ಕೊರೊನಾ ಮಹಾಮಾರಿ – ಲಾಕ್‌ಡೌನ್ ನಲ್ಲಿ ಕಂಡುಕೊಳ್ಳಿ ಮಾನಸಿಕ ನೆಮ್ಮದಿ

Advt_Headding_Middle
Advt_Headding_Middle

ಈ ಕೊರೊನಾ ಎಂಬ ವೈರಾಣು ಎಲ್ಲರಲ್ಲೂ ಒಂದು ತರಹದ ಭೀತಿಯ ವಾತಾವರಣ ಸೃಷ್ಟಿಸಿದೆ. ಮನೆಯಲ್ಲಿ ಯಾರಾದರೂ ಕೆಮ್ಮಿದರೆ, ಸೀನಿದರೆ ಕೊರೊನಾ ಬಂದುಬಿಟ್ಟಿತು ಎಂಬ ಊಹೆ. ಟಿವಿ ವಾಹಿನಿಗಳಲ್ಲಿ ಇದರ ಬಗ್ಗೆ ವಿಚಿತ್ರವಾದಧ್ವನಿಯಲ್ಲಿ ಕಾರ್ಯಕ್ರಮಗಳು ಬರುವಾಗ ಎಲ್ಲರ ಆತಂಕತಾರಕಕ್ಕೇರುತ್ತದೆ. ಮನಸ್ಸಿನ ಒಳಗೆ ಚಳಿ ಚಳಿ, ಮೈಗೆ ಜ್ವರವೇ ಬಂದಂತೆನಿಸುತ್ತದೆ. ಈ ತರಹದ ಅನಾವಶ್ಯಕ ಭಯ ಭೀತಿ ಆತಂಕ ಕೆಲವರನ್ನು ಮಾನಸಿಕ ಖಿನ್ನತೆಗೆದೂಡಿಬಿಡುತ್ತದೆ. ಕೆಲವರುಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಇವೆ.
ನೀವು ಈ Lockdown ಸಮಯದ ಮಜವನ್ನು ಅನುಭವಿಸಲು ಮತ್ತು ನೆಮ್ಮದಿಯಾಗಿ ಕಳೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
ಕೊರೊನಾರೋಗದ ಬಗ್ಗೆ
ಪ್ರತಿಕೆಮ್ಮು, ನೆಗಡಿ, ಜ್ವರಅoviಜಎಂದು ಪರಿಗಣಿಸಬೇಡಿ.
Covid ಬಂದರೆ ಸತ್ತೇಹೋಗುತ್ತೇವೆ ಎಂಬ ಭಯವನ್ನುದೂರ ಮಾಡಿಕೊಳ್ಳಿ
ಶಂಕಿತ, ಸೋಂಕಿತರು, ಕ್ವಾರೆಂಟೈನ್ ಗೆ ಒಳಗಾದವರೊಂದಿಗೆ ಜಾಗ್ರತೆಯಿಂದಿರಿಆದರೆ ಸೌಜನ್ಯದಿಂದ ವರ್ತಿಸಿ
ಸಮಯವನ್ನು ಕಳೆಯುವ ಬಗ್ಗೆ
Lockdown ಸಮಯಕ್ಕೆಂದೇಒಂದು ಹೊಸ ವೇಳಾಪಟ್ಟಿ ಮಾಡಿಕೊಳ್ಳಿ ಮತ್ತುಅದನ್ನು ಪಾಲಿಸಿ.
ಆರೋಗ್ಯಕರವಾದ ಚಟುವಟಿಕೆಗಳನ್ನು ಆ ವೇಳಾಪಟ್ಟಿಯಲ್ಲಿ ಅಳವಡಿಸಿಕೊಳ್ಳಿ. ವ್ಯಾಯಾಮ, ಸಂಗೀತ, ನೃತ್ಯ, ಕಲೆ ಅಲ್ಲದೆ ಹೊಸ ಕಲೆಗಳನ್ನು ಕಲಿಯಲು ಪ್ರಯತ್ನಿಸಿ, ಇಲ್ಲವೆ ನಿಮ್ಮ ಬಾಲ್ಯದಲ್ಲಿರುವ ಆಸಕ್ತಿಗಳಿಗೆ ಮರುಜೀವಕೊಡಿ.
ಸಮಯದಅಭಾವದಿಂದ ಮನಸ್ಸಿನಲ್ಲೇ ಮಾಡಬೇಕೆಂದುಕೊಂಡಿರುವ ಕೆಲಸಗಳನ್ನು ಮಾಡಲು ಸಕಾಲ
ಮಕ್ಕಳೊಂದಿಗೆ, ಮನೆಮಂದಿಯೊಂದಿಗೆ ಸಮಯ ಕಳೆಯಲು ಸಿಗದವರು ಸದವಕಾಶವನ್ನುಅತ್ಯುತ್ತಮರೀತಿಯಲ್ಲಿಉಪಯೋಗಿಸಬಹುದು.
ಹೊಸ ಹವ್ಯಾಸಗಳು, ಹೊಸ ರುಚಿಗಳು, ಪುಸ್ತಕ ಓದುವುದು, ಬರವಣಿಗೆ, ಕಸೂತಿ ಇತ್ಯಾದಿಗಳನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದು.
ಸುದ್ದಿ ಮಾಧ್ಯಮಗಳ ಬಗ್ಗೆ
ದಿನಪೂರ್ತಿಕೊರೊನಾಕುರಿತ ಸುದ್ದಿಗಳನ್ನೇ ಕೇಳಬೇಡಿ. ದಿನದಲ್ಲಿಒಂದೋ, ಎರಡೋ ಬಾರಿ ವಿಚಾರ ತಿಳಿದುಕೊಳ್ಳಿ.
ನಂಬಿಕಸ್ಥ ಸುದ್ದಿ ಮಾಧ್ಯಮಗಳ ಮೊರೆ ಹೋಗುವುದು ಒಳ್ಳೆಯದು. ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಬರುವಎಲ್ಲಾ ಸುದ್ದಿಗಳನ್ನು ನಂಬಬೇಡಿ.
ಕೊರೊನಾದಿಂದಗುಣಮುಖರಾಗಿರುವವರ ಸುದ್ದಿಯನ್ನು ನೋಡಿ, ಅವರಕಥೆಯನ್ನು ಕೇಳಿ
ಮಕ್ಕಳ ಬಗ್ಗೆ
ಮಕ್ಕಳ ಬಗ್ಗೆ ಗಮನವಿರಲಿ, ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಕೊಡಿ; ಕೈ ತೊಳೆಯುವ ಬಗ್ಗೆ, ಸ್ವಚ್ಛತೆಯ ಪಾಠ ಮಾಡಲುಇದು ಸಕಾಲ ಅವರನ್ನು ಪ್ರೋತ್ಸಾಹಿಸಿ, ಪ್ರಶಂಸಿಸಿ.
ಹೆಚ್ಚು ಸಮಯ ಮೊಬೈಲ್, ಟಿವಿಯೊಳಗೆ ಕಳೆಯದಂತೆ ನೋಡಿಕೊಳ್ಳಿ. ಮನೆಕೆಲಸಗಳನ್ನು ಕಲಿಸಿಕೊಡಿ, ಸ್ವಲ್ಪದೊಡ್ಡ ಮಕ್ಕಳಾಗಿದ್ದರೆ ಅಡುಗೆ ಮುಂತಾದವುಗಳನ್ನು ಕಲಿಸಿಕೊಡಿ, ಪುರಾಣ ಕಥೆಗಳನ್ನು ಓದಿ ಹೇಳಿ.
ನಿಮ್ಮ ಕಾಳಜಿ
ದಿನನಿತ್ಯ ವ್ಯಾಯಾಮ, ಮಿತಆಹಾರ, ಯೋಗ, ಧ್ಯಾನಗಳನ್ನು ಮಾಡಿ
ಮನೆಗೆ ಬೇಕಾದಆಹಾರ ವಸ್ತುಗಳನ್ನು ಮುಂಚಿತವಾಗಿತಂದಿಟ್ಟುಕೊಂಡರೆ ಕೊನೇ ಕ್ಷಣದಗಡಿಬಿಡಿತಪ್ಪುತ್ತದೆ.
ನೀವು ಯಾವುದಾದರು ದೀರ್ಘಕಾಲದಖಾಯಿಲೆಯಿಂದ ಬಳಲುತ್ತಿದ್ದರೆ (ಉದಾ: ಬಿಪಿ, ಶುಗರ್, ಮನೋವ್ಯಾಧಿ) ನಿಮ್ಮ ಔಷಧಿಗಳನ್ನು ತಂದಿರಿಸಿಕೊಳ್ಳಿ ಹಾಗೂ ಅವುಗಳನ್ನು ಮುಂದುವರೆಸಿ
ಮಧ್ಯಪಾಲ, ಧೂಮಪಾಲ ಮುಂತಾದ ಚಟಗಳಿದ್ದರೆ ಇವುಗಳನ್ನು ತ್ಯಜಿಸಲುಇದುಒಂದು ಒಳ್ಳೆಯ ಅವಕಾಶ. ಇದನ್ನು ಸರಿಯಾದರೀತಿಯಲ್ಲಿ ಉಪಯೋಗಿಸಿಕೊಳ್ಳಿ.
ಮನೆಯಿಂದ ಹೊರಗೆ ಹೋಗುವಾಗ ಸರಕಾರ ಹೇಳಿದ ನಿಯಮಗಳನ್ನು ಪಾಲಿಸಿದರೆ (ಉದಾ: ಮಾಸ್ಕ್‌ಧರಿಸುವುದು, ದೂರದಿಂದ ಮಾತಾಡುವುದು, ಕೈ ತೊಳೆಯುವುದು, ಆಗಾಗ ಮುಖ ಮುಟ್ಟದಿರುವುದು) ನೀವು ಸುರಕ್ಷಿತವಾಗಿರುತ್ತೀರಿ.
ಸಂಬಂಧಗಳ ಬಗ್ಗೆ
ನಿಮ್ಮ ಹಳೆಯ ಸ್ನೇಹಿತರು, ಬಂಧುಗಳೊಂದಿಗೆ ದೂರವಾಣಿಯಲ್ಲಿ ಮಾತಾಡಿಕೊಂಡು ನಿಮ್ಮ ಬೇಸರದ ಸಮಯವನ್ನು ಕಳೆಯಬಹುದು
ಗ್ರೂಪ್ ವೀಡಿಯೋಕಾಲ್ ಮೂಲಕ ಒಂದೇ ಸಮಯದಲ್ಲಿ ಮನೆಯವರೊಂದಿಗೆ ಮಾತನಾಡಬಹುದು

ಸದ್ಯದ ಪರಿಸ್ಥಿತಿಯಲ್ಲಿ ಯಾವುದು ನಮ್ಮ ಹತೋಟಿಯಲ್ಲಿಇದೆಯೋಅದರ ಬಗ್ಗೆ ನಾವು ಗಮನವನ್ನು ಕೇಂದ್ರೀಕರಿಸಿ, ಈ ಸಮಯವನ್ನುಉಪಯುಕ್ತವಾಗಿಸಬಹುದು.
ಯಾವುದು ನಮ್ಮ ಹತೋಟಿಯಲ್ಲಿಇಲ್ಲವೋಅದರ ಬಗ್ಗೆ ಚಿಂತಿಸುವುದರಿಂದ ನಮ್ಮ ಮನಸ್ಸಿನ ಆರೋಗ್ಯ ಹದಗೆಡುತ್ತದೆ. ಖಿನ್ನತೆ, ಆತಂಕ, ನಿದ್ರಾಹೀನತೆ, ಬೇಡದ ಚಟಗಳು ಹೆಚ್ಚಾಗುತ್ತವೆ. ಆತ್ಮಹತ್ಯೆಯ ಆಲೋಚನೆಗಳು ಸುಳಿದಾಡುತ್ತವೆ. ನಿಮಗೆ ಈ ಸಮಸ್ಯೆಗಳು ಕಂಡುಬಂದರೆಉಚಿತಸಹಾಯವಾಣಿಗೆಕರೆ ಮಾಡಿ ಆಪ್ತ ಸಮಾಲೋಚನೆ ಪಡೆದುಕೊಳ್ಳಬಹುದು. (NIMHANS: 080 46110007) ಇಲ್ಲವೇ ನಿಮ್ಮ ಹತ್ತಿರದ ಮನೋವೈದ್ಯರಲ್ಲಿ/ ಮನಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು
ನೆನಪಿರಲಿ:ಯಾವುದೇತರಹದ ಸಮಸ್ಯೆ (ಉದಾ: ಹಣಕಾಸು ಮತ್ತಿತರ) ಇದ್ದರೂಅದು ಶಾಶ್ವತವಲ್ಲ, ಒಂದಲ್ಲಒಂದು ದಿನ ಅದುಕರಗುತ್ತದೆ, ಇಲ್ಲವೇ ನೀವು ಸಮಸ್ಯೆಯೊಂದಿಗೆ ಬಾಳಲು ಶಕ್ತರಾಗುತ್ತೀರಿ.

-ಡಾ|| ಪೂನಮ್ ಮೋಂಟಡ್ಕ,

MBBS, MD (Psychiatry)

ಕೆ.ವಿ.ಜಿ.ಮೆಡಿಕಲ್‌ಕಾಲೇಜು ಮತ್ತುಆಸ್ಪತ್ರೆ, ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.