Breaking News

ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲದ ಆಶ್ರಯದಲ್ಲಿ ಕಥಾ ಮತ್ತು ಕವನ ಸ್ಪರ್ಧೆ

Advt_Headding_Middle
Advt_Headding_Middle

 

ನೇಸರ ಯುವಕ ಮಂಡಲ ಕುಂಡಡ್ಕ-ಮುಕ್ಕೂರು ಇದರ ಆಶ್ರಯದಲ್ಲಿ ದ.ಕ. ಜಿಲ್ಲೆ ಮತ್ತು ಮಡಿಕೇರಿ ತಾಲೂಕು ವ್ಯಾಪ್ತಿಗೆ ಒಳಪಟ್ಟು ಕಥೆ ಮತ್ತು ಕವನ ಸ್ಪರ್ಧೆ ಏರ್ಪಡಿಸಿದೆ.

ಕಥೆ ಮತ್ತು ಕವನವನ್ನು ವಾಟ್ಸಪ್ ಅಥವಾ ಇಮೇಲ್ ಮೂಲಕ ಕಳುಹಿಸಬಹುದು. ಮೇ.3 ಕೊನೆಯ ದಿನವಾಗಿದೆ. ನಿಯಮಗಳಿಗೆ ತಕ್ಕಂತೆ ಕಥೆ, ಕವನ ಕಳುಹಿಸಬೇಕು.

ನಿಯಮಗಳು :

ಕಥೆ, ಕವನ ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು.

ಕಥೆ 750 ಪದಗಳ ಒಳಗಿರಬೇಕು. ಕವನ 20 ಸಾಲಿನ ಮಿತಿಯಲ್ಲಿರಬೇಕು.

ಬಾಗವಹಿಸಲು ಆಸಕ್ತಿ ಇರುವವರಿಗೆ ಮುಕ್ತ ಅವಕಾಶ

ಕಾಗದದ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು ಅದರ ಪೋಟೋ ತೆಗೆದು ವಾಟ್ಸಪ್ ಸಂಖ್ಯೆಗೆ ಕಳುಹಿಸಿ ಅಥವಾ ಯೂನಿಕೋಡ್, ನುಡಿ, ಬರಹ ತಂತ್ರಾಂಶದಲ್ಲಿ ಸಿದ್ದಪಡಿಸಿ ಇಮೇಲ್ ಮೂಲಕವೂ ಕಳುಹಿಸಬಹುದು.

ಸ್ಪರ್ದೆಗೆ ಕಳುಹಿಸುವ ಕಥೆ, ಕವನ ಬೇರೆಲ್ಲೂ ಪ್ರಕಟವಾಗಿರಬಾರದು.

ಒಬ್ಬರು ಒಂದು ಕಥೆ ಕಳಿಸಬಹುದು

ಒಬ್ಬರು ಒಂದು ಕವನ ಕಳುಹಿಸಬಹುದು.

ನೇಸರ ಯುವಕ ಮಂಡಲದ ವತಿಯಿಂದ ಮುಂದೆ ನಡೆಸಲ್ಪಡುವ ಕಾರ್ಯಕ್ರಮದ ದಿನದಂದು ತೀರ್ಪುಗಾರರಿಂದ ಆಯ್ಕೆಯಾದ  ಅತ್ಯುತ್ತಮ ಮೂರು ಕಥೆ ಮತ್ತು ಕವನಗಳಿಗೆ ಬಹುಮಾನ ನೀಡಲಾಗುವುದು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಶಂಸ ಪತ್ರ ನೀಡಲಾಗುವುದು. ಈ ಬಗ್ಗೆ ದಿನಾಂಕ ಹಾಗೂ ವಿಜೇತರ ವಿವರ ತಿಳಿಸಲಾಗುವುದು.

ಕಥೆ ಮತ್ತು ಕವನ ಕಳುಹಿಸುವವರು ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ಕಳುಹಿಸಬೇಕು.

ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಮಡಿಕೇರಿ
ತಾಲೂಕಿನವರಿಗೆ ಮಾತ್ರ ಅವಕಾಶ

ಇಮೇಲ್: [email protected]

ವಾಟ್ಸಪ್ ನಂಬರ್: 9740189529

ತೀರ್ಪುಗಾರರ ತೀರ್ಮಾನವೇ ಅಂತಿಮ.

ಕಥೆ ಮತ್ತು ಕವನ ಕಳುಹಿಸಲು 3 ಮೇ 2020 ಕೊನೆಯ ದಿನವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.