ಶಿಥಿಲಗೊಂಡ ವೃದ್ದೆಯ ಸೂರು

Advt_Headding_Middle
Advt_Headding_Middle

 

ಶೇಣಿಯ ನಾಗರಿಕರಿಂದ ಮನೆ ದುರಸ್ತಿ

ಅಮರ ಪಡ್ನೂರು ಗ್ರಾಮದ ಶೇಣಿಯ ಒಬ್ಬಂಟಿ ವೃದ್ದೆಯ ಸಧ್ಯದಲ್ಲೇ ಬೀಳಲಿದ್ದ ಮನೆಯನ್ನು ಶೇಣಿಯ ಕೆಲ ನಾಗರಿಕರು ಸೇರಿ ದುರಸ್ತಿ ಮಾಡಿ ಕೊಟ್ಟ ಬಗ್ಗೆ ವರದಿಯಾಗಿದೆ.

ಶೇಣಿಯಲ್ಲಿ ವಾಸವಿರುವ ವೃದ್ದೆ ಅಕ್ಕುಣಿ ಎಂಬ ಸುಮಾರು 75 ವರ್ಷದ ಒಬ್ಬಂಟಿ ವೃದ್ದೆ ವಾಸಿಸುತ್ತಿದ್ದಾರೆ. ಹಿಂದೆ ತನ್ನ ಸಹೋದರ ಮಾಹಾಲಿಂಗ ಬೈರ ಅವರೊಂದಿಗೆ ವಾದವಿದ್ದ ಅವರು ಹಲವು ವರ್ಷಗಳ ಹಿಂದೆ ಸಹೋದರ ನಿಧನಾನಂತರ ಈ ವೃದ್ದೆ ಒಬ್ಬಂಟಿಯಾದರು. ಬಳಿಕ ವೃದೆಯನ್ನು ನೋಡಿಕೊಳ್ಳಲು ಯಾರೂ ಬಂಧುಗಳು ಇಲ್ಲದಾದರು. ಅಲ್ಲದೆ ವೃದ್ದೆಯೂ ಮಾನಸಿಕವಾಗಿ ಸ್ಥಿಮಿತವನ್ನು ಕಳಕೊಂಡು ತಿರುಗಾಡಲು ಆರಂಭಿಸಿದರು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಉಳಿದು ಕೊಳ್ಳಲು ಮನೆಗೆ ಬಂದರೂ ಊಟಕ್ಕೆ ಹತ್ತಿರದ ಮನೆಗೆ ಹೋಗುವ ಪರಿಪಾಟವಿತ್ತು. ಸ್ವಂತ ಜಾಗವಿದ್ದರೂ ಸರಿಯಾದ ದಾಖಲೆಗಳಿಲ್ಲದೆ ಸ್ಥಳೀಯಾಡಳಿತ ಸಹಾಯಕ್ಕೆ ಮುಂದಾಗುತ್ತಿರಲಿಲ್ಲ.
ಕಳೆದೆರಡು ವರ್ಷಗಳಿಂದ ವೃದ್ದೆಯ ಮನೆಯ ಮಾಡು ಶಿಥಿಲಗೊಂಡು ಬೀಳುವ ಪರಿಸ್ಥಿತಿಗೆ ಬಂದಿತ್ತು. ಈ ವರ್ಷ ಮಳೆಗಾಲಗಂತೂ ಮನೆಯ ಮಾಡು ಬೀಳುವುದು ಗ್ಯಾರಂಟಿಯಾಗಿತ್ತು. ಇದನ್ನು ಮನಗಂಡ ಸ್ಥಳೀಯರಾದ ಹರಿಪ್ರಸಾದ್ ರೈ ಶೇಣಿ ಅವರ ನೇತೃತ್ವದಲ್ಲಿ ಶೇಣಿ ಅಸುಪಾಸಿನ ಕೆಲ ನಾಗರಿಕರು ಸೇರಿಕೊಂಡು ಏ.20 ರಂದು ಮನೆಯನ್ನು ದುರಸ್ತಿ ಮಾಡಲಾಗಿದೆ. ಮನೆಯ ಮಾಡನ್ನು ಬಿಚ್ಚಿ ಹೊಸ ರೀಪು, ಪಕ್ಕಾಸು, ಹಂಚು ಜೋಡಿಸಿ ಮನೆಯನ್ನು ಭದ್ರಗೊಳಿಸಲಾಗಿದೆ. ಇದಲ್ಲದೆ ಇದೇ ತಂಡ ಅತೀ ಬಡತನದಲ್ಲಿರುವ ಪರಮೇಶ್ವರ ಗೋಪಾಲಕಜೆ, ಬೋಜ ಶೇಣಿ ಅವರುಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿಯನ್ನು ನೀಡಿ ಕಷ್ಟಕ್ಕೆ ಸ್ಪಂದಿಸಿದೆ. ಲಾಕ್ ಡೌನ್ ನಿಂದಾಗಿ ಜನ ಕಷ್ಟದಲ್ಲಿದ್ದರೂ ಗ್ರಾಮೀಣ ಭಾಗದ ಈ ಕೆಲಸ ಶ್ಲಾಘನೀಯ ಕಾರ್ಯ. ಈ ಒಂದು ಕಾರ್ಯದಲ್ಲಿ ಹೊನ್ನಪ್ಪ ಪೂಜಾರಿ ಕುಬ್ಲಾಡಿ, ನಾರಾಯಣ ಆಚಾರ್ಯ, ಗುರುಪ್ರಸಾದ್ ರೈ ಶೇಣಿ , ಜನಾರ್ದನ ಪೂಜಾರಿ, ಸುಬ್ರಹ್ಮಣ್ಯ ಸೂರೆಂಗಿ,ಚಂದ್ರಶೇಖರ ಸೂರೆಂಗಿ, ಭರತ್ ಕುಳ್ಳಾಜೆ, ಯಶೋಧರ ಕುಳ್ಳಾಜೆ, ರಾಮಚಂದ್ರ ಕುಳ್ಳಾಜೆ, ದಿನೇಶ ಕುಳ್ಳಾಜೆ, ಸುರೇಶ ಸೂರೆಂಗಿ, ವಿಜಯ ಸೂರೆಂಗಿ, ವಿಶ್ವನಾಥ ಸೂರೆಂಗಿ, ಸತೀಶ್ ಕುಳ್ಳಾಜೆ, ವಿವೇಕ್ ರೈ, ವಿಕೇಶ್ ರೈ, ಸುಧಿಪ್ ಸುವರ್ಣ, ಸೃಜನ್ ಸುವರ್ಣ, ಅಶೋಕ್ ಸಾಲ್ಯಾನ್, ಪ್ರಾಶಾಂತ್ ಸಾಲ್ಯಾನ್, ಪ್ರಾಶಾಂತ್ ರೈ ಪೋನಡ್ಕ, ಹರ್ಷಿತ್ ಪೋನಡ್ಕ, ಬೋಜ ಶೇಣಿ, ದೇವಣ್ಣ ಪಿಂಡಿಬನ, ಶ್ರೀಧರ್ ಕುಳ್ಳಾಜೆ, ಭವಾನಿ ಶೇಣಿ, ಕಮಲ ಶೇಣಿ ಸಹಕರಿಸಿದರು.
ವೃದ್ದೆಯ ಮನೆಯ ಬಾಗಿಲು ಬಿದ್ದು ಹೋಗಿದ್ದು, ರೂಮುಗಳ ನೆಲ ಕಿತ್ತುಹೋಗಿದೆ. ಹೊಸ ದಾನಿಗಳು ಮುಂದೆ ಬಂದು ಸಹಾಯ ಮಾಡಿದರೆ ಇನ್ನೂ ಉತ್ತಮ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.