ಕೊರೋನಾ ತಡೆಗೆ ಒಂದಷ್ಟು ಸಲಹೆ :  ಚೆನ್ನಕೇಶವ ಕೊಲ್ಲಮೊಗ್ರು

Advt_Headding_Middle
Advt_Headding_Middle

ಜಗತ್ತನ್ನೇ ಕಂಗೆಡಿಸುತ್ತಿರುವ ಕೋವಿಡ್-೧೯(ಕರೋನಾ ವೈರಸ್)ನ್ನು ನಾಶ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಭಾವಿಸುತ್ತಾ ಈ ಬಗ್ಗೆ ನನ್ನದೇ (ನಾನು ಮನಗಂಡಂತೆ) ಆದ ಕೆಲವೊಂದು ಮಾರ್ಗಸೂಚಿಗಳು ಹಾಗೂ ಅಭಿಪ್ರಾಯಗಳನ್ನು ತಮ್ಮ ಮುಂದೆ ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.
೧.ಬಹುಬೇಗನೇ ಸೋಂಕಿತರನ್ನು ಪತ್ತೆ ಮಾಡುವ ವ್ಯವಸ್ಥೆಯಾಗಲಿ. ಹೆಚ್ಚು-ಹೆಚ್ಚು ಪರೀಕ್ಷಾ ಯಂತ್ರಗಳ ಪೂರೈಕೆಯಾಗಲಿ.
೨.ಸೋಂಕಿತರು ಮತ್ತು ಸಂಶಯಿತರು (ಸಂಪರ್ಕಿತರು/ಕ್ವಾರಂಟೈನ್)ರು ಜಾಸ್ತಿಯಿರುವೆಡೆಗೆ ಜೌಷದ ಪ್ರಮಾಣಕ್ಕನುಗುಣವಾಗಿ ಪೂರೈಕೆಯಾಗಲಿ ಮತ್ತು ಸಂಚಾರಿ ಪರೀಕ್ಷಾ ವ್ಯವಸ್ಥೆಗಳಾದಲ್ಲಿ ಉತ್ತಮ.
೩.ಲಾಕ್‌ಡೌನ್ ಆಗಿ ಜನ ಉಳಿದುಕೊಂಡಲ್ಲಿ (ಬಾಕಿ ಇರುವೆಡೆಗೂ)ಗೆ ಅಗತ್ಯವಸ್ತುಗಳ ಪೂರೈಕೆಗೆ ತಕ್ಷಣ ಸೂಕ್ತ ವ್ಯವಸ್ಥೆ ಆದಲ್ಲಿ ಜನರ ಸಂಪರ್ಕಗಳು ಮತ್ತು ಓಡಾಟ ತಪ್ಪಿ ಸಾಮಾಜಿಕ ಅಂತರ ಚೆನ್ನಾಗಿ ಪಾಲನೆಯಾಗಬಹುದು.
೪.ವೈದ್ಯರುಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸೋಂಕಿತರ ಚಿಕಿತ್ಸಕರಿಗೆ ಬೇಕಾದ (ರೋಗತಡೆಗೆ) ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುವುದು ಅಗತ್ಯವಾಗಿದೆ.
೫.ಇತರ ರೋಗಿಗಳ ಕಡೆಗಣನೆಯಾಗದಿರಲಿ. ಅದಕ್ಕಾಗಿ ಪ್ರದೇಶಕ್ಕನುಗುಣವಾಗಿ ಸೀಮಿತ ವ್ಯಕ್ತಿಗಳನ್ನು (ರಕ್ಷಾಕವಚ ಮತ್ತು ಭದ್ರತೆಯೊಂದಿಗೆ) ಬಳಸಿಕೊಳ್ಳಬಹುದು.
೬.ಸಾಮಾಜಿಕ ಅಂತರ ಚೆನ್ನಾಗಿ ಪಾಲನೆಯಾಗುವ ಮತ್ತು ಅತೀ ಕಡಿಮೆ ಜನ ಸೇರಿ ನಡೆಯುವ ಕೆಲಸ ಕಾರ್ಯಗಳು, ಕೃಷಿಯ ಉತ್ಪಾದನಾ ಚಟುವಟಿಕೆಗಳು ಅಲ್ಲದೇ ಅಗತ್ಯ ವಸ್ತುಗಳ (ಐಷಾರಾಮಿ ಮತ್ತು ಅನಿವಾರ್ಯವಲ್ಲದ ವಸ್ತುಗಳ ಹೊರತಾಗಿ) ಉತ್ಪಾದನೆ, ಕೈಗಾರಿಕೆಗಳಿಗೆ ಅವಕಾಶ ನೀಡುವುದು.
೭.ಅಗತ್ಯ ಸೇವೆಗಳ ಪೂರೈಕೆಗೆ ಆಯಾಯ ಪ್ರದೇಶಗಳ ವಾಹನಗಳು, ವ್ಯಕ್ತಿಗಳು ಅಲ್ಲದೇ ಇನ್ನಿತರ ಯಾವುದೇ ಲಭ್ಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ವ್ಯವಸ್ಥೆಗಳು ನಡೆಯಲಿ.
೮.ಸಂಶೋಧನೆಗಳು/ಅಧ್ಯಯನಗಳು/ಔಷಧಿ ಪತ್ತೆಯಂತ ಕಾರ್ಯಗಳು (ಕೋವಿಡ್-೧೯ ಬಗ್ಗೆ) ಎಲ್ಲ ದಿಕ್ಕುಗಳಿಂದ ನಡೆಯುತ್ತಿರಲಿ.
೯.ಈ ರೋಗವು (ಕೊರೋನಾ ವೈರಸ್) ಮಾನವ ನಿರ್ಮಿತವೇ ಆಗಿದ್ದಲ್ಲಿ ಇದರಿಂದಾದ ಎಲ್ಲಾ ಖರ್ಚುವೆಚ್ಚಗಳು, ನಷ್ಟಗಳು, ಅಲ್ಲದೇ ಮುಂದೆ ಆಗುವ ನಷ್ಟಗಳು ಇದೆಲ್ಲವನ್ನು ಸೇರಿಸಿ ಕಾರಣ (ಸೃಷ್ಟಿ ಮಾಡಿದ್ದಲ್ಲಿ)ಕರ್ತರ ಕೈಯಿಂದ ಪರಿಹಾರ ಸಂಪೂರ್ಣವಾಗಿ ವಸೂಲಿ ಮಾಡುವುದು. ಈ ಬಗ್ಗೆ ಇರುವ ಎಲ್ಲಾ ದಾರಿಗಳಲ್ಲಿ ಪ್ರಯತ್ನಗಳನ್ನು ಮಾಡಿ ಕಡೆಗೂ ಒಪ್ಪದಿದ್ದಲ್ಲಿ, ಜಾಗತಿಕವಾಗಿ ಬೆಂಬಲವನ್ನು ಪಡೆದು ದಾಳಿ ಮಾಡಿಯಾದರೂ ವಸೂಲಿ ಮಾಡುವುದು.

ಚೆನ್ನಕೇಶವ
ಕೊಲ್ಲಮೊಗ್ರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.