ನಗರದ ಕೆಲವು ಕಡೆ ನೀರಿನ ಸಮಸ್ಯೆ

Advt_Headding_Middle
Advt_Headding_Middle

 

ಪಂಪ್ ಹೌಸ್ ಗೆ ಭೇಟಿ ನೀಡಿದ ನ.ಪಂ.ಸದಸ್ಯರು – ಅಧಿಕಾರಿಗಳೊಂದಿಗೆ ಚರ್ಚೆ

ಸುಳ್ಯದ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಕುರಿತು ಪರೀಲಿಸಲು ಕಲ್ಲುಮುಟ್ಲು ಪಂಪು ಹೌಸ್ ಗೆ ಭೇಟಿ ನೀಡಿದ ನ.ಪಂ ಸದಸ್ಯರುಗಳಾದ ವೆಂಕಪ್ಪ ಗೌಡ, ವಿನಯ್ ಕುಮಾರ್ ಕಂದಡ್ಕ ,ಶರೀಫ್ ಕಂಠಿ,ರವರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲಿ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ವಿನಂತಿಸಿಕೊಂಡರು.

ಈಗಾಗಲೇ ಪಂಪ್ ಹೌಸಿನಲ್ಲಿ ನಲ್ಲಿ ಎರಡು ಮೋಟಾರುಗಳು ಕಾರ್ಯಾಚರಿಸುತ್ತಿದ್ದು ಅದರಲ್ಲಿ ಒಂದು ದುರಸ್ತಿಗೋಳಗಾಗಿದ್ದು, ಕೇವಲ ಇನ್ನೊಂದು ಮೋಟಾರಿನ ಮೂಲಕ ನಗರಕ್ಕೆ ನೀರನ್ನು ಹಂಚಲಾಗುತ್ತಿದೆ . ಕೆಟ್ಟಿರುವ ಮೋಟಾರು ದುರಸ್ತಿಗೆ ಮಂಗಳೂರಿನಿಂದ ಸಂಬಂಧಪಟ್ಟವರು ಬರಬೇಕಾದರೆ ಲಾಕ್ಡೌನ್ ಇರುವ ಕಾರಣ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಪುತ್ತೂರಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಪಂಚಾಯತಿ ಸದಸ್ಯರುಗಳಾದ ವೆಂಕಪ್ಪಗೌಡ ಹಾಗೂ ವಿನಯಕುಮಾರ್ ಕಂದಡ್ಕ ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲಿ ಮೋಟಾರಿನ ದುರಸ್ತಿ ಕಾರ್ಯವನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ನ ಪಂ ಇಂಜಿನಿಯರ್ ಶಿವಕುಮಾರ್ ಹಾಗು ಪಂಪು ಹೌಸಿನ ಸಿಬ್ಬಂದಿಗಳು, ಕೆರೆಮೂಲೆ ವಾರ್ಡಿನ ನಿವಾಸಿಗಳಾದ ಸೈಯೃದ್ ಪಾರೆ, ಜಲೀಲ್, ಮನ್ಸೂರ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.