Breaking News

ಮಡಿಕೇರಿ ಅಬಕಾರಿ ಪೊಲೀಸರ ದಾಳಿ, ಚೆಂಬು ಗ್ರಾಮದ 2 ಕಡೆ 90 ಲೀಟರ್ ಹಣ್ಣಿನ ಪುಳಿಗಂಜಿ ಪತ್ತೆ

Advt_Headding_Middle
Advt_Headding_Middle

ಕೊಡಗು ಜಿಲ್ಲೆಯ ಮಡಿಕೇರಿ ಪೊಲೀಸರು ಚೆಂಬು ಗ್ರಾಮದ ಎರಡು ಕಡೆ ದಾಳಿ ನಡೆಸಿ ಕಳ್ಳಬಟ್ಟಿ ತಯಾರಿಸಲು ಸಿದ್ಧಗೊಳಿಸಿದ ಸುಮಾರು ತೊಂಬತ್ತು ಲೀಟರ್ ನಷ್ಟು ಗೇರುಹಣ್ಣಿನ ಪುಳಿ ಗಂಜಿಯನ್ನು ಪತ್ತೆ ಹಚ್ಚಿ ನಾಶಪಡಿಸಿದ ಘಟನೆ ವರದಿಯಾಗಿದೆ.


ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಪೊಲೀಸರು ಚೆಂಬು ಗ್ರಾಮದ 2 ಮನೆಗಳಿಗೆ ದಾಳಿ ನಡೆಸಿ 1 ಮನೆಯಲ್ಲಿ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಶೇಖರಿಸಿಟ್ಟಿದ್ದ 40 ಲೀ. ಗೇರುಹಣ್ಣಿನ ಪುಳಿಗಂಜಿ ಹಾಗೂ ಮನೆಯೊಳಗೆ ಎರಡು ಲೀಟರ್ ನ ಮೂರು ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಆರು ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಂಡರೆ, ಪಕ್ಕದ ಮನೆಯಲ್ಲಿ ಐವತ್ತು ಲೀಟರ್ ಗೇರು ಹಣ್ಣಿನ ಪುಳಿ ಗಂಜಿ ಸಿಕ್ಕಿತೆನ್ನಲಾಗಿದೆ. ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.