Breaking News

ಬಾವನ ಬತ್೯ಡೇ : ಅರೆಭಾಷೆ ಕಥೆ

Advt_Headding_Middle
Advt_Headding_Middle

 

✍️ ಧನ್ಯಶ್ರೀ ಕಳಗಿ

ಈ ಕೊರೊನಂದಾಗಿ ನಂಗೆ ಮನೆಲಿ ಕುದ್ದು, ನಿಗರಿ ನಿಗರಿ ಬಿಡ್ದ್ ಹೋತ್. ಹಂಗೆ ಒಮ್ಮೆ ಆಚೆಕರೆ ಮಾವನಲ್ಲಿಗೆ ಪೋಯಿತ ಹೋದೆ. ಹೋಗಿ ನೋಡ್ಕನ ನಮ್ಮ ಬಾವ ಮೊನ್ನೆ ಬೆಂಗ್ಳೂರುಂದ ಬಾಕನ, ಅವನ 3 ಫ್ರೆಂಡ್ ಗಳ ಒಟ್ಟಿಗೆ ಕೋಸಿಕಂಡ್ ಬಂದಿತ್ತ್. ಈಗ ಈ ಲಾಕ್ ಡೌನ್ಂದಾಗಿ ಅತ್ತ ಇತ್ತ ಹೋಕೆ ಆಗದೆ ಸುಮಾರ್ ದಿನಂದಿತ್ತ ಇವನ ಮನೆಲೆ ಹೈದಂಗ ಟೆಂಟ್ ಹಾಕ್ಯೊಳೊ. ಆದರೆ,ಇತ್ತಕೆ ನಮ್ಮ ಮಾವಂಗೆ ‘ಒಮ್ಮೆ ಈ ಹೈದಂಗ ಹೋದರೆ ಸಾಕಪ್ಪ. ಇವ೯ 30 ಕೆ.ಜಿ.ಅಕ್ಕಿ 4 ದಿನಕ್ಕಾರ್ ಜಾಸ್ತಿ ಬಲಿ೯ತ” ಮನ್ಸ್ ಲೇ ಗುಳಿಗಂಗೆ ಕೈ ಮುಗೆತಿದ್ದೊ. ಹೆಂಗೋ ಕನ೯ಕುತ್ತ ಮಾಡಿ ದಿನ ಹೋತಿದ್ದಾಂಗೆ ಬಾವನ ಬತ್೯ಡೇ ದಿನ ಬಾತ್. ಹೈದಂಗೆ ಬೆಚ್ಚ ಆಕೆ ಸುರಾತ್.
ಫ್ರೆಂಡ್ ಗ ಕೂಡಾ ಮನೆಲಿ ಒಳೊ, ಪೇಟೆಗೆ ಹೋಗ್ವಾಂಗೆ ಇಲ್ಲೆ. ಕೇಕ್ ,ಪಿಜ್ಜಾ-ಬಗ೯ರ್,ಬಿರಿಯಾನಿ,ಜ್ಯೂಸ್…ಹಿಂಗೆ ‘ಪಾಟಿ೯’ ಮಾಡಿಕೆ ಎಂತದು ಇಲ್ಲೆತ ಬಾಂಡಿದ ಬದನೆನಾಂಗೆ ಮುಸುಂಡು ಮಾಡಿ ಚಿಂಟೆ ಮೂಲೆಲಿ ಕುದ್ದುಟು. ನಾ ಇವನ ಸೊಡ್ಡುನ ನೋಡಿ ಎಂತಾತಪ್ಪತ ನೆನ್ಸಿದೆ.ಹೋಗಿ ‘ಏನಾತ್ ಯ ಬಾವ’ ತ ಕೇಳ್ದೊಂದೇ ಪುಸೊ೯ತು, ಸುರುಮಾಡ್ತಲ ವಕಾಲತ್, ಕೊರೊನಕ್ಕೆ ಶಾಪ ಆರ್ ಹಾಕಿತಣ್ಣಾ.. ಮತ್ತೆ ಜನ್ಮಲಿಮನಿ ಕೊರೊನ ಇವನಕ್ಕಲೆ ಬುಡಿ ಇವನ ಊರಿಗೂ ಬಾಕಿಲೆ ಹಂಗುಸ ಪರ್ಂಚಿಕಂಡಿತ್ತ್. ‘ ಫ್ರೆಂಡ್ ಗ ಇರ್ಕನ ನಾ ಅವ್ಕೆ ಗಂಜಿ ಚಟ್ನಿ ಕೊಟ್ಟರೆ ನನ್ನ ಸ್ಟೇಟಸ್ ಏನಾಕಿಲೆ’ ಹಂಗೆ ಹಿಂಗೆತ ಇಪ್ಪತ್ತೈದ್ ಹೇಳ್ತ್. ನಾನಾರ್ ಏನ್ ಮಾಡಿಕಾದೆ.ದೊಡ್ಡಜನರಾಂಗೆ ‘ನೀ ಬೆಚ್ಚ ಮಾಡ್ಬಡ ಬಾವ, ಏನಾರ್ ವ್ಯವಸ್ಥೆ ಮಾಡೊಮುತ’ ಹೇಳಿ ಮೆಲ್ಲ ಒಳಗೆ ಅಡ್ಗೆಕೋಣೆಗೆ ಅತ್ತೆನಕ್ಕಲೆ ಹೋದೆ. ಅಷ್ಟಾಕನ ಅತ್ತೆದ್ ಹುಳಿರಾಮಾಯಣ ಸುರಾತ್.. ” “ಏನ್ ನೆ ಗೂಡೆ, ಕಾಂಬಕೆ ಇಲ್ಲೆ. ರಜೆಲಿದ್ದರು ಮನೆಗೆ ಬಾಕೆ ಆದುಲೆಲಾ ನಿಂಗೆ. ಹೋ..ಈಗ ಬಾವ ಬಂದುಟುತ ಹೇಳಿ ಇತ್ತ ಸವಾರಿ ಬಂದದ”ತ ಕೇಳ್ದೊ. ‘ನೀವು ಪಸ್ಟ್ ನಾಳೆ ಬಾವನ ಬತ್೯ಡೆಗೆ ಗಮ್ಮತ್ ಎಂತರ ಮಾಡ್ದುತ ಹೇಳಿ’ತ
ಮೆಲ್ಲ ಮಾತ್ ತಪ್ಪುಸಿದೆ. “ಅವನ ಬುಡು. ಅವನ ಆ ಪೇಟೆನ ಫ್ರೆಂಡ್ ಗಳ ದೊಂಡೆಲಿ ಈ ಹುಳಿಮೆಣ್ಸ್ ಲಿ ಮಾಡ್ದ ಗಮ್ಮತ್ ಇಳೆಕಿಲೆತ” ಹೇಳ್ದೊ. ನೋಡ ಏನಾರ್ ಪ್ಲಾನ್ ಮಾಡೊಮುತ ನೆನ್ಸಿಕಂಡ್ ನಮ್ಮ ತಾತನಕ್ಕಲೆ ಬಂದೆ. ತಾತ ಎಲೆಡಿಕೆ ಗುದ್ದಿಕಂಡಿದ್ದವು, ‘ಬಾನೆ ಪುಳ್ಳಿ’ತ ಹೆಗ್ಲಿಗೆ ಎಡ್೯ ತಟ್ಟಿದೊ.ಅವರೊಟ್ಟಿಗೆ ನಾಕ್ ಲೊಟ್ಟೆ ಬುಟ್ಟು, ಹಲ್ಲಿಲ್ಲದ ಬಾಯಿಲಿ ಚೂರು ನೆಗೆ ಬರ್ವಾಂಗೆ ನಾಲ್ಕ್ ಮಾತಾಡಿ, ಹಿಂದಕ್ಕೆ ಅತ್ತೆನಕ್ಕಲೆ ಬಂದ್ “ನಾಳೆ ಕತ್ತಲೆಗೆ ಒಂದು ಚೆಟ್ಟಿಲಿ ಕಲ್ತಪ್ಪ ಮಾಡಿಸಿ. ಲಾಯಿಕ್ ಒಗ್ರಣೆ ಹಾಕಿ, ಕರುಂ ಕುರುಂ ಆಗಿರೊಕು.ಮತೆ ಫ್ರಿಜ್ ಲಿ ಇದ್ದ ಬಚ್ಚಂಗಾಯಿನ ಆ ಹೈದಂಗಳಿಗೆ ಕೊಟ್ಟ್ ಚೋಲಿನ ತೆಗ್ದಿಸಿತ ಹೇಳಿ ನಾ ಮನೆಗೆ ಹೊರ್ಟೆ. ಹಂಗೆ ತೋಟಲಿ ಹೋಕನ ಆಚೆಮನೆ ಸಣಪ ನಾ ಬಾದರ ನೋಡಿ ಕೈಲಿದ್ದ ಬಕೆಟ್ ನ ಮೆಲ್ಲ ಮೆಲ್ಲ ಬಾಳೆ ಬುಡದ ಸೆರೆಗೆ ದೂಡ್ದು ಕಂಡತ್. “ಎಂತ ಸಣಪ ಬಾರಿ ಹೆದ್ರಿ ಹೆದ್ರಿ ಬಾಳೆಬುಡಕ್ಕೆ ಹೋದರೆಲ”ತ ಕೇಳ್ಯಾಕನ,ಸಣಪನ ಮಗ್ಳ್ , ನಮ್ಮ ಸಣ್ಣತಂಗೆ ಹಟ್ಟಿಂದ ಬಂದ್ “ಪೊಪ್ಪಂಗೆ ಅದೆ ಕೆಲ್ಸ ಅಕ್ಕಾ. ಬೀಜ ಹೆಕಿ೯ಕೆ ಹೋದು, ಬಾಳೆ ಬುಡಲಿ ಹಣ್ಣ್ ತಿಂಟು೯ದು ,ಕತ್ತಲೆ ಆಕನ ಮೂರ್, ನಾಕ್ ಕುಪ್ಪಿಲಿ ತುಂಬುಸಿ ರಡಿಯಾದೆ. ಮತ್ತೆ ಒಂದು ವಾರಕ್ಕೆ ತೊಂದರೆ ಇಲ್ಲೆ.ನಾಕೈದ್ ಕುಪ್ಪಿಗ ಬಂದ್ ಬಿದ್ದೊಳೊ”ತ ಬಾಯಿ ಬೊಡ್ಕಂತ್. ಅಷ್ಟಾಕನ ಸಣಪ ಮಗಳಿಗೆ ಪರ್ಂಚಿಕೆ ಸುರುಮಾಡ್ದೊ. ಇವರ ಲಡಾಯಿ ಕೇಳ್ಸಿಕಂಡ್ ನಾ ಸೀದಾ ಮನೆಗೆ ಹೋದೆ.
ಮಾನೆ೯ ದಿನ ಹಿಂಬೊತಿಗೆ ಆಚೆಕರೆಗೆ ಹೋದೆ. ಅತ್ತೆನೊಟ್ಟಿಗೆ ನಿನ್ನೆ ಹೇಳ್ದ್ ಎಲ್ಲಾ ರೆಡಿ ಆವ್ಟಾತ ಕೇಳ್ಕನ, ಕಲ್ತಪ ಹೊಯ್ದ್ ಇಸಿದ್ ಒಲೆಲಿ ಉಟ್ಟು ನೋಡಿಕ. ಬಚ್ಚಂಗಾಯಿ ಚೋಲಿನ ಸಣ್ಣಕೆ ಕೊಯ್ದಿಸ್.ನಾ ತಾತನ ಮೀಸಿದ್ ಬನ್ನೆತ ಹೋದೊ.
ನಾ ಚೋಲಿನ ಸಣ್ಣಕೆ ಕೊಯ್ದ್ ಒಗ್ರಣೆ ಹಾಕಿ ನನ್ನದೇ ಒಂದು ಪಾಕಲಿ ಪಲ್ಯ ಮಾಡಿಸಿದೆ. ಮತೆ ಅತ್ತೆ ಬಂದ್ ಟೊಮೆಟೊ ತಿಳಿಸಾರ್ ಮಾಡಿಸಿದೊ. ಅಷ್ಟಾಕನ ಸಣಪನ ನೆಂಪಾತ್. ಮೆಲ್ಲ ಸಣಪನಲ್ಲಿಗೆ ಹೋಕನ ನಮ್ಮ ಸಣಪ ಎಂಟ್ ಗಂಟೆಗೆ ಒಂದು ಕುಪ್ಪಿ ಖಾಲಿ ಮಾಡಿ ಮಂಚಲಿ ಕಂಬಯಿ ಹೊದ್ದ್ ಕಂಕಣಿ ಬಿದ್ದೊಳೊ.
ನಾ ತಂಗೆನ ಕರ್ಕಂಡ್ ಬಾಳೆಬುಡಲಿ ಹೋಗಿ,ಮತೆ ಇಬ್ಬೊರು ಕುಪ್ಪಿ ಹುಡ್ಕಿಕೆ ಸುರುಮಾಡ್ದೊ. ಸುಮಾರೊತ್ತು ಆದಮೇಲೆ ಕಮ್ಮುಂದೈ ಗುಂಡಿಲಿ ಕೊಕ್ಕದ ಸೊಪ್ಪುನ ಲಾಯಿಕ್ ಮುಚ್ಚಿ 2 ಕುಪ್ಪಿ ಬೀಜದ ಸರಾಯಿ ತುಂಬುಸಿ ಇಸಿದ್ ಕಂಡತ್. ನಾವು ಒಂದು ಕುಪ್ಪಿನ ಅಲ್ಲಿಂದ ತೆಗ್ದ್, ಹಿಡ್ಕಂಡ್ ಆಚೆಕರೆ ಮಾವನಲ್ಲಿಗೆ ಪದ್ರಾಡ್ ಹಾಕಿದೊ. ಅಲ್ಲಿ ಮೆಲ್ಲ ಹಿಂದೆಮೈ ಬಾಗ್ಲ್ ಲಿ ಹೋಗಿ ಸರಾಯಿ ಕುಪ್ಪಿನ ಬೆಸಗೆ ಮೂಲೆಲಿ ಇಸಿಬುಟ್ಟ್ ಅತ್ತೆನೊಟ್ಟಿಗೆ ನಮ್ಮಕಥೆನ ಹೇಳ್ದೊ.
ರಾತ್ರೆ ಗಂಟೆ ಎಂಟುವರೆ ಆಕನ ಬಾವಂಗೆ ಸರ್ಪ್ರೈಸ್ ಕೊಡೊಮುತ ತಂಗೆ ಸಣ್ಣ ಮರದ ಕುಚಿ೯ ತಂದಿಸಿತ್, ನಾ ಬಾಳೆಲೆಲಿ ಕಲ್ತಪನ ಹಾಕಿ ತಂದ್ ಅವನೊಟ್ಟಿಗೆ “ಕೇಕ್ ಕಟ್ ಮಾಡಿಯ ಬಾವ”ತ ಹೇಳ್ದೆ. ಕೇಕ್(ಕಲ್ತಪ) ಕೊಯ್ಯಕೆ ಒಂದು ಬೀಸ್ಕತ್ತಿನು ಕೊಟ್ಟಾತ್.ಅವನ ಸುತ್ತ ಮನೆವರ ,ಅವನ ಫ್ರೆಂಡ್ ಗಳ ನಿಲ್ಸಿ ಆತ್. ಕೇಕ್ ಕಟ್ ಮಾಡ್ತಿದ್ದಾಂಗೆ..ನಾ ದೇವ್ರ ಕೋಣೆಂದ ಊದುಬತ್ತಿ ತೊಟ್ಟೆನ ತಂದ್ ಅದರ ಉಗಿ೯,ಗಾಳಿ ತುಂಬುಸಿ ಕಾಲಡಿಗೆ ಇಸಿದಾಂಗೆ, ತಂಗೆ ಹಾರಿ ಮೆಟ್ಟಿತ್.ಅದ್ ಮೆಣ್ಸ್ ಪಟಾಕಿನಂಗೆ ಸೌಂಡ್ ಬಾತ್. ನಮ್ಮ ಬತ್೯ಡೇ ಹೈದಂಗೆ ಮೋರೆಲಿ ಸಣ್ಣಕೆ ನೆಗೆ ಬಾತ್. ಆ ಪೇಟೆ ಹೈದಂಗ ನಮ್ಮ ಕೋಲನ ವಿಚಿತ್ರಲಿ ನೋಡ್ತಿದ್ದೊ. ಎಲ್ಲವ್ಕು ಒಂದೊಂದು ತುಂಡು ಕಲ್ತಪ ಬಾಯಿಗೆ ಕೊಟ್ಟತ್. ಹೈದಂಗಳ ದೊಂಡೆಲಿ ಅದ್ ನುಂಗಿಯೇ ಹೋತಿತ್ಲೆ.
ಒಸಿ ಹೊತ್ತ್ ಕಳ್ದ್ ಊಟಕೆ ಕುದ್ದೊ. ಬಾಳೆಲೆಲಿ ಒಂದು ಮೂಲೆಗೆ ಉಪ್ಪನಕಾಯಿ, ಅನ್ನ, ಟೊಮೆಟಸಾರ್,ಸೋಂತೆಕಾಯಿ ಸಾರ್ ನು ಬಡ್ಸಿದೊ. ಮತ್ತೆ ಬೇಳೆ ಪಾಯ್ಸನು, ಬಚ್ಚಂಗಾಯಿ ಪಲ್ಯನು ಬಡ್ಸಿದ. ನಾವಾರ್ ತಿಂದೊ ಅಲ. ಹೈದಂಗ ಈ ಪಾಯ್ಸ, ಪಲ್ಯನ ಕಣ್ಣ್ ಮುಚ್ಚಿ, ಸಿಟ್ಟ್ ಲಿ ನುಂಗುತಿದ್ದೊ. ಅಕೇರಿಗೆ ಅತ್ತೆ ಬೆಸಗೆಂದ ಕುಪ್ಪಿ ತಂದ್ ಗ್ಲಾಸಿಗೆ ಚೂರ್ ಚೂರ್ ಹೊಯ್ದ್ ಕೊಟ್ಟ. ಒಬ್ಬ ಅದರ ಮೂಸಿದ್ “ಇದೇನ್ ಆಂಟಿ, ಈ ತರ ಸ್ಮೆಲ್ ಹೊಡಿತಿದೆ”ತ ಹೇಳ್ತ್. ಅಷ್ಟಾಕನ ನಮ್ಮ ತಾತ ” ಒಮ್ಮೆ ಕಣ್ಣ್ ಮುಚ್ಚಿ ಕುಡೆನಿ ಮಕ್ಕಳೆ..ಇದ್ಕೆ ‘ಗೋಂಕು’ ತ ಕರೆದು. ನಾವು ನಿಮ್ಮಾಂಗೆ ಇರ್ಕನ ಎಂತ ಕಾಯ್ಲೆ ಬಂದರೂ ಮೊದ್ದು ಇದುವೆ. ಒಂದು ಗ್ಲಾಸ್ ಕುಡ್ದರೆ ಸಾಕ್ ಯಾವ ರೋಗನು ಇಲ್ಲೆ. ಅದರ ಘಾಟ್ ಗೆ ಹಕ್ಕಲೆನವಂಗು ರೋಗ ಬಾತಿತ್ಲೆ. ಕುಡೆನಿಯ ಬಾರಿ ಲಾಯಿಕುಟ್ಟು”ತ ಹೇಳ್ದೊ. ಅವು ಮೂರು ಮೋರೆ ಮೋರೆ ನೋಡಿಕಂಡ್ ಕಣ್ಣ್, ಮೂಗು ಮುಚ್ಚಿ ಹೆಂಗಾರ್ ಕುಡ್ದೊ. ಊಟ ಆದಾಂಗೆ ಹೈದಂಗ ಕಣ್ಣ್ ಮುಚ್ಚಿ ಮುಚ್ಚಿ ಬುಡ್ದು, ಮಾಲಿಕಂಡ್ ಹೋಕೆ ಎಲ್ಲಾ ಸುರಾತ್. ಅತ್ತೆ ಬೇಗ ಮಂದ್ರಿ ಹಾಕಿದೊ.ಹಾಕಿದಾಂಗೆ ಹೋಗಿ ಉದ್ದಾಕೆ ಬಿದ್ದೊ. ಇತ್ತ ತಾತ, ಮಾವ, ಅತ್ತೆ, ನಮ್ಮ ಬತ್೯ಡೇ ಬಾಯ್ ಎಲ್ಲಾ ಸೇರಿಕಂಡ್ ನನ್ನ ಮತ್ತು ತಂಗೆನ ಹೊಗುಳ್ದೇ ಹೊಗುಳ್ದಲ.”ಹೆಂಗಾರ್ ನನ್ನ ಸ್ಟೇಟಸ್ ಒಳ್ಸಿದರಿ”ತ ಬಾವ ಕುಸಿಲಿ ಹೇಳ್ತ್.
ಮಾರಂದಿನ ಪೇಟೆ ಹೈದಂಗಳ ಕಣ್ಣ್ ಕೆಂಪಾಗಿ,ಮುಸುಂಡು ದಪ್ಪ ಆಗಿತ್ತ್. ಮತೆ ಚಿಂಟೆಲಿ ಕುದ್ದ್ ಕಂಡ್ ಬಾವನು, ಫ್ರೆಂಡ್ ಗಳು ಬತ್೯ಡೆ ಬಾರಿ ಗಮ್ಮತ್ ಆತಲತ ಮಾತಾಡಿಕಂಡ್ ,ನಮ್ಮ ಪೇಟೆಂದ ಈ ಹಳ್ಳಿನ ಅನುಭವ ಲಾಯ್ಕಿತ್ತ್ ತ
ನೆನ್ನೆನ ಗೋಂಕುನ ರುಚಿನ ಪೆಪ್ಸಿ ಕುಡ್ದರು ಸಿಕ್ಕಿಕಿಲೆತ ಹೇಳಿಕಂಡ್ ಬತ್೯ಡೇ ಫೋಟೊಗಳ ಸ್ಟೇಟಸ್ ಹಾಕಿಕೆ ರೇಂಜ್ ಹುಡ್ಕಿಕಂಡ್ ಬೀಜದ ಮರಲಿ ಪೂರ ನೇಲಿಕೆ ಸುರುಮಾಡ್ದೊ…
ಅಂತು ಈ ಲಾಕ್ ಡೌನ್ಂದಾಗಿ ಹೆಂಗಾರ್ ಬಾವನ ಬತ್೯ಡೇ ಬಾರಿ ಲಾಯಿಕ್ ಲಿ ಸಣ್ಣ ಮಟ್ಟಿಗೆ ಸುದಾರ್ಸಿದೊತ ಎಲ್ಲವ್ಕು ಕುಸಿ ಆತ್….

✍️ *ಧನ್ಯಶ್ರೀ ಕಳಗಿ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.