ ಪಂಪ್‌ಗೆ ವಿದ್ಯುತ್ ಸಂಪರ್ಕ ನೀಡಿಲ್ಲಿ. ಅದನ್ನು ಕೂಡಲೇ ಮೆಸ್ಕಾಂ ನೀಡಬೇಕೆಂದು ಸೂಚನೆ ನೀಡಿದರು. ನೀರಿನ ಬಾಕಿ ಇರುವ ಕಾಮಗಾರಿಗಳನ್ನು ತುರ್ತಾಗಿ ನಡೆಸುವಂತೆಯೂ ಜಿ.ಪಂ.ಇಂಜಿನಿಯರ್‌ಗಳಿಗೆ ಸಹಾಯಕ ಕಮಿಷನರ್ ಸೂಚನೆ ನೀಡಿದರು. ತಾವು ಅಧಿಕಾರಿ ಗಳು. ಕೊರೊನಾ ಕೆಲಸದ ಜತೆಗೆ ತಮ್ಮ ಇಲಾಖೆಯ ಕೆಲಸವನ್ನು ನಿಲ್ಲಿಸಬಾರದು. ಅದು ನಡೆಯಲಿ ಎಂದು ಎ.ಸಿ. ಸಲಹೆ ನೀಡಿದರು

ತಹಸೀಲ್ದಾರ್ ಅನಂತಶಂಕರ್, ಇ.ಒ. ಭವಾನಿ ಶಂಕರ್ ಹಾಗೂ ನಾನಾ ಇಲಾಖೆಯ ಅಧಿಕಾರಿಗಳು, ನಾನಾ ಪಂಚಾಯಿತಿಗಳ ಪಿಡಿಒ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.