ಲಾಕ್ ಡೌನ್ : ಸಾಮಾಜಿಕ ಅಂತರ ಕಾಯ್ದುಕೊಂಡು ಸಮಯದ ಸದುಪಯೋಗ

Advt_Headding_Middle
Advt_Headding_Middle

 

 

ಶಿಥಿಲಾವಸ್ಥೆಯ ಮನೆ ದುರಸ್ಥಿಯ ಮೂಲಕ ಬೂಡು ಪ್ರಕೃತಿ ಯುವ ಸೇವಾ ಸಂಘದಿಂದ ಮಾದರಿ ಕಾರ್ಯ

ಯುವಕರ ಕಾರ್ಯಕ್ಕೆ ಕೈ ಜೋಡಿಸಿದ ಮತ್ತಷ್ಟು ಸಹೃದಯಿಗಳು


ಲಾಕ್ ಡೌನ್ ನ ಈ ಸಮಯದಲ್ಲಿ ಮನೆಯೊಳಗೇ ಇರಬೇಕೆಂಬ ನಿಯಮವಿದ್ದರೂ ಸರಕಾರ ಕೃಷಿ ಕೆಲಸ ಮಾಡಲು ಅವಕಾಶ ನೀಡಿದೆ. ಅದೇ ರೀತಿ ಇಲ್ಲೊಂದು ಯುವಕರ ಸಂಘ ಬಡ ಕುಟುಂಬವೊಂದರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ಶ್ರಮದಾನ ಮಾಡುವುದರ ಮ‌ೂಲಕ ಮಾದರಿ ಕಾರ್ಯ ನಡೆಸಿದ್ದಾರೆ.‌ ಇವರ ಈ ಕಾರ್ಯಕ್ಕೆ ಹಲವು ಮಂದಿ ಕೈ ಜೋಡಿಸಿದ್ದಾರೆ.

ಸುಳ್ಯ ನಗರದ ಕೆರೆಮೂಲೆ ಎಂಬಲ್ಲಿ ಪೊಡಿಯ ಎಂಬವರ ಮನೆಯಿದೆ. ಆ ಮನೆಯ ಮೇಲ್ಚಾವಣಿ ಶಿಥಿಲಗೊಂಡಿತ್ತು. ಮುಂದೆ ಮಳೆಗಾಲ ಬರುವುದರಿಂದ ಉಳಿದುಕೊಳ್ಳುವುದು ಅಪಾಯಕಾರಿ. ಈ ವಿಷಯ ತಿಳಿದ ಬೂಡು ಪ್ರಕೃತಿ ಯುವಕರ ಸಂಘ ಶ್ರಮದಾನದ ಮೂಲಕ ಮೇಲ್ಚಾವಣಿ ಸರಿ ಪಡಿಸಲು ನಿರ್ಧರಿಸಿ ಇಂದು ಆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಪಯಸ್ವಿನಿ‌ ನದಿಯ ಬದಿಯಲ್ಲಿ ಬಿದ್ದಿದ್ದ ಬಿದಿರುಗಳನ್ನು ತಂದು, ಪಕ್ಕದ ಲೋಕೇಶ್ ಕೆರೆಮೂಲೆಯವರಲ್ಲಿಂದ ಅಡಿಕೆ ಮರವನ್ನು ಕಡಿದು ಸಲಾಖೆಯ ಮಾಡಲಾಯಿತು.


ಬಿದಿರು ಒದಗಿಸುವಲ್ಲಿ ನ.ಪಂ. ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಸಹಕರಿಸಿದರೆ, ಮನೆಗೆ ಬೇಕಾದ ಹಂಚಿನ ವ್ಯವಸ್ಥೆ ಯನ್ನು ನಾಸಿರ್ ಕಟ್ಟೆಕ್ಕಾರ್ ಒದಗಿಸುದರು. ಒಟ್ಟಾರೆಯಾಗಿ ಯುವ ಸಂಘದ ಈ ಕಾರ್ಯದಿಂದ ಬಡ ಕುಟುಂಬವೊಂದು ಭಯವಿಲ್ಲದೆ ಮನೆಯೊಳಗೆ ಜೀವನ ನಡೆಸುವಂತಾಗಿದೆ.
ಈ ಮನೆಗೆ ವಿದ್ಯುತ್ ವ್ಯವಸ್ಥೆ ಮಾತ್ರ ಇನ್ನಷ್ಟೆ ಆಗಬೇಕಿದೆ.

“ನಮ್ಮ ಸಂಘದವರಿಗೆ ವಿಷಯ ಗೊತ್ತಾದಾಗ ಎಲ್ಲರೂ ಶ್ರಮದಾನಕ್ಕೆ ಕೈ ಜೋಡಿಸಿದ್ದಾರೆ. ಸಹಕರಿಸಿದ ಪ್ರತಿಯೊಬ್ಬರಿಗೂ ನಾವು ಆಭಾರಿಗಳು”
-ಉದಯ ಕುಮಾರ್
ಅಧ್ಯಕ್ಷರು
ಪ್ರಕೃತಿ ಯುವಕ ಸಂಘ ಬೂಡು

“ಮನೆ ಶಿಥಿಲವಾದ ವಿಷಯವನ್ನು ಪೊಡಿಯರವರು ನಮ್ಮಲ್ಲಿ ಹೇಳಿದರು. ನಮ್ಮ ಯುವ ಸೇವಾ ಸಂಘದ ವರೆಲ್ಲ ಸೇರಿ ಅವರ ಮನೆ ದುರಸ್ಥಿ ನಡೆಸುತ್ತಿದ್ದೇವೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಕೆಲಸ ಮಾಡಲಾಗುತ್ತಿದೆ”
-ರಮೇಶ್ ಬೂಡು
ಪ್ರಕೃತಿ ಯುವ ಸೇವಾ ಸಂಘ

“ಮನೆಯ ಮಾಡು ಶಿಥಿಲಗೊಂಡಿತ್ತು. ಏನು ಮಾಡುವುದೆಂದು ತೋಚದೆ ಬೂಡಿನ ಯುವಕ ಸಂಘದವರಲ್ಲಿ ಹೇಳಿದೆ. ಅವರು ರಿಪೇರಿ ಮಾಡಿಕೊಡುತ್ತಿದ್ದಾರೆ”
-ಪೊಡಿಯ
ಮನೆಯ ಯಜಮಾನ

ನನಗೆ ವಿಷಯ ಗೊತ್ತಾಗಿ ಬಂದೆ. ಯಾವುದೇ ವ್ಯವಸ್ಥೆ ಇಲ್ಲಿ ಇರಲಿಲ್ಲ. ಬಳಿಕ ಬಿದ್ದ ಬಿದಿರನ್ನು ಅರಣ್ಯಾಧಿಕಾರಿಯ ಒಪ್ಪಿಗೆ ಪಡೆದು ನೀಡಿದ್ದೇವೆ. ಹಂಚಿನ ವ್ಯವಸ್ಥೆಯನ್ನು ಕುರಿತು ನಾಸಿರ್ ಕಟ್ಟೆಕ್ಕಾರ್ ರಿಗೆ ಹೇಳಿದಾಗ ಅವರು ತಕ್ಷಣ ಸ್ಪಂದಿಸಿ, ವ್ಯವಸ್ಥೆ ಕಲ್ಪಿಸಿದರು.
-ರಿಯಾಜ್ ಕಟ್ಟೆಕ್ಕಾರ್
ನ.ಪಂ. ಸದಸ್ಯರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.