ನನಗೆ ಕೊರೊನಾ ಪಾಸಿಟಿವ್ ಬಂದಿಲ್ಲ. ಅಪಪ್ರಚಾರ ಮಾಡಬೇಡಿ : ಬೆಳ್ಳಾರೆ ಪಿ.ಡಿ.ಒ. ಮನವಿ

Advt_Headding_Middle
Advt_Headding_Middle

ಸ್ವಲ್ಪ ಮಟ್ಟಿನ ಜ್ವರ ಮತ್ತು ಗಂಟಲು ಕೆರೆತದ ಕಾರಣಕ್ಕಾಗಿ ಆಸ್ಪತ್ರೆಗೆ ಬಂದು ಸ್ವಯಂ ಆಸಕ್ತಿಯಿಂದ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಬೆಳ್ಳಾರೆ ಪಿ.ಡಿ.ಒ. ಧನಂಜಯರಿಗೆ ಕೊರೋನಾ ಸೋಂಕು ತಗಲಿಲ್ಲ ಎಂದು ವರದಿ ಬಂದಿದೆ . ಆದರೆ ಕೆಲವರು ಪಿ.ಡಿ.ಒ.ಗೆ ಪಾಸಿಟಿವ್ ಬಂದಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆಂದು ಚಿಂತೆಗೊಳಗಾಗಿದ್ದಾರೆ.
ಬೆಳ್ಳಾರೆ ಪಿ.ಡಿ.ಒ. ಧನಂಜಯರಿಗೆ ಸ್ವಲ್ಪ ಮಟ್ಟಿಗಿನ ಜ್ವರ ಮತ್ತು ಗಂಟಲು ಕೆರೆತ ಇದ್ದುದರಿಂದ ಕಳೆದ ಶನಿವಾರ ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ವೈದ್ಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಕಪ್ ಮಾಡಿಸುವಂತೆ ಸಲಹೆ ನೀಡಿದರು. ಅದರಂತೆ ಧನಂಜಯರು ಆದಿತ್ಯವಾರ ಸುಳ್ಯ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಿದರಲ್ಲದೆ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಟೆಸ್ಟ್ ಮಾಡಿಸುವಂತೆ ವೈದ್ಯರೊಡನೆ ಕೇಳಿದರೆನ್ನಲಾಗಿದೆ. ಅದರಂತೆ ವೈದ್ಯರು ಅವರ ಗಂಟಲ ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಿದರು. ನಿಯಮದಂತೆ ಅವರನ್ನು ಆಸ್ಪತ್ರೆ ಯಲ್ಲೆ ಕ್ವಾರೆಂಟೈನ್ ವಾರ್ಡಲ್ಲಿ ಇರಿಸಿದರು. ಪರೀಕ್ಷಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರು ಎ.22 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಬೆಳ್ಳಾರೆಯ ತಮ್ಮ ರೂಮಿಗೆ ಹಿಂತಿರುಗಿದರು.
ಅಂದು ಸಂಜೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಬಂದು ಪುನ: ಧನಂಜಯರನ್ನು ಸುಳ್ಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಇದರಿಂದ ಕೆಲವರಿಗೆ ‘ ಪಿ.ಡಿ.ಒ.ಗೆ ಪಾಸಿಟಿವ್ ಬಂದಿದೆ ‘ ಎಂಬ ವದಂತಿ ಹರಡಿತು.
ಈ ಪ್ರಚಾರದ ಬಗ್ಗೆ ತಿಳಿದು ತೀವ್ರ ನೊಂದುಕೊಂಡ ಪಿ.ಡಿ.ಒ. ಧನಂಜಯರು ಸುದ್ದಿಯನ್ನು ಸಂಪರ್ಕಿಸಿ *’ ನನಗೆ ಕೊರೋನಾ ಬಾಧಿಸಿಲ್ಲ. ವೈದ್ಯರು ಬೇಕಾಗಿಲ್ಲವೆಂದರೂ ನಾನೇ ಆಸಕ್ತಿ ವಹಿಸಿ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದೇನೆ. ಆಸ್ಪತ್ರೆಯಿಂದ ನನ್ನ ಸ್ವ್ಯಾಬ್ ಕಳಿಸುವಾಗ ತಡ ಮಾಡಿದ್ದರಿಂದ ವರದಿ ಬರುವಾಗ ತಡವಾಗಿ ನಾನು ನಾಲ್ಕು ದಿನ ಆಸ್ಪತ್ರೆಯಲ್ಲಿರುವಂತಾಯಿತು. ಜಿ.ಪಂ. ಸಿ.ಇ.ಒ.ರವರೇ ಫೋನ್ ಮಾಡಿ ನಿನ್ನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಚಿಂತಿಸಬೇಡಿ ಎಂದು ಹೇಳಿದ್ದರು. ಆ ಬಳಿಕ ನಾನು ಡಿಸ್ಚಾರ್ಜ್ ಆಗಿ ಬೆಳ್ಳಾರೆಗೆ ಬಂದಿದ್ದೆ. ಪರೀಕ್ಷಾ ವರದಿಯ ಅಧಿಕೃತ ಪ್ರತಿ ಪಡೆದುಕೊಳ್ಳಲೆಂದು ನಮ್ಮ ಅಧಿಕಾರಿಯವರು ನನ್ನನ್ನು ಸುಳ್ಯಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಇಲ್ಲಿ ನನ್ನ ಬಗ್ಗೆ ಅಪಪ್ರಚಾರವಾಗಿದೆ ‘*ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.