ಸೀಲ್ ಡೌನ್ ಆಗಿರುವ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ಸಿಕ್ಕಿಲ್ಲ: ಮನೆಯವರ ಅಳಲು

Advt_Headding_Middle
Advt_Headding_Middle

ಕೊರೋನಾ ಪಾಸಿಟಿವ್ ಬಂದ ಮಹಿಳೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಂಗಳೂರು ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆ ಪೂರ್ಣವಾಗಿ ಸೀಲ್ ಡೌನ್ ಆಗಿದ್ದು ಆಸ್ಪತ್ರೆಯ ಒಳಗಿರುವ ರೋಗಿಗಳಿಗೆ ಮತ್ತವರ ಮನೆಯವರಿಗೆ ಹೊರಗೆ ಬರಲು ಬಿಡುತ್ತಿಲ್ಲ . ಆಸ್ಪತ್ರೆಯ ಆವರಣದಲ್ಲಿದ್ದ ಕ್ಯಾಂಟೀನ್ ಕೂಡ ಮುಚ್ಚಲ್ಪಟ್ಟಿದೆ. ಆದರೆ ರೋಗಿಗಳಿಗೆ ಮತ್ತವರ ಮನೆಯವರಿಗೆ ಹೊತ್ತು ಹೊತ್ತಿನ ಆಹಾರದ ವ್ಯವಸ್ಥೆ ಜಿಲ್ಲಾಡಳಿತ ಮಾಡಿಲ್ಲ ಎಂಬ ದೂರು ಕೇಳಿ ಬಂದಿದೆ.

ಸುಳ್ಯ ತಾಲೂಕು ಏನೆಕಲ್ಲು ಗ್ರಾಮದ ಕೋಟಿಗೌಡನ ಮನೆ ದಮಯಂತಿ ಎಂಬವರು ಮೆದುಳಿನ ರಕ್ತಸ್ರಾವದಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಫಸ್ಟ್‌ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮಗ ಜಯಪ್ರಕಾಶ್ ಅವರ ಜತೆಗಿದ್ದಾರೆ.
‘ ಆಸ್ಪತ್ರೆ ಇವತ್ತಿನಿಂದ ಸೀಲ್ ಡೌನ್ ಆಗಿದೆ. ನಮ್ಮನ್ನು ಹೊರಗೆ ಹೋಗಲು ಬಿಡುತ್ತಿಲ್ಲ. ರೋಗಿಗಳಿಗೆ ಮತ್ತು ನಮಗೆ ಸರಿಯಾಗಿ ಆಹಾರ ವಿತರಣೆ ಆಗುತ್ತಿಲ್ಲ. ಇವತ್ತು ಬೆಳಗ್ಗೆ ತಿಂಡಿ ಬಂದಿದೆ. ಚಹಾ ಬಂದಿಲ್ಲ. ಮಧ್ಯಾಹ್ನ ಇಷ್ಟು ಹೊತ್ತಾದರೂ ಊಟ ಬಂದಿಲ್ಲ. ರೋಗಿಗಳಿಗೆ ಆಹಾರ ಕೊಡದಿದ್ದರೆ ಸಮಸ್ಯೆ ಆಗುತ್ತದೆ. ಸುಮಾರು ನೂರರಷ್ಟು ಜನ ನಾವಿದ್ದೇವೆ. ಎಷ್ಟೊತ್ತಿಗೆ ಊಟ ಬರುತ್ತದೆಂದೂ ಹೇಳುತ್ತಿಲ್ಲ ” ಎಂದು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಆಹಾರ ವ್ಯವಸ್ಥೆ ಮಾಡಬೇಕಾಗಿದೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.