ಸುಬ್ರಹ್ಮಣ್ಯ ಗ್ರಾ. ಪಂ.  ನೇತೃತ್ವದಲ್ಲಿ 800 ಕುಟುಂಬಗಳಿಗೆ ಆಹಾರ ಕಿಟ್

Advt_Headding_Middle
Advt_Headding_Middle

ಕೊವೀಡ್19, ಕೋರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯಸರಕಾರದ ಆದೇಶದ ಮೇಲೆ ಮಾಡಲಾದ ಲಾಕ್ ಡೌನ್ ನಿಂದ ದೈನಂದಿನ ಜನಜೀವನ ಕಷ್ಟಕರವಾಗಿದ್ದು ಬಡವರು, ನಿಗ೯ತಿಕರು, ನಿರಾಶ್ರಿತರು,ಯಾವುದೇ ಪಡಿತರ ಚೀಟಿಯನ್ನು ಹೊಂದದೆ ಸರಕಾರದ ಯಾವುದೇ ಸವಲತ್ತನ್ನೂ ಪಡೆಯಲಾಗದೇ ಕಂಗೆಟ್ಟ ನಾಗರೀಕರ ಕಷ್ಟಗಳನ್ನು ಮನಗಂಡು ಅವರುಗಳಿಗೆ ಗ್ರಾಮ ಪಂಚಾಯತ್ ಮುಖಾಂತರ ಆಹಾರ ಕಿಟ್ ಗಳನ್ನು ಪೂರೈಸಲಾಯಿತು. ಸುಬ್ರಹ್ಮಣ್ಯ ದೇವಸ್ಥಾನ, ಖಾಸಗಿ ವಸತಿಗೃಹದ ಮಾಲಕರು, ಸಾವ೯ಜನಿಕ ಸಂಘಸಂಸ್ಥೆಗಳ, ಕ್ಷೇತ್ರದ ದಾನಿಗಳ ಸಹಕಾರವನ್ನು ಸುಮಾರು 800ಬಡ ಕುಟುಂಬಗಳಿಗೆ ಅಗತ್ಯವಸ್ತುಗಳ ಕಿಟ್ ಅನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವು ಸಹಾಯಕ ಆಯುಕ್ತರಾದ
ಶ್ಯತೀಶ್ ಉಳ್ಳಾಲ್ ಅವರ ಆದೇಶದ ಮೇರೆಗೆ ಕಂದಾಯ ಇಲಾಖೆಯ ಮುಖಾಂತರ 200 ಕಿಟ್, ಸುಬ್ರಹ್ಮಣ್ಯ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,
ಸದಸ್ಯರು,ಪಿಡಿಒ, ಕಾಯ೯ದಶಿ೯ ಮತ್ತು ಸಿಬ್ಬಂದಿವಗ೯ ಸೇರಿ 50ಕುಟುಂಬಗಳ ಕಿಟ್,
ಸಾವ೯ಜನಿಕ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ, -84 ಕಿಟ್, ಸಾವ೯ಜನಿಕ ಶ್ರೀ ಗಣೆಶೋತ್ಸವ ಸಮಿತಿ 84 ಕಿಟ್, ಸಾವ೯ಜನಿಕ ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ 42 ಕಿಟ್, R N S ONE ವಸತಿಗೃಹ ಮಾಲೀಕರಾದ  ಸುನೀಲ್ ಶೆಟ್ಟಿ-51 ಕಿಟ್, ಆದಿತ್ಯ ನೆಸ್ಟ್ ಮಾಲೀಕರಾದ ಕೃಷ್ಣಮೂತಿ೯ ಭಟ್-25 ಕಿಟ್, ಹೋಟೇಲ್ ರಾಘವೇಂದ್ರ ಪ್ರಸಾದ್ ಮಾಲೀಕರಾದ  ಯಜ್ನೇಶ್ ಆಚಾರ್-17 ಕಿಟ್, ಅನುಗ್ರಹ ಕನ್ಸ್ಟ್ರಕ್ಷನ್ ಮಾಲಕ  ರವಿಕಕ್ಕೆಪದವು-50 ಕಿಟ್,
ನಿವೃತ್ತ ಪ್ರಾಂಶುಪಾಲರಾದ  ರಂಗಯ್ಯ ಶೆಟ್ಟಿಗಾರ್-10 ಕಿಟ್ ,
ವೆಲಂಕಣೀ ವಸತಿಗೃಹದ ಮಾಲಕರಾದ  ಅನೀಲ್ ಡಿ,ಸೋಜಾ-10 ಕಿಟ್ ,
ಕುಮಾರಸ್ವಾಮಿ ಎಜುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನಾಯರ್-10 ಕಿಟ್ ,
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ಶಿಷ್ಟಾಚಾರ ಅಧಿಕಾರಿ ವೆಂಕಟ್ರಾಜ್-20 ಕಿಟ್ ,
ಹೋಟೇಲ್ ಮಯ್ಯೂರ ರೆಸಿಡೆನ್ಸಿ ಮಾಲಕರಾದ  ಸತೀಶ್ ಭಟ್ ಮಾನಾಡು-20,
ಉದ್ಯಮಿ ಶ್ರೀ ರತ್ನಾಕರ ಶೆಟ್ಟಿ ನೂಚಿಲ-20, ತಪಸ್ಯ ನಾಯಕ್ ಕುಲ್ಕುಂದ-10 , ಮೊಂಟಿ ಕಾಂಫರ್ಟ್ಸ್ ವಸತಿಗೃಹ ಮಾಲಕ  ಜಿನ್ನಪ್ಪ ಗೌಡ-10, ಪ್ರಾಥಮಿಕ ಕೃಷಿಪತ್ತಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ಏನೇಕಲ್ಲು-17, ಶೇಷಕುಟೀರ ವಸತಿಗೃಹ ಮಾಲಕರು-10,
ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ-10,
ಶೇಷನಾಗ್ ಆಶ್ರಯ ವಸತಿಗೃಹದ ಮಾಲಕರಾದ ರವಿ ನಾಯಕ್-10, ನಿವೃತ್ತ ಮುಖ್ಯೋಪಾದ್ಯಯರಾದ  ಕೃಷ್ಣ ಶಮ೯-10 ಕಿಟ್ ನೀಡಿದ್ದಾರೆ.  ಕುಕ್ಕೆ ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ಸುಬ್ರಹ್ಮಣ್ಯ, ಕುಲ್ಕುಂದ, ದೇವರಗದ್ದೆ, ನೂಚೀಲ, ಪವ೯ತಮುಖಿ, ಯೇನೆಕಲ್ಲು,
ದೇವರಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಗ್ರಾಮಪಂಚಾಯತ್ ನೇತೃತ್ವದಲ್ಲಿ ಕಿಟ್ ಗಳನ್ನು ವಿತರಿಸಲಾಗಿದ್ದು ಪ್ರತಿ ಕಿಟ್ ₹ 600 ಕ್ಕೂ ಮೇಲ್ಪಟ್ಟು ಆಹಾರ ಸಾಮಾಗ್ರಿ ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.