ಅಕ್ಕಿ ಹೊರತು ಪಡಿಸಿ ಪಂಚಾಯತ್ ನಿಂದ ಫುಡ್ ಕಿಟ್ ನೀಡಲು ಅವಕಾಶವಿಲ್ಲ

Advt_Headding_Middle
Advt_Headding_Middle

 

ಹಸಿವಿನಿಂದ ಬಳಲುತ್ತಿದ್ದರೆ ಹೇಳಿ ಊಟ ಕೊಡುವ ವ್ಯವಸ್ಥೆ ಮಾಡೋಣ

ನ.ಪಂ. ಸಭೆಯಲ್ಲಿ ಸಹಾಯಕ ಕಮಿಷನರ್ ಖಡಕ್ ಮಾತು


ನಗರ ಪಂಚಾಯತ್ ನಿಧಿಯಿಂದ ಅಕ್ಕಿ ಹೊರತು ಪಡಿಸಿ ಫುಡ್ ಕಿಟ್ ನೀಡಲು ಅವಕಾಶವಿಲ್ಲ. ಯಾರಾದರೂ ಹಸಿವಿನಿಂದ ಬಳಲುತ್ತಿದ್ದರೆ ಅಂತವರ ಮಾಹಿತಿ ಕೊಡಿ. ಅವರಿಗೆ ಊಟ ಕೊಡುವ ವ್ಯವಸ್ಥೆ ಗಂಜಿ ಕೇಂದ್ರದ ಮೂಲಕ ಮಾಡೋಣ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಖಡಕ್ ಸೂಚನೆ ನೀಡಿದ್ದಾರೆ.

ಇಂದು ನಗರ ಪಂಚಾಯತ್ ನಲ್ಲಿ ಎ.ಸಿ.ಯವ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ನ.ಪಂ. ಸದಸ್ಯರು “ಅಕ್ಕಿ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತಿದೆ. ಇತರ ದಿನಸಿ ನೀಡಲು ಕಳೆದ ಸಭೆಯಲ್ಲಿ ಮಾತನಾಡಲಾಗಿತ್ತು. ಆದರೆ ಆ ಕುರಿತು ಮುಖ್ಯಾಧಿಕಾರಿ ಗಳು ಸ್ಪಂದನೆ ನೀಡುತ್ತಿಲ್ಲ ಎಂದು ದೂರಿಕೊಂಡರು.

” ನಾವು ದಾನಿಗಳನ್ನು ಸಂಪರ್ಕ ದಲ್ಲಿದ್ದೇವೆ. ಆದರೆ ಪಂಚಾಯತ್ ನಿಧಿಯಿಂದ ಕೊಡಲು ಬರುವುದಿಲ್ಲ ಎಂದು ಮುಖ್ಯಾಧಿಕಾರಿ ಮತ್ತಡಿಯವರು ಹೇಳಿದಾಗ, ಸ್ವಂತ ನಿಧಿಯಿಂದ ಕೊಡಲು ಅವಕಾಶ ಇದೆ. ಆ ಬಗ್ಗೆ ಸುತ್ತೋಲೆಯೂ ಇದೆ ಎಂದು ಸದಸ್ಯರು ಹೇಳಿದರು.

ಸುತ್ತೋಲೆಯನ್ನು ತರಿಸಿಕೊಂಡ ಎ.ಸಿ.ಯವರು ಅಕ್ಕಿ ಮಾತ್ರ ಕೊಡಲು ಅವಕಾಶ ಇದೆ. ಉಳಿದ ದಿನಸಿಗೆ ಅವಕಾಶ ಇಲ್ಲ ಎಂದು ಹೇಳಿದರು.

ಅಕ್ಕಿ ಪಡಿತರ ಸಿಕ್ಕಿದೆ ಬೇರೆ ವಸ್ತುವಿನ ಅಗತ್ಯ ಇದೆ ಎಂದು ಸದಸ್ಯರು ಹೇಳಿದಾಗ, ಬೇರೆ ದಿನಸಿ ಹೇಗೆ ಕೊಡೊದು. ಹಾಗೊಂದು ವೇಳೆ ತುಂಬಾ ಬಡವರಿದ್ದರೆ ಅಂತವರನ್ನು ಹೇಳಿ ಗಂಜಿ ಕೇಂದ್ರದ ಮೂಲಕ ವ್ಯವಸ್ಥೆ ಕಲ್ಪಸೋಣ ಎಂದು ಎ.ಸಿ.ಯವರು ಹೇಳಿದರು.

ಆಗ ಹಿಂದಿನ ಸಭೆಯ ಲ್ಲಿ ಆದ ತೀರ್ಮಾನವನ್ನು ಎ.ಸಿ.ಯವರ ಗಮನಕ್ಕೆ ಸದಸ್ಯರು ತಂದರು. ಹಾಗಾದರೆ ಹೋಲ್ ಸೆಲ್ ದರದಲ್ಲಿ ದಿನಸಿ ತರಿಸಿ ಕೊಡಿಸುವ ವ್ಯವಸ್ಥೆ ಮಾಡೋಣ ಇಂದು ಪಂಚಾಯತ್ ನಿಧಿಯಿಂದ ಅಲ್ಲ ಎಂದು ಎ.ಸಿ.ಯವರು ಹೇಳಿದರು. ಇನ್ನಿತರ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.