ಹರಿಹರ ಪಲ್ಲತಡ್ಕ : ಅನಧಿಕೃತ ತರಕಾರಿ ಸ್ಟಾಕ್ ರೂಂ ನ ಬಗ್ಗೆ ಕೊರೋನಾ ಕಾರ್ಯಪಡೆಯ ಪ್ರಶ್ನೆ

Advt_Headding_Middle
Advt_Headding_Middle

 

ಕಾರ್ಯಪಡೆಯವರಿಗೆ ನಿಂದಿಸಿದರೆಂಬ ಆರೋಪ : ದಿನೇಶ್ ಎಂಬವರ ಮೇಲೆ ಪೊಲೀಸ್ ದೂರು

ಕೊಲ್ಲಮೊಗ್ರು ಗ್ರಾಮದ ತುಪ್ಪಟ ದಿನೇಶ ಎಂಬವರು ಲಾಕ್ ಡೌನ್ ಘೋಷಣೆ ಆದಲ್ಲಿಂದ ತನ್ನ ಜಿತೋ ವಾಹನದಲ್ಲಿ ಹಾಸನದಿಂದ ತರಕಾರಿ ತರುತಿದ್ದು, ಹೀಗೆ ತಂದ ತರಕಾರಿಯನ್ನು ಕೊಲ್ಲಮೊಗ್ರು, ಕಲ್ಮಕಾರು, ಹರಿಹರದ ಕೆಲ ತರಕಾರಿ ಅಂಗಡಿಗಳಿಗೆ ಇಳಿಸುತಿದ್ದರೆನ್ನಲಾಗಿದೆ. ಉಳಿದ ತರಕಾರಿಯನ್ನು ಹರಿಹರ ಪಲ್ಲತಡ್ಕದ ಕಾಂಪ್ಲೆಕ್ಸ್ ಒಂದರಲ್ಲಿ ರೂಂ ಪಡೆದು ತರಕಾರಿ ಸ್ಟಾಕ್ ಇಡುತಿದ್ದರೆನ್ನಾಗಿದೆ. ಈ ಬಗ್ಗೆ ಹರಿಹರ ಗ್ರಾ.ಪಂ ಗೆ ಯಾವುದೇ ಮಾಹಿತಿ ನೀಡಿರಲಿಲ್ಲವೆಂದು ತಿಳಿದು ಬಂದಿದೆ. ಏ. 22 ರಂದು ಹರಿಹರ ಗ್ರಾ.ಪಂ ನ ಕೊರೋನಾ ಗ್ರಾಮ ಪಡೆ ಕರ್ತವ್ಯದಲ್ಲಿರುವಾಗ ದಿನೇಶ್ ತನ್ನ ಸ್ಟಾಕ್ ರೂಂನಿಂದ ತರಕಾರಿಯನ್ನು ತನ್ನ ವಾಹನಕ್ಕೆ ತುಂಬಿಸುತಿದ್ದು ಈ ಕೊರೋನಾ ಕಾರ್ಯಪಡೆ ರೂಂ ಬಗ್ಗೆ ವಿಚಾರಿಸಿದ್ದು ಕ್ರಮದಂತೆ ಪಂಚಾಯತ್ ನಿಂದ ಅನುಮತಿ ಪಡೆಯಬೇಕೆಂದೂ, ಸಧ್ಯಕ್ಕೆ ಇಲ್ಲಿ ತರಕಾರಿ ಸ್ಟಾಕ್ ಇಡದಂತೆ ಸೂಚಿಸಿದ್ದರು. ಈ ವಿಚಾರ ಇಲ್ಲಿಗೆ ಮುಗಿದಿತ್ತು.
ಆ ಬಳಿಕ ಹರಿಹರ ಪಂಚಾಯತ್ ಸಿಬ್ಬಂದಿ ಪ್ರಿಯ ಕಲ್ಲೇಮಠ ಮತ್ತು ಆಶಾ ಕಾರ್ಯಕರ್ತೆ ಪುಷ್ಪಾವತಿ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಕೊಲ್ಲಮೊಗ್ರು ಕಟ್ಟ ಗೋವಿಂದ ನಗರದಲ್ಲಿ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸುತಿದ್ದರೆಂದೂ ಈ ವೇಳೆ ಅಲ್ಲಿಗೆ ಆಗಮಿಸಿದ ದಿನೇಶ್ ಅವರು ಕೊರೋನಾ ಕಾರ್ಯಪಡೆಯ ಕರ್ತವ್ಯನಿರತ ಪ್ರಿಯ ಹಾಗೂ ಪುಷ್ಪಾವತಿ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡು ಕೆಟ್ಟ ಶಬ್ದಗಳಿಂದ ಬೈದರೆನ್ನಲಾಗಿದೆ. ಈ ಬಗ್ಗೆ ಹರಿಹರ ಪಿಡಿಒ ಪ್ರೇಮ್ ಸಿಂಗ್ ಸುಬ್ರಹ್ಮಣ್ಯ ಠಾಣೆಗೆ ತಮ್ಮ ಸಿಬ್ಬಂದಿ ಹಾಗೂ ಕೊರೋನಾ ಕಾರ್ಯಪಡೆಯ ಕರ್ತವ್ಯಕ್ಕೆ ತೊಂದರೆ ನೀಡಿರುವ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದಿನೇಶ್ ಅವರನ್ನು ಕರೆದು ಎಚ್ಚರಿಕೆ ನೀಡಿ ದಂಡ ಕಟ್ಟಿಸಿ ಮುಚ್ಚಳಿಕೆ ಬರೆಸಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.