Breaking News

ಬೊಳುಬೈಲು: ಪಿಲಿಕೋಡಿ ಯುವಶಕ್ತಿ ಬಳಗದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_Headding_Middle
Advt_Headding_Middle

 

ಕೊರೋನ ತುರ್ತು ಪರಿಸ್ಥಿತಿಯ ದೇಶವೇ ಲಾಕ್ ಡೌನ್ ಆಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಬಡ ಕುಟುಂಬಗಳಿಗೆ ಜೀವನ ಸಾಗಿಸಲು ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.


ಇದನ್ನು ಮನಗಂಡ ಜಾಲ್ಸೂರು ಗ್ರಾಮದ ಬೊಳುಬೈಲಿನ ಪಿಲಿಕೋಡಿಯ ಯುವಶಕ್ತಿ ಬಳಗದ ವತಿಯಿಂದ ಆ ಭಾಗದ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ತಯಾರಿಸಿ, ಎ.16ರಂದು ವಿತರಿಸಲಾಯಿತು. ಅಕ್ಕಿ, ಸಕ್ಕರೆ, ಚಾಹುಡಿ, ಮೆಣಸು, ಬೆಳ್ಳುಳ್ಳಿ, ನೀರುಳ್ಳಿ, ಕೊತ್ತಂಬರಿ, ಉಪ್ಪು, ಬಟಾಟೆ, ಹುರುಳಿ ಸೇರಿದಂತೆ ಆಗತ್ಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಅನ್ನು ಬಡ ಕುಟುಂಬಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಿಲಿಕೋಡಿಯ ಯುವಶಕ್ತಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದು, ಬಡ ಕುಟುಂಬಗಳ ಮನೆಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.