ಕೊರೊನಾ ಇರುವ ಊರುಗಳಿಂದ ಸುಳ್ಯಕ್ಕೆ ಬಂದಿರುವ ವಾಹನಗಳು

Advt_Headding_Middle
Advt_Headding_Middle

 

ತಾಲೂಕು ಆಡಳಿತಕ್ಕೆ ಬೊಳ್ಳೂರು ತರಾಟೆ

ಕೊರೊನಾ ವೈರಸ್ ಇಲ್ಲಿ ಕಂಡುಬಂದರೆ ಆಡಳಿತವೇ ಹೊಣೆ

ನಮ್ಮ ಗ್ರಾಮದಲ್ಲಿರುವ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಹೋಗಲು ಲಾಕ್ ಡೌನ್ ಸಮಯದಲ್ಲಿ 70 ರಿಂದ 80 ವಾಹನಗಳು ಬಂದು ಹೋಗಿವೆ. ಬೇರೆ ಊರಿನಿಂದ ಬರಬಾರದೆಂದು ನಿಯಮ ಇದ್ದರೂ ಆ ವಾಹನಗಳನ್ನು ಬರಲು ಅನುನತಿ ನೀಡಿದ್ದು ಯಾಕೆ ಎಂದು ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು ತಾಲೂಕು ಆಡಳಿತವನ್ನು ತರಾಟೆಗೆತ್ತಿಕೊಂಡರಲ್ಲದೆ ಆ ಗ್ರಾಮದಲ್ಲಿ ಕೊರೊನಾ ವೈರಸ್ ಪತ್ತೆಯಾದರೆ ಅದಕ್ಕೆ ತಾಲೂಕು ಆಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ರ ಅಧ್ಯಕ್ಷ ತೆಯಲ್ಲಿ ಸಭೆ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು

ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಇ.ಒ.‌ ಭವಾನಿಶಂಕರ್, ತಹಶೀಲ್ದಾರ್ ಅನಂತಶಂಕರ್, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಸದಸ್ಯರುಗಳಾದ ರಾಧಾಕೃಷ್ಣ ಬೊಳ್ಳೂರು, ಪುಷ್ಪ ಮೇದಪ್ಪ, ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಉದಯ ಕೊಪ್ಪಡ್ಕ, ಅಶೋಕ ನೆಕ್ರಾಜೆ, ಅಬ್ದುಲ್ ಗಫೂರ್ ಹಾಗೂ ಪಿಡಿಒ ಗಳು, ಇಲಾಖಾಧಿಕಾರಿಗಳಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಬೊಳ್ಳೂರು ರವರು “ತಾಲೂಕು ಆಡಳಿತ ದಿಂದ ಯಾರಿಗೆಲ್ಲ ಪಾಸ್ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಸರಕು ಸಾಗಾಟ, ಸಹಾಯವಾಣಿಯವರಿಗೆ ಸೇರಿ 162 ಪಾಸ್ ನೀಡಲಾಗಿದೆ ಎಂದು ತಹಶೀಲ್ದಾರ್ ಹೇಳಿದರು. ಆಗ ತಹಶೀಲ್ದಾರನ್ನು ಪ್ರಶ್ನಿಸಿದ ರಾಧಾಕೃಷ್ಣ ಬೊಳ್ಳೂರುರವರು ದೇಶದಲ್ಲಿ ಲಾಕ್ ಡೌನ್ ಘೋಷಣೆ ಬಳಿಕ 70-80 ವಾಹನಗಳು ಸುಳ್ಯ ಮಾರ್ಗ ವಾಗಿ ಸತ್ಯಸಾಯಿ ವಿದ್ಯಾಸಂಸ್ಥೆಗೆ ಬಂದು ಹೋಗಿವೆ. ಇದು ತಾಲೂಕು ಆಡಳಿತದ ಗಮನಕ್ಕೆ ಬಂದಿಲ್ಲವೇ?. ಅವರಿಗೆ ಪಾಸ್ ಕೊಟ್ಟದ್ದು ಯಾರು?. ಬಂದಿರುವ ಎಲ್ಲ ವಾಹನಗಳು ಬೆಂಗಳೂರು, ಚಿಕ್ಕಬಳ್ಳಾಪುರ, ಗುಲ್ಬರ್ಗ ಸೇರಿದಂತೆ ಕೊರೊನಾ ಏರಿಯಾಗಳಿಂದಲೇ ಬಂದಿವೆ” ಎಂದು ಹೇಳಿದರು. “ಲಾಕ್ ಡೌನ್ ಸಂದರ್ಭದಲ್ಲಿ ಬರಬಾರದೆಂಬ ಆದೇಶ ಇದೆ. ಆದರೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದಕ್ಕೆ ಹೋಗಿರುವುದರಿಂದ ಹಾಸ್ಟೆಲ್ ನಲ್ಲಿರಲು ಪೋರ್ಸ್ ಮಾಡಬಾರದೆಂದು ಇದೆ” ಎಂದು ತಹಶೀಲ್ದಾರ್ ಹೇಳಿದಾಗ, “ಈ ಸಮಯದಲ್ಲಿ ಎಲ್ಲಿದ್ದೀರೊ ಅಲ್ಲೇ ಇರಿ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳುತ್ತಿದ್ದಾರೆ. ನಮ್ಮಲ್ಲಿ ಮಾತ್ರ ಹೊರಗಿನಿಂದ ವಾಹನಗಳು ಬಂದು ಹೋಗುತ್ತಿವೆ. ಒಂದು ವೇಳೆ ನಮ್ಮ ಗ್ರಾಮ ವ್ಯಾಪ್ತಿಯ ಲ್ಲಿ ಕೊರೊನಾ ವೈರಸ್ ಪತ್ತೆಯಾದರೆ ಅದಕ್ಕೆ ತಾಲೂಕು ಆಡಳಿತ ವೇ ಹೊಣೆ ಎಂದು ಹೇಳಿದರಲ್ಲದೆ ” ಈಗ ಯಾವುದೇ ವಾಹನವನ್ನು ಗ್ರಾಮದೊಳಗೆ ಬರಲು ನಾವು ಬಿಡುವುದಿಲ್ಲ. ಅದು ಎ.ಸಿ., ಡಿ.ಸಿ. ಹೇಳಿದರೂ ಬರಲು ಬಿಡುವುದಿಲ್ಲ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.