ಸುಳ್ಯದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ನಾಳೆಯಿಂದ ಅವಕಾಶ

Advt_Headding_Middle
Advt_Headding_Middle

 

ಬೆಳಗ್ಗೆ 7 ರಿಂದ 12ರ ತನಕ : ನಿಯಮ ಪಾಲನೆಗೆ ಸೂಚನೆ

ನಾಳೆಯಿಂದ ಸುಳ್ಯದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಸಾಮಾಜಿಕ ಅಂತರದ ನಿಯಮ ಪಾಲನೆಯೊಂದಿಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರ ತನಕ ಅವಕಾಶ ಕಲ್ಪಿಸಲಾಗಿದೆ.

ಇಂದು ಸಂಜೆ ಸುಳ್ಯ ಎ ಪಿ ಎಂ ಸಿ ಸಭಾಂಗಣದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಇವರ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸುಳ್ಯ ತಹಶೀಲ್ದಾರ್ ಹಾಗೂ ಎ ಪಿ ಎಂ ಸಿ ಕಾರ್ಯದರ್ಶಿ ಹಾಗೂ ವರ್ತಕರು ಉಪಸ್ಥಿತತರಿದ್ದರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು…
1.ಗೇರು ಬೀಜ , ಕೊಕ್ಕೋ, ಬಾಳೆಗೊನೆ, ತರಕಾರಿ ಇತ್ಯಾದಿ ಬೆಳಿಗ್ಗೆ 7 ರಿಂದ 12 ರ ತನಕ…ಎಲ್ಲಾ ನಿಯಮ ಪಾಲನೆ ಮುಕಾಂತರ ಖರೀದಿಸಲು ಅನುಮತಿ ನೀಡಲಾಗಿದೆ.
2.ಕೃಷಿಗೆ ಪೂರಕ ಪಂಪ್ ರಿಪೇರಿ,ಪೈಪ್,ಎಲೆಕ್ಟ್ರಿಕಲ್ ಕೆಲಸ , ಇತ್ಯಾದಿ ಗಳಿಗೆ ಬೆಳಿಗ್ಗೆ 9 ರಿಂದ 11 ಗಂಟೆ ತನಕ ಮಾತ್ರ ಅನುಮತಿ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಹಾಗೂ ನಿಯಮಗಳನ್ನು ಪಾಲಿಸಲು ಬದ್ದರಾಗಿರಬೇಕು.

3.ಗೊಬ್ಬರ,ರಬ್ಬರ್ ಕೋಟ್,ಇತ್ಯಾದಿ ತೋಟಗಾರಿಕಾ ಪೈಪ್ ,ಫಿಟ್ಟಿಂಗ್ ಇತ್ಯಾದಿ ಬೆಳಿಗ್ಗೆ 7 ರಿಂದ 12 ರಜೆ ವರೆಗೆ ನಿಯಮ ಪಾಲನೆ ಯೊಂದಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.