Breaking News

ಮೆಸ್ಕಾಂ ಸೂಚನೆ : ಮಂಡ್ಯದಿಂದ ಹರಿಹರಕ್ಕೆ ಬಂದ ಲೈನ್ ಮೆನ್ ಕ್ವಾರಂಟೇನ್ ಗೆ

Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಮೆಸ್ಕಾಂ ವಿಭಾಗದವರಾಗಿದ್ದು ಹರಿಹರ ಪಲ್ಲತಡ್ಕ, ಬಾಳುಗೋಡು, ಐನೆಕಿದು ಭಾಗದ ಲೈನ್ ಮನ್ ಆಗಿರುವ ವಸಂತ ಕುಮಾರ್ ಟಿ.ಎಂ ಎಂಬವರು ರಜೆಯ ಮೇಲೆ ತೆರಳಿದ್ದವರನ್ನು ಇಲಾಖೆಯ ಸೂಚನೆ ಮೇರೆಗೆ ಕರ್ತವ್ಯಕ್ಕೆ ಹಾಜರಾದಾಗ ಸ್ಥಳೀಯರ ದೂರಿನ ಮೇರೆಗೆ ರೂಂ ಕ್ವಾರಂಟೇನ್ ಇರಬೇಕಾದ ಘಟನೆ ವರಧಿಯಾಗಿದೆ.

ವಸಂತರು ಲಾಕ್ ಡೌನ್ ಘೋಷಣೆ ಆಗುವ ಮೊದಲು ಮಾ.18 ರಂದು ತನ್ನೂರಾದ ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಅರಕೆರೆ ಹೋಬಳಿ ಗೆ ತೆರಳಿದ್ದರು. ಬಳಿಕ ಕೊರೋನಾ ಲಾಕ್ ಡೌನ್ ಘೋಷಣೆ ಆದ ಹಿನ್ನೆಲೆಯಲ್ಲಿ ಏ.14 ವರೆಗೆ ವೇತನ ಸಹಿತ ರಜೆ ಮುಂದುವರೆದಿತ್ತು. ಆದರೆ ಲೈನ್ ಮೆನ್ ಗಳ ಸೇವೆ ಅಗತ್ಯವಿದ್ದು ಕೊಡಲೆ ಕರ್ತವ್ಯಕ್ಕೆ ಹಾಜರಾಗುವಂತೆ ಏ.16 ರಂದು ಮೆಸ್ಕಾಂ ನಿಂದ ಆದೇಶವಾಗುತ್ತದೆ. ಇದರನ್ವಯ ವಸಂತ್ ಅವರು ತನ್ನ ಆಸಕ್ತಿಯಿಂದಲೇ ಊರಿನಿಂದ ಹಾಸನ, ಸಕಲೇಶಪುರ, ಗುಂಡ್ಯ ಮಾರ್ಗವಾಗಿ ಹರಿಹರಕ್ಕೆ ಏ.20 ಕ್ಕೆ ಬಂದಿದ್ದಾರೆ. ಈ ಮಧ್ಯೆ ಹಲವು ಕಡೆ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗೆ ಒಳಪಟ್ಟು ಇಲಾಖೆಯ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುವವರಾಗಿದ್ದ ಕಾರಣ ಹರಿಹರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಆರೋಗ್ಯ ಇಲಾಖೆಯ ಸುಬ್ರಹ್ಮಣ್ಯದ ಸರ್ಕಾರಿ ವೈದ್ಯಾಧಿಕಾರಿ ತ್ರಿಮೂರ್ತಿ, ಡಾ.ನಂದಕುಮಾರ್ ಅವರಿಗೆ ಮಾಹಿತಿಯಿತ್ತು ಕರ್ತವ್ಯಕ್ಕೆ ಬಂದಿದ್ದರು. ಈ ಮಧ್ಯೆ ಮೈಸೂರಿನಿಂದ ಬಂದರೆಂಬ ದೂರು ಸ್ಥಳೀಯರಿಂದ ಹರಿಹರ ಪಂಚಾಯತ್ ಗೆ ಹೋದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಹಿಮ್ಮತ್ ಕೆ.ಸಿ ಮತ್ತು ಕೊರೋನಾ ನೊಡೆಲ್ ಅಧಿಕಾರಿ ದೇವರಾಜ್ ವಸಂತ್ ಅವರನ್ನು ಹರಿಹರದಲ್ಲಿರುವ ಅವರ ರೂಮ್ ಗೆ ಭೇಟಿನೀಡಿ ಮುಂದಿನ 14 ದಿನ ರೂಮ್ ಲ್ಲಿಯೇ ಇರುವಂತೆ ಸೂಚಿಸಿದ್ದಾರೆ ಅಲ್ಲದೆ ಹಿಮ್ಮತ್ ಅವರು ಅಗತ್ಯ ದಿನಸಿ ಪೂರೈಸಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಊರಿನಲ್ಲೂ, ಬರವಾಗಲೂ ಅತ್ಯಂತ ಮುಂಜಾಗ್ರತಾ ಕ್ರಮವಾಗಿ ಸೇಪ್ಟಿಯಾಗಿದ್ದೆ. ಆರೋಗ್ಯ ಇಲಾಖೆ, ಮೆಸ್ಕಾಂ ಮಾರ್ಗದರ್ಶನದಲ್ಲಿ ಇಲ್ಲಿಗೆ ಬಂದಿದ್ದು, ನನ್ನ ಕರ್ತವ್ಯದ ಭಾಗದಲ್ಲಿ ನನ್ನಿಂದಾಗಿ ತೊಂದರೆ ಆದಬಾರದೆಂದು ಉದ್ದೇಶದಿಂದ ರಿಸ್ಕ್ ತಗೊಂಡು ಇಲ್ಲಿಗೆ ಬಂದಿದ್ದೇನೆ.
_
ವಸಂತಕುಮಾರ್ ಮೆಸ್ಕಾಂ ಉದ್ಯೋಗಿ.

ನಾವು ನಮ್ಮ ನಿಯಮದಂತೆ ಮಾಡಿದ್ದೇವೆ. ಜನರಿಗೆ ಆತಂಕವಿತ್ತು ಆತಂಕ ದೂರಮಾಡಲು ಕ್ವಾರಂಟೇನ್ ಅನಿವಾರ್ಯ.
– ಹಿಮ್ಮತ್ ಕೆ.ಸಿ, ಅಧ್ಯಕ್ಷರು, ಹರಿಹರ ಪಲ್ಲತಡ್ಕ ಗ್ರಾ.ಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.