“ಕೊರೊನಾ ಮುಕ್ತ ಭಾರತ ನಮ್ಮ ಕೈಯಲ್ಲಿ” : ಶಿಲ್ಪ ಗೌಡ ಮುರುಳ್ಯ

Advt_Headding_Middle
Advt_Headding_Middle

 

ಕೊರೊನಾ ಎಂಬ
ರೋಗ ಜನರ ಜೀವನದಲ್ಲಿ ಆಟವಾಡುತ್ತಿದೆ. ಅದರಲ್ಲೂ ಬೆಚ್ಚಿ ಬಿದ್ದ ಜನರು ಯಾವುದೇ ತರಕಾರಿಯಾಗಲಿ,ಹಾಲು ಹಾಗು ಇನ್ನಿತರೆ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಭಯ ಪಡುತ್ತಿದ್ದಾರೆ. ದಿನ -ದಿನಕ್ಕೆ ಸೋಂಕಿತರ ಸಂಖ್ಯೆ ಹಾಗು ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು ಜನರ ನೆಮ್ಮದಿ ಅನ್ನುವುದು ಕ್ಷೀಣಿಸುತ್ತಿದೆ. ಈ ಸಂದರ್ಭ ದಲ್ಲಿ ಕೊರೊನಾ ವೈರಸ್ ತಡೆಯಲು ಲಾಕ್ ಡೌನ್ ಘೋಷಿಸಲಾಗಿದೆ. ಕೊರೊನಾ ವೈರಸ್ ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಎಲ್ಲರೂ ಮನೆಯಲ್ಲಿ ಇರೋಣ.ಹೊರಗಡೆ ಹೋದರು ಮಾಸ್ಕ್ ಧರಿಸೋಣ.ವೈದ್ಯರು, ಪೊಲೀಸರು ಹಗಲು -ರಾತ್ರಿ ಎನ್ನದೆ ಕಾರ್ಯ ನಿರ್ವಹಿಸಿ ಕೊಂಡು ದೇಶಕ್ಕೋಸ್ಕರ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರು ಕೈ ಜೋಡಿಸಿಕೊಂಡು ದೇವರಲ್ಲಿ ಪ್ರಾರ್ಥಿಸೊಣ. ಇದರ ಪರಿಣಾಮವಾಗಿ ನಾವು ಮುಖ್ಯವಾಗಿ ಆಚರಿಸುತ್ತಿರುವ ಹಬ್ಬ, ಜಾತ್ರೆ, ಇವುಗಳೆಲ್ಲ ನಮ್ಮನ್ನು ಈ ಸಂದರ್ಭದಲ್ಲಿ ಕೈ ಬಿಟ್ಟಿದೆ. ಹಾಗಾಗಿ ಜಗತ್ತಿನಾದ್ಯಾಂತ ಹಬ್ಬಿರುವ ಕೊರೊನಾ ತಡೆಯಲು ನಾವೆಲ್ಲರು ಶ್ರಮಿಸೋಣ ಹಾಗು ನಮ್ಮ ದೇಶವನ್ನು ಕೊರೊನಾ ಮುಕ್ತ ಭಾರತವನ್ನಾಗಿ ಮಾಡೋಣ.

ಶಿಲ್ಪ ಗೌಡ.ಮುರುಳ್ಯ
ಪ್ರಥಮ ಪತ್ರಿಕೋದ್ಯಮ ವಿಭಾಗ,ವಿವೇಕಾನಂದ ಕಾಲೇಜು ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.