ಐವರ್ನಾಡು : ಕೊರೊನಾ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೊನಾ ಕಾರ್ಯಪಡೆ ಸಮಿತಿಯ ಸಭೆಯು ಎ.23 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ .ಎನ್.ಮನ್ಮಥರ ಅಧ್ಯಕ್ಷತೆಯಲ್ಲಿ ನಡೆಯಿತು.
ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮೀಣ ಕಾರ್ಯಪಡೆ(Village task force) ಸಮಿತಿ ಸಭೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಬಡತನ ರೇಖೆಯಿಂದ ಕೆಳಗಿದ್ದು ನಾನ ಕಾರಣಗಳಿಂದ APL ಕಾರ್ಡ್ ಹೊಂದಿರುವ 150 ಫಲಾನುಭವಿಗಳಿಗೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪಡಿತರ ಕಿಟ್ ನ್ನು ವಿತರಿಸಲಾಯಿತು ಮತ್ತು ಈ ಸಂಧರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಯಸ್.ಯನ್.ಮನ್ಮಥರು ಮಾತನಾಡಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೂ ಹಸಿವಿನಿಂದ ಇರಬಾರದು ಅಂತಹ ಪಡಿತರ ಸಮಸ್ಯೆಯಿರುವವವರು ಇದ್ದರೆ ಅವರಿಗೆ ಕೂಡ ಪಡಿತರ ವಿತರಿಸಲಾಗುವುದು ಎಂದರು ಈ ಸಂಧರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರವಿಪ್ರಸಾದ್.ಸಿ.ಕೆ, ಉಪಾಧ್ಯಕ್ಷರಾದ ವಿಕ್ರಂ ಪೈ ನಿರ್ದೇಶಕರಾದ ಕುಸುಮಾಧರ ಮಡ್ತಿಲ,ಸತೀಶ್ ಎಡಮಲೆ, ಚಂದ್ರಶೇಖರ ಕೊಯಿಲ,ವಾಸುದೇವ ಬೊಳುಬೈಲು, ಗ್ರಾಮ ಕರಣಿಕರಾದ  ಕಾರ್ತಿಕ್ ಗ್ರಾಮ ಸಹಾಯಕರಾದ ಧರ್ಮಪಾಲ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ,ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಲಿಂಗಂ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಯು.ಡಿ ಶೇಖರ್, ಪುರಂದರ ಶಾಂತಿಮೂಲೆ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್.ಯು.ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೊನೆಯಲ್ಲಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.