Breaking News

ಕನಕಮಜಲು ಗ್ರಾ.ಪಂ.ಗೆ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ

Advt_Headding_Middle
Advt_Headding_Middle

ಪಂಚಾಯತ್ ಪುರಸ್ಕಾರ್ 2020ರ ಸಾಲಿನ ಪ್ರಗತಿ ಆಧರಿಸಿ ಕೇಂದ್ರ ಪುರಸ್ಕೃತ ದೀನದಯಾಳ್ ಪಂಚಾಯತಿ ಸಶಸ್ತೀಕರಣ ಪುರಸ್ಕಾರವಾದ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ, ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಪುರಸ್ಕಾರವು ಕನಕಮಜಲು ಗ್ರಾ.ಪಂ.ಗೆ ಲಭಿಸಿದೆ.
ಕರ್ನಾಟಕ ರಾಜ್ಯದ ಮೂರು ಗ್ರಾಮ ಪಂಚಾಯತಿಗಳಲ್ಲಿ ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳ ಪೈಕಿ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗ್ರಾಮ ಸಭೆ ಪುರಸ್ಕಾರಕ್ಕೆ ಕನಕಮಜಲು ಗ್ರಾ.ಪಂ. ಆಯ್ಕೆಯಾಗಿತ್ತು. ಈ ಪುರಸ್ಕಾರಕ್ಕೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾ.ಪಂ., ಮಂಗಳೂರು ತಾಲೂಕಿನ ಮಣ್ಣಬೆಟ್ಟು ಗ್ರಾ.ಪಂ.ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳೂರು ಗ್ರಾ.ಪಂ. ಈ ಹಿಂದೆ ಆಯ್ಕೆಯಾಗಿತ್ತು. ಈ ಕುರಿತು ರಾಷ್ಟ್ರ ಮಟ್ಟದ ಕ್ಷೇತ್ರ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ನಿರ್ದೇಶಕರುಗಳು ಕನಕಮಜಲು ಗ್ರಾ.ಪಂ.ಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಿ ತಪಾಸಣೆ ನಡೆಸಿದ್ದರು.
ಇದೀಗ ಎ.24ರಂದು ರಾಷ್ಟ್ರೀಯ
ಪಂಚಾಯತ್ ರಾಜ್ ದಿನದಂದು ಈ ಪುರಸ್ಕಾರ ಲಭಿಸಿದೆ. ದೇಶದಾದ್ಯಂತ ಗ್ರಾಮ ಸಭೆಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡ ಒಟ್ಟು 20 ಗ್ರಾ. ಪಂ.ಗಳಿಗೆ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಈ ಮೂಲಕ ಗ್ರಾಮ ಸಭೆಗಳ ಮಹತ್ವವನ್ನು ಸಾಮಾನ್ಯ ನಾಗರೀಕರಿಗೆ ತಿಳಿಸುವುದರೊಂದಿಗೆ ಗ್ರಾಮ ಸಭೆಗಳಿಂದಾಗುವ ಅನುದಾನ, ಕಾರ್ಯಗಳು ಹಾಗೂ ಅಧಿಕಾರಿಗಳ ಪಾತ್ರವನ್ನು ಅರಿಯುವುದರೊಂದಿಗೆ ಕಾರ್ಯವೈಖರಿಯನ್ನು ಗುರುತಿಸಬಹುದಾಗಿದೆ. ಸದರಿ ಈ ಪ್ರಶಸ್ತಿಯು ರೂ. 10 ಲಕ್ಷಗಳ ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.