Breaking News

ವೈವಾಹಿಕ ವಾರ್ಷಿಕೋತ್ಸವದ ಪ್ರಯುಕ್ತ ವಲಸೆ ಕಾರ್ಮಿಕರಿಗೆ ಅನ್ನದಾನ ನೀಡಿದ ಮಂಜುನಾಥ್ ಮೇಸ್ತ್ರಿ

Advt_Headding_Middle
Advt_Headding_Middle

 

ಸುಳ್ಯದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ದಿನಪ್ರಂತಿ ಕಾರ್ಮಿಕ ಸಂಘ ಮತ್ತು ಎಂ ಬಿ ಫೌಂಡೆಶೇನ್ ಸಹಕಾರದೊಂದಿಗೆ ಸುಳ್ಯ ನಗರದಲ್ಲಿರುವ 800 ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ನಡೆಯುತ್ತಿದೆ. ಈ ಕಾರ್ಯಕ್ಕೆ ಕಾರ್ಮಿಕ ಮಂಜುನಾಥ್ ಮೇಸ್ತ್ರಿಯವರು ತನ್ನ ವೈವಾಹಿಕ ಜೀವನದ ಹದಿನೇಳನೆಯ ವಾರ್ಷಿಕ ದಿನದ ಅಂಗವಾಗಿ ಒಂದು ದಿನದ ಭೋಜನದ ವ್ಯವಸ್ಥೆಮಾಡಿದರು.
ಇವರು ಸುಳ್ಯಕ್ಕೆ ಉತ್ತರ ಕರ್ನಾಟಕ ದಿಂದ ಕೂಲಿ‌ ಕೆಲಸಕ್ಕೆ ಸುಳ್ಯಕ್ಕೆ ಬಂದು ಹೊಟೇಲ್ ಕೆಲಸವನ್ನು ನಿರ್ವಹಿಸುತ್ತಿದ್ದರು ನಂತರ ಕೂಲಿ ಕೆಲಸದೊಂದಿಗೆ ಇತರ ಕಟ್ಟಡ ಕಾಮಗಾರಿ ಕೆಲಸವನ್ನು ಕಲಿತು ಸುಳ್ಯದಲ್ಲಿ ಸ್ವತಃ ಸಂಸ್ಥೆಯನ್ನು ಹುಟ್ಟು ಹಾಕಿದರು ಮಂಜುನಾಥ್ ಕನ್ ಸ್ಟ್ರಕ್ಷನ್ ಎಂಬ ಪುಟ್ಟ ಸಂಸ್ಥೆ ಆರಂಭಿಸಿ ಹಲವಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದಾರೆ. ಇವರು ತನ್ನ ಜೊತೆಗೆಯಲ್ಲಿ ಕೆಲಸಗಾರರು ಹಸಿವಿನಿಂದ ಇರಬಾರದು ಎಂದು ಒಂದು ದಿನದ ಊಟದ ವ್ಯವಸ್ಥೆಗೆ ಕೈ ಜೋಡಿಸಿದ್ದಾರೆ.
ಪ್ರತಿದಿನ ಊಟಕ್ಕೆ ಒಂದು ಏರಿಯಾಕ್ಕೆ ಊಟ ತಲುಪಿಸುವ ವ್ಯವಸ್ಥೆಯಿಂದ ತರಕಾರಿ ಕೊಚ್ಚುವುದು, ಊಟದ ಪ್ಯಾಕ್ ತಯಾರಿಸುವುದು ಇವರ ಸೇವೆ.
ಇವರಂತೆ ಪ್ರತಿಯೊಬ್ಬ ಕಾರ್ಮಿಕರು ದಾನ ಮಾಡುವಂತಗಾಲಿ ಎಂದು ಈ ಸಂದರ್ಭದಲ್ಲಿ ಎಲ್ಲರೂ ‌ಹಾರೈಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.