ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್, ಉದ್ಯೋಗಿಗಳಿಗೆ ವಕ್೯ ಫ್ರಮ್ ಹೋಮ್

Advt_Headding_Middle
Advt_Headding_Middle

 

ಅಂತರ್ಜಾಲ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ ನೆಟ್ ವರ್ಕ್

ವರ್ಕ್ ಮುಗಿಸೋದಿಕ್ಕೆ ನೆಟ್ ವರ್ಕ್ ಸರ್ಚ್

✍️  ದಯಾನಂದ ಕೊರೊತ್ತೋಡಿ

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನು ಮನೆಯಲ್ಲೇ ಇರುವಂತೆ ಹೇಳಲಾಯಿತು. ಲಾಕ್ ಡೌನ್ ಹೇರಲಾಯಿತು. ವಿದ್ಯಾರ್ಥಿ ಗಳಿಗೆ ಆನ್ ಲೈನ್ ಕ್ಲಾಸ್ ಆದರೆ ಉದ್ಯೋಗಿಗಳಿಗೆ ವಕ್೯ ಫ್ರಮ್ ಹೋಮ್ ಮಾಡಲಾಯಿತು.
ಆದರೆ ಇವೆಲ್ಲದಕ್ಕೂ ಅಡ್ಡಿಯಾಗುತ್ತಿರುವುದು ನೆಟ್ ವಕ್೯.

ಹೌದು. ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಕಾಡುತ್ತಿರುವ ಸಮಸ್ಯೆ ಅಂದರೆ ಮೊಬೈಲ್ ನೆಟ್ ವಕ್೯. ಮನುಷ್ಯನಿಗೆ ಬೇಕಾಗುವ ಅತ್ಯಾವಶ್ಯಕ ಸೌಲಭ್ಯಗಳಲ್ಲಿ ಮೊಬೈಲ್ ಕೂಡಾ ಒಂದಾಗಿದೆ.
ಆದರೆ ನೆಟ್ ವಕ್೯ ಸರಿಯಾಗಿ ಇಲ್ಲದೇ ಜನರನ್ನು ಮಾತ್ರ ಇದು ಹೈರಾಣಾಗಿಸಿದೆ.
ನೆಟ್‌ವಕ್೯ ಸಮಸ್ಯೆ ಮನೆಯಲ್ಲಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಬೆಂಬಿಡದೆ ಕಾಡುತ್ತಿದೆ.
ಲಾಕ್‌ಡೌನ್ ನಿಂದಾಗಿ ೧ರಿಂದ ೯ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ವಿದ್ಯಾರ್ಥಿ ಗಳನ್ನು ತೇರ್ಗಡೆ ಗೊಳಿಸಲಾಗಿದೆ. ೧೦ ಮತ್ತು ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬಹುತೇಕ ಪರೀಕ್ಷೆಗಳು ಬಾಕಿಯಿದೆ. ಹಾಗಾಗಿ ಲಾಕ್‌ಡೌನ್ ರಜೆಯನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ನೆಟ್ ವಕ್೯ ಹುಡುಕಿ ಹೋಗಿ ಕ್ಲಾಸ್ ಆಲೀಸಬೇಕಾದ ಅನಿವಾರ್ಯತೆ ಬಂದಿದೆ. ಕೆಲವೊಮ್ಮೆ ಕ್ಲಾಸ್ ನಡೆಯುತ್ತಿರುವಾಗಲೇ ಒಮ್ಮೊಂದೊಮ್ಮೆಲೆ ನೆಟ್ ವಕ್೯ ಕಟ್ ಆಗಿ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಕಳೆದುಕೊಳ್ಳುತ್ತಿದ್ದಾರೆ.
ಇನ್ನೂ ವಕ್೯ ಫ್ರಮ್ ಹೋಮ್ ಮಾಡುತ್ತಿರುವ ಉದ್ಯೋಗಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಮನೆಯಲ್ಲಿ ವಕ್೯ ಮಾಡಲು ಸಾಧ್ಯವಾಗದೇ ಬೇರೆ ಮನೆಗೆ ಹೋಗಿ ವಕ್ ೯ ಮುಗಿಸುತ್ತಿರುವ ಘಟನೆಗಳು ನಡೆಯುತ್ತಿದೆ.

ಹಾಗಾಗಿ ಸಂಬಂಧಪಟ್ಟವರು ಗಮನಹರಿಸಿ ನೆಟ್ ವಕ್೯ ಸಮಸ್ಯೆಯನ್ನು ಸರಿಮಾಡಿ ವಿದ್ಯಾರ್ಥಿ ಗಳು ಮತ್ತು ಉದ್ಯೋಗಿಗಳಿಗೆ ದೀಪವಾಗಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.