Breaking News

ಸುಳ್ಯ ರೇಂಜ್ ವತಿಯಿಂದ ಮದ್ರಸ ಅಧ್ಯಾಪಕರಿಗೆ ಧನ ಸಹಾಯ ಮತ್ತು ರಾಜ್ಯ ಸಮಿತಿಗೆ ಕೊಡುಗೆ

Advt_Headding_Middle
Advt_Headding_Middle

 

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ವೆಲ್ಫೇರ್ ಸಮಿತಿ ವತಿಯಿಂದ ಕೋವಿಡ್ 19 ಲೋಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೊಳಗಾದ ಮದ್ರಸ ಅಧ್ಯಾಪಕರುಗಳಿಗೆ ತುರ್ತು ಪರಿಹಾರಕ್ಕಾಗಿ ಧನ ಸಹಾಯ ವಿತರಿಸಲಾಯಿತು.

ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಯಾಸ ಅನು‌ಭವಿಸುತ್ತಿದ್ದು,ಈ ಪೈಕಿ ಮದ್ರಸ ಅಧ್ಯಾಪಕರುಗಳ ಬಹುತೇಕ ಮಂದಿ ಇತರ ವರಮಾನ ಮಾರ್ಗಗಳು,ಮತ್ತಿತ್ತರ ಸವಲತ್ತುಗಳಿಂದ ವಂಚಿತರಾದವರು.

ಈ ಬಗ್ಗೆ ಕಾರ್ಯರಂಗಕ್ಕಿಳಿದ ರೇಂಜ್ ಸಮಿತಿಯು ಈ ನಿರ್ಧಾರ ಕೈಗೊಳ್ಳಲಾಯಿತು.ಅದರಂತೆ ಮದ್ರಸ ಅಧ್ಯಾಪಕ ಒಕ್ಕೂಟ ರಾಜ್ಯ ಸಮಿತಿ ರಾಜ್ಯಾದ್ಯಂತ ಮದ್ರಸ ಅಧ್ಯಾಪಕರಿಗೆ ಪರಿಹಾರ ಧನ ವಿತರಿಸಲು ಯೋಜನೆ ರೂಪಿಸಿದ್ದು,ಪ್ರಸ್ತುತ ರಾಜ್ಯ ಸಮಿತಿಗೆ ಸುಳ್ಯ ರೇಂಜ್ ವತಿಯಿಂದ ಹಾಗೂ ರೇಂಜ್ ವ್ಯಾಪ್ತಿಯ ಪ್ರತೀ ಅಧ್ಯಾಪಕರುಗಳ ವೈಯಕ್ತಿಕ ನೆಲೆಯಲ್ಲಿ ಗರಿಷ್ಟ ಮಟ್ಟದ ಧನ ಸಹಾಯ ಕೊಡುಗೆ ನೀಡಲಾಯಿತು.

ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಕಾವು, ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು, ಕೋಶಾಧಿಕಾರಿ ಇಸ್ಮಾಯಿಲ್ ಸಖಾಫಿ ಪೈಂಬಚ್ಚಾಲ್, ವೆಲ್ಫೇರ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು,ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಮೊಗರ್ಪಣೆ ಹಾಗೂ ಸಮಿತಿ ಸದಸ್ಯರುಗಳೆಲ್ಲರೂ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.