ಆಹಾರ ಸಾಮಾಗ್ರಿಯಿಲ್ಲದೆ ಪುತ್ತೂರು ಮಾಜಿ ಶಾಸಕಿಗೆ ಕರೆ

Advt_Headding_Middle
Advt_Headding_Middle

 

ಸುಳ್ಯ ನ. ಪಂ. ಸಹಯೋಗದಲ್ಲಿ ಕುಟುಂಬಕ್ಕೆ ಫುಡ್ ಕಿಟ್ ಪೂರೈಕೆ

ಆಹಾರ ಸಾಮಾಗ್ರಿ ಖಾಲಿಯಾಗಿ ಏನು ಮಾಡುವುದೆಂದು ತೋಚದ ಕುಟುಂಬ ವೊಂದು ಪುತ್ತೂರಿನ ಮಾಜಿ ಶಾಸಕರಿಗೆ ದೂರವಾಣಿ ಮಾಡಿ ವಿಷಯ ತಿಳಿಸಿದ ಮೇರೆಗೆ ಇದೀಗ ಆ ಕುಟುಂಬಕ್ಕೆ ಸುಳ್ಯ ನ.ಪಂ. ಸಹಯೋಗದೊಂದಿಗೆ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು ಆಹಾರ ಸಾಮಾಗ್ರಿಯನ್ನು ಅವರ ಮನೆಗೆ ತಲುಪಿಸಿದ್ದಾರೆ.

ಪುತ್ತೂರಿನ ಮುಕ್ವೆ ನಿವಾಸಿಯಾಗಿರುವ ದಂಪತಿಗಳು ಸುಳ್ಯದಲ್ಲಿದ್ದು ಕೆಲಸಕ್ಕೆ ಹೋಗುತ್ತಿದ್ದರು.
ಆದರೆ ಲಾಕ್ ಡೌನ್ ಘೋಷಣೆ ಯಾದಂದಿನಿಂದ ಕೆಲಸಕ್ಕೆ ಹೋಗಲು ಮನೆಯ ಯಜಮಾನನಿಗೆ ಸಾಧ್ಯವಾಗಿಲ್ಲ. ಕೈಯಲ್ಲದ್ದ ಹಣ ಖಾಲಿಯಾಗಿ ಆಹಾರ ಸಾಮಾಗ್ರಿಗೆ ಕೊರತೆಯಾಗಿತ್ತು.

ಯಾರಿಗೆ ಹೇಳುವುದೆಂದು ತೋಚದೆ ಆ ದಂಪತಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಮ್ಮ ಕಷ್ಟವನ್ನು ಹೇಳಿಕೊಂಡರು.‌ಇದಕ್ಕೆ ಕೂಡಲೇ ಸ್ಪಂದಿಸಿದ ಶಕುಂತಲಾ ಶೆಟ್ಟಿ ಅವರು ಸುಳ್ಯದ ಕಾಂಗ್ರೆಸ್ ಪಕ್ಷದ ನಾಯಕ, ಸುಳ್ಯ ನ.ಪಂ ಸದಸ್ಯ ವೆಂಕಪ್ಪ ಗೌಡರಿಗೆ ಮಾಹಿತಿ ನೀಡಿದ ಹಿನ್ನೆಲೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅವರು ಏಪ್ರಿಲ್ 21ರಂದು ನಗರ ಪಂಚಾಯತ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿ ಸಹಕರಿಸಿದರು. ಈ ಸಂದರ್ಭದಲ್ಲಿ ಕೆವಿಜಿ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಕೆ.,ನಗರ ಪಂಚಾಯತಿ ಸಿಬ್ಬಂದಿ ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.