ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಕಾರ್ಮಿಕರಿಗೆ ಒಂದೇ ಕಾರ್ಮಿಕ ಸಂಘಟನೆ ಮಾಡುವ ಬಗ್ಗೆ ರಾಮಸ್ವಾಮಿಯವರಿಂದ ಪತ್ರ

Advt_Headding_Middle
Advt_Headding_Middle

 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಕಾರ್ಮಿಕರಿಗೆ ಒಂದೇಕಾರ್ಮಿಕ ಸಂಘಟನೆ ಮಾಡುವ ಬಗ್ಗೆ ದಕ್ಷಿಣ ಕನ್ನಡ ರಬ್ಬರ್ ಇಂಡಸ್ಟ್ರೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ವಿ.ಯವರು
ಆಲೂರು ಹಾಸನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗಣಪತಿ ಎ ಯವರಿಗೆ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ.ಆರ್.ವಿಜಯರಾಜ್ ರವರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ವಿವರ ನೀಡಲಾಗಿದೆ.

ವಿಷಯ:
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಕಾರ್ಮಿಕರಿಗೆ ಒಂದೇ ಕಾರ್ಮಿಕ ಸಂಘಟನೆ ಮಾಡುವ ಬಗ್ಗೆ
ಆತ್ಮೀಯರೇ,
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಸುಮಾರು ಸಾವಿರದಿನ್ನೂರು ಕಾರ್ಮಿಕರು ಇದ್ದು ಅವರಿಗೆ ಒಟ್ಟು ಎಂಟು ಕಾರ್ಮಿಕ ಸಂಘಗಳು ಇರುವುದು ತಮಗೆ ತಿಳಿದಿರುತ್ತದೆ. ಈ 8 ಕಾರ್ಮಿಕ ಸಂಘದಿಂದ ಕಾರ್ಮಿಕರ ಸರಿಯಾದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ನಮ್ಮ ಕಾರ್ಮಿಕ ಸಂಘದ ವತಿಯಿಂದ ( ದಕ್ಷಿಣಕನ್ನಡ ರಬ್ಬರ್ ಇಂಡಸ್ಟ್ರೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್) 2017 ಇಸವಿಯಲ್ಲಿ ಸುಮಾರು ಮೂರು ಬಾರಿ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ಎಲ್ಲಾ ಕಾರ್ಮಿಕರ ಸಂಘಗಳ ಸದಸ್ಯರ ಸಭೆ ಕರೆದು ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಒಂದು ಅಥವಾ ಎರಡು ಕಾರ್ಮಿಕ ಸಂಘಟನೆ ಇದ್ದರೆ ಸಾಕು ಎಂಬ ಬೇಡಿಕೆಯನ್ನು ಹೊಂದಿದ್ದಾಗ ಕೆಲವು ಕಾರ್ಮಿಕ ಸಂಘಟನೆ ಮಾತ್ರ ಒಪ್ಪಿಗೆ ಸೂಚಿಸಿರುತ್ತಾರೆ.ಹಾಗೂ ಕೆಲವು ಸಂಘಟನೆಗಳು ಒಪ್ಪಿಗೆ ಸೂಚಿಸಿರುವುದು ಇಲ್ಲಆದರೆ ಈ ತನಕ ಯಾವುದೇ ಒಂದು ಒಗ್ಗಟ್ಟಿನ ತೀರ್ಮಾನಕ್ಕೆ ಬಂದಿರುವುದಿಲ್ಲ. ಇದರಿಂದಾಗಿ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆಲ್ಲ ಕಾರಣ ಈ 8 ಕಾರ್ಮಿಕ ಸಂಘಗಳು( ಸ್ವಯಂ ಘೋಷಿತ ಪದಾಧಿಕಾರಿಗಳು). ಆದ್ದರಿಂದ ನಮ್ಮ ಕಾರ್ಮಿಕ ಸಂಘವು ಆರಂಭದಿಂದಲೇ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒಂದು ಅಥವಾ ಎರಡು ಕಾರ್ಮಿಕ ಸಂಘಗಳ ಸಾಕು ಎಂಬುವುದರಲ್ಲಿ ನಮ್ಮ ಸಂಘವು ದೃಢವಾಗಿರುತ್ತದೆ. ಅದಲ್ಲದೆ ನಮ್ಮ ತಮಿಳು ಬಾಂಧವರ ಸಮುದಾಯ ಗೋಸ್ಕರ ರಿಕೋ ಸಹಕಾರಿ ಸಂಘ ಎಂದು ಸ್ಥಾಪಿಸಿ ನಮ್ಮ ತಮಿಳು ಬಾಂಧವರನ್ನು ಹೆಚ್ಚಿನ ಅಭಿವೃದ್ಧಿ ಮಾಡಬೇಕೆಂಬ ನಿಟ್ಟಿನಲ್ಲಿ ಆರಂಭಿಸಿದ ಈ ಸಹಕಾರಿ ಸಂಘವು ಯಶಸ್ವಿಯಾಗಲು ನಮ್ಮ ಸಹಕಾರವನ್ನು ನೀಡುತ್ತೇವೆ. ಆದ್ದರಿಂದ ತಾವುಗಳು ಅದರ ಮೊದಲು ಎಲ್ಲಾ ಕಾರ್ಮಿಕ ಸಂಘಗಳ ಸದಸ್ಯರ ಸಭೆಯನ್ನು ಕರೆದು ಮುಂದಿನ 31 /07 /2021 ಕೆ ಈಗ ಆಗಿರುವ ಒಪ್ಪಂದವು ಕೊನೆಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಯಾದರೂ ಕಾರ್ಮಿಕರ ಬೇಡಿಕೆಗೆ ಒಂದು ಅಥವಾ ಎರಡು ಸಂಘದಿಂದ ಬೇಡಿಕೆಗಳನ್ನು ನಿಗಮದ ಅಧಿಕಾರಿಗಳಿಗೆ ಸಲ್ಲಿಸಲು ಎರಡು ಸಂಘವನ್ನು ನೇಮಕ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಈಗಾಗಲೇ 01/08/2018 ರಂದು ಆಗಬೇಕಿದ್ದ ಕಾರ್ಮಿಕರ ಒಪ್ಪಂದವು ಕೆಲವು ಕಾರ್ಮಿಕ ಸಂಘಗಳ ಕಚ್ಚಾಟ ಹಾಗೂ ಗೊಂದಲದಿಂದ 21 ತಿಂಗಳ ಕಾಲ ಮುಂದೂಡಿಕೆ ಯಾಗಿ 16 .4. 2020 ರಂದು ಕೊನೆ ಗೊಂಡಿರುತ್ತದೆ.ಇನ್ನು ಮುಂದೆಯಾದರೂ ಬರುವಂತಹ ದಿನಗಳಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಸಲ್ಲಿಸುವಾಗ ಎರಡೇ ಸಂಘಟನೆಯಿಂದ ಬೇಡಿಕೆಗಳನ್ನು ಸಲ್ಲಿಸುವಅಂತಹ ತೀರ್ಮಾನ ಕೈಗೊಳ್ಳುವಿರಾಗಿ ತಮ್ಮಲ್ಲಿ ವಿನಂತಿ.
ಇತೀ ನಿಮ್ಮ ಪ್ರೀತಿಯ

ರಾಮಸ್ವಾಮಿ ವಿ
( ಆನಂದ)
ಪ್ರಧಾನ ಕಾರ್ಯದರ್ಶಿ ದಕ್ಷಿಣ ಕನ್ನಡ ರಬ್ಬರ್ ಇಂಡಸ್ಟ್ರೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ( Ph No 916 4462 904)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.