ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ: ಸರೋಜ.ಪಿ.ಜೆ ದೋಳ್ಪಾಡಿ

Advt_Headding_Middle
Advt_Headding_Middle

ಇಡೀ ವಿಶ್ವದಲ್ಲೇ ತಾಂಡವವಾಡುತ್ತಿರುವ ಮಾರಣಾಂತಿಕ ಕೊರೋನ ವೈರಸ್ ಅದೆಷ್ಟೋ ಮುಗ್ಧ ಜೀವಿಗಳ ಪಾಲಿಗೆ ಮೃತ್ಯುವಾಗಿದೆ. ಒಂದು ಕ್ಷಣ ಮನೆಯ ಒಳಗೆ ಇರಲು ಚಡಪಡಿಸುತ್ತಿದ್ದ ಜನ ಇಂದು ಮನೆಯಿಂದ ಹೊರಗೆ ಕಾಲಿಡಲು ಭಯ ಪಡುತ್ತಿದ್ದಾರೆ. ಕೆಲವರು ಈ ಕೊರೋನ ವೈರಸ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವತಿ೯ಸುತ್ತಿದ್ದಾರೆ. ದೇಶದ ಜನರ ಪ್ರಾಣವನ್ನು ಕಾಪಾಡಲು ಆಸ್ಪತ್ರೆ ಸಿಬ್ಬಂದಿಗಳು, ಸ್ವಯಂ ಸೇವಕರು, ಪೋಲಿಸರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ಅಸ್ತವ್ಯಸ್ತಗೊಂಡ ಜನಜೀವನವನ್ನು ಮುಂದೊಂದು ದಿನ ನಾವು ಬದುಕಿದ್ದರೆ,‌ ಸರಿಪಡಿಸಿಕೊಳ್ಳಬಹುದು. ಅದನ್ನು ಬಿಟ್ಟು ನಾವೀಗಲೇ ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದರೆ, ಈಗಾಗಲೇ ಅಸ್ತವ್ಯಸ್ತಗೊಂಡ ಬದುಕನ್ನು ಸರಿಪಡಿಸಲು ಹೊರಟರೆ ಮುಂದೆ ಉಂಟಾಗಬಹುದಾದ ಅನಾಹುತಗಳಿಗೆ ನಾವೇ ಹೊಣೆಗಾರರಾಗುತ್ತೇವೆ.
ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದ್ದರೂ, ದೇಶದ ಜನರ ಪ್ರಾಣದ ಮುಂದೆ ಆಥಿ೯ಕತೆಯ ಕುಸಿತ ಏನೂ ಅಲ್ಲ ಎಂಬುದನ್ನು ಮಾನ್ಯ ಪ್ರಧಾನ ಮಂತ್ರಿ ಅವರು ಮನಗಂಡು ದೇಶದಾದ್ಯಂತ ಲಾಕ್ ಡೌನ್ ಅನ್ನು ಜಾರಿಗೆ ತಂದಿದ್ದಾರೆ. ಜನ ಬದುಕುಳಿದರೆ ಮುಂದೆ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ಕೊರೋನ ಎಂಬ ಹೆಮ್ಮಾರಿಯ ಕೈಯಲ್ಲಿ ಇಡೀ ವಿಶ್ವವೇ ಸಿಲುಕಿ ಒದ್ದಾಡುತ್ತಿರುವ ಇಂತಹ ಕಠಿಣ ಸಂದರ್ಭದಲ್ಲೂ ಆಥಿ೯ಕತೆಯೇ ಮುಖ್ಯ ಎಂದು ಭಾವಿಸಿದರೆ, ಈಗ ಹೊಂದಿಸಿಟ್ಟ ಹಣವನ್ನು ಉಪಯೋಗಿಸಲು ಮುಂದೆ ಜನರೇ ಬದುಕಿರುವುದಿಲ್ಲ‌. ನಮ್ಮನ್ನು ನಾವು ಎಷ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತೇವೆ ಅನ್ನೋದು ಮುಖ್ಯ ಹೊರತು, ನಮ್ಮನ್ನು ಯಾರು ಎಚ್ಚರಿಕೆಯಿಂದ ಕಾಪಾಡುತ್ತಾರೆ ಅನ್ನೋದು ಅಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ನಾವೆಲ್ಲರೂ ನಮ್ಮ ಎಚ್ಚರಿಕೆಯಲ್ಲಿ ಇದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಮಾತ್ರ ದೇಶವನ್ನು ಕೊರೋನದಿಂದ ಮುಕ್ತಗೊಳಿಸಲು ಸಾಧ್ಯ.

ಸರೋಜ.ಪಿ.ಜೆ ದೋಳ್ಪಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಪದವಿ ಕಾಲೇಜು ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.