Breaking News

ಅಡಿಕೆ ಮಾರಾಟ : ಎ.ಸಿ. ಆದೇಶ ಹಿಂಪಡೆದ ವಿಚಾರ – ತಾ.ಪಂ.ನಲ್ಲಿ ಪ್ರತಿಧ್ವನಿ

Advt_Headding_Middle
Advt_Headding_Middle

 

ಕಾಣದ ಕೈಗಳ ಒತ್ತಡ – ನೆಕ್ರಾಜೆ ಅರೋಪಕ್ಕೆ ಕಂಜಿಪಿಲಿ ಅಸಮಾಧಾನ


ಕಳೆದ ವಾರ ಎ.ಸಿ.ಯವರ ನೇತೃತ್ವದಲ್ಲಿ ಸುಳ್ಯ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಡಿಕೆ ಮಾರಾಟಕ್ಕೆ ಅವಕಾಶ ನೀಡುವ ಕುರಿತು ನಿರ್ಣಯವಾದ ಹಾಗೂ ತಡರಾತ್ರಿ ಈ ಆದೇಶವನ್ನು ಹಿಂಪಡೆದ ವಿಚಾರ ತಾ.ಪಂ. ಸಭೆಯಲ್ಲಿ ಪ್ರತಿಧ್ವನಿಸಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್ ನೆಕ್ರಾಜೆಯವರು “ಮೊನ್ನೆ ಎ.ಪಿ.ಎಂ.ಸಿ.ಯಲ್ಲಿ ಸಭೆ ನಡೆಸಿ ಅಡಿಕೆ ಮಾರಾಟಕ್ಕೆ ಕೃಷಿಕರಿಗೆ ಅವಕಾಶ ನೀಡಿ ತಡರಾತ್ರಿ ಅದೇಶ ಹಿಂಪಡೆದಿರುವುದು ಯಾಕೆ? ಎಂದು ಪ್ರಶ್ನಿಸಿದರಲ್ಲದೆ, ಕಾಣದ ಕೈ ಗಳು ಒತ್ತಡ ಹಾಕಿರುವುದರಿಂದಲೇ ಆದೇಶ ಹಿಂಪಡೆಯಲಾಗಿದೆ. ಯಾರದೋ ಒತ್ತಡಕ್ಕೆ ಮಣಿದು ಕೃಷಿಕರ ಜೀವನದಲ್ಲಿ ಆಟವಾಡುವುದು ಸರಿಯಲ್ಲ. ತಕ್ಷಣ ಅಡಿಕೆ ಖರೀದಿಸಲು ವರ್ತಕರಿಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು. ನೆಕ್ರಾಜೆ ಮಾತಿಗೆ ಧ್ವನಿಗೂಡಿಸಿದ ಅಬ್ದುಲ್ ಗಫೂರ್ ರವರು ” ಖಾಸಗಿ ಯವರಿಗೆ ಅಡಿಕೆ ಖರೀದಿಗೆ ಅವಕಾಶ ನೀಡಿದರೆ ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ. ಆದ್ದರಿಂದ ಈ ಕುರಿತು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು. ಆಗ ಮಾತನಾಡಿದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರು “ಸದಸ್ಯರು ಕಾಣದ ಕೈ ಎಂದು ಹೇಳಿದ್ದಾರೆ. ಹಾಗೆಲ್ಲ ಹೇಳುವುದಕ್ಕಿಂತ ಸ್ಪಷ್ಟವಾಗಿ ಆ ಕಾಣದ ಕೈ ಯಾರೆಂದು ಹೇಳಿದರೆ ಒಳ್ಳೆಯದು. ಯಾಕೆಂದರೆ ಕೊಕ್ಕೊ ಬೆಳೆ ಹಾಳಾಗುತ್ತಿರುವಾಗ ಕ್ಯಾಂಪ್ಕೊ ಸಂಸ್ಥೆ ಯವರ ಜತೆ ಮಾತುಕತೆ ನಡೆಸಿ ಅವರು ಖರೀದಿಸಿದ್ದಾರೆ. ಬಳಿಕ ಈಗ ಅಡಿಕರ ಖರೀದಿಸಿ ಕೃಷಿಕರಿಗೆ ಸಹಕಾರಿ ಯಾಗಿದ್ದಾರೆ. ಗೇರು ಬೀಜವನ್ನು ಸಹಕಾರಿ ಸಂಸ್ಥೆಗಳು ಉತ್ತಮ ಬೆಲೆಗೆ ಖರೀದಿಸುತ್ತಿದೆ. ಇಷ್ಟೆಲ್ಲ ಕೆಲಸ ಆಗುತ್ತಿದೆ ಎಂದು ಹೇಳಿದರು. ಆ ಚರ್ಚೆ ಅಲ್ಲಿಗೆ ನಿಂತಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.